ETV Bharat / sports

ಕೋವಿಡ್​-19 ಹೀರೋಗಳಿಗೆ ಗೌರವ ಸಲ್ಲಿಸಲು ಜರ್ಸಿಯಲ್ಲಿ ಹೆಸರು ಬದಲಿಸಿಕೊಂಡ ಎಬಿಡಿ, ಕೊಹ್ಲಿ

author img

By

Published : Sep 21, 2020, 5:47 PM IST

ಎಬಿಡಿ ವಿಲಿಯರ್ಸ್​ ಪಾರಿತೋಷ್ ಪಂತ್ ಎಂಬ ಹೆಸರಿರುವ ಹಾಗೂ ವಿರಾಟ್​ ಕೊಹ್ಲಿ ಸಿಮ್ರಾನ್​ಜೀತ್​ ಸಿಂಗ್​ ಎಂಬ ಕೋವಿಡ್​ ಹೀರೋನ ಹೆಸರಿರುವ ಜರ್ಸಿ ತೊಡಲಿದ್ದಾರೆ. ಜೊತೆಗೆ ಈ ಜರ್ಸಿ ತೊಟ್ಟಿರುವ ಫೋಟೋವನ್ನೇ ಈ ಇಬ್ಬರು ತಮ್ಮ ಟ್ವಿಟರ್​ನಲ್ಲಿ ಪ್ರೊಫೈಲ್ ಫೋಟೋ ಹಾಗೂ ಪ್ರೊಫೈಲ್​ ಹೆಸರಾಗಿ ಕೂಡ ಬದಲಾಯಿಸಿಕೊಂಡು ಗೌರವ ಸೂಚಿಸಿದ್ದಾರೆ..

ರಾಯಲ್​ ಚಾಲೆಂಜರ್ಸ್​ ಬೆಂಗಳೂರು
ವಿರಾಟ್​ - ಎಬಿ ಡಿ ವಿಲಿಯರ್ಸ್​

ದುಬೈ: ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ಹಾಗೂ ಸ್ಫೋಟಕ ಬ್ಯಾಟ್ಸ್​ಮನ್​ ಎಬಿಡಿ ವಿಲಿಯರ್ಸ್ ಸನ್​ರೈಸರ್ಸ್​ ವಿರುದ್ಧದ ಪಂದ್ಯದ ವೇಳೆ ಕೋವಿಡ್​ 19 ವಿರುದ್ಧ ಹೋರಾಟ ನಡೆಸುತ್ತಿರುವವರ ಹೆಸರಿರುವ ಜರ್ಸಿ ತೊಟ್ಟು ಕಾಣಿಸಿಕೊಳ್ಳಲಿದ್ದಾರೆ.

ಸೋಮವಾರ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆರ್​ಸಿಬಿ ಸನ್​ರೈಸರ್ಸ್​ ಹೈದರಾಬಾದ್​ ತನ್ನ ಐಪಿಎಲ್ ಅಭಿಯಾನ ಆರಂಭಿಸಲಿದೆ. ಈ ವೇಳೆ ತಮ್ಮ ಹೆಸರಿನ ಜರ್ಸಿಯ ಬದಲು ಕೋವಿಡ್-19 ಹೀರೋಗಳ ಹೆಸರಿರುವ ಜರ್ಸಿ ತೊಟ್ಟು ಆಡಲಿದ್ದಾರೆ ಎಂದು ತಿಳಿದು ಬಂದಿದೆ. ಈ ವಿಚಾರವನ್ನು ಈ ಇಬ್ಬರು ಆಟಗಾರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ

ಎಬಿಡಿ ವಿಲಿಯರ್ಸ್​ ಪಾರಿತೋಷ್ ಪಂತ್ ಎಂಬ ಹೆಸರಿರುವ ಹಾಗೂ ವಿರಾಟ್​ ಕೊಹ್ಲಿ ಸಿಮ್ರಾನ್​ಜೀತ್​ ಸಿಂಗ್​ ಎಂಬ ಕೋವಿಡ್​ ಹೀರೋನ ಹೆಸರಿರುವ ಜರ್ಸಿ ತೊಡಲಿದ್ದಾರೆ. ಜೊತೆಗೆ ಈ ಜರ್ಸಿ ತೊಟ್ಟಿರುವ ಫೋಟೋವನ್ನೇ ಈ ಇಬ್ಬರು ತಮ್ಮ ಟ್ವಿಟರ್​ನಲ್ಲಿ ಪ್ರೊಫೈಲ್ ಫೋಟೋ ಹಾಗೂ ಪ್ರೊಫೈಲ್​ ಹೆಸರಾಗಿ ಕೂಡ ಬದಲಾಯಿಸಿಕೊಂಡು ಗೌರವ ಸೂಚಿಸಿದ್ದಾರೆ.

'ಪೂಜಾ ಅವರೊಂದಿಗೆ 'ಪ್ರಾಜೆಕ್ಟ್ ಫೀಡಿಂಗ್ ಫ್ರಮ್ ಫಾರ್' ಎಂಬ ಯೋಜನೆಯ ಮೂಲಕ ಲಾಕ್​ಡೌನ್​ ಸಮಯದಲ್ಲಿ ಸಾಕಷ್ಟು ನಿರ್ಗತಿಕರಿಗೆ ಆಹಾರವನ್ನು ಪೂರೈಸಿದ ಪಾರಿತೋಷ್​ ಅವರಿಗೆ ವಂದಿಸುತ್ತೇನೆ. ನಾನು ಈ ಆವೃತ್ತಿಯಲ್ಲಿ ಅವರ ಹೆಸರಿರುವ ಜರ್ಸಿಯನ್ನು ಧರಿಸಿ ಆಡುವ ಮೂಲಕ ಅವರ ಸವಾಲಿನ ಮನೋಭಾವವನ್ನು ಪ್ರಶಂಸಿಸುತ್ತೇನೆ' ಎಂದು ಮಿಸ್ಟರ್​ 360 ಖ್ಯಾತಿಯ ವಿಲಿಯರ್ಸ್ ಸಾಮಾಜಿಕ ಮಾಧ್ಯಮದ ಪೋಸ್ಟ್​ನಲ್ಲಿ​ ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.