ಪರ್ತ್: ಇದು ಬಹುಶಃ ಏಕದಿನ ಕ್ರಿಕೆಟ್ ಒಂದರ ಮಹಾಪತನ ಎನ್ನಬಹುದೇನೋ..?! ತಂಡದ ಗೆಲುವಿಗೆ ಇನ್ನೇನು ಐದು ರನ್ಗಳ ಅಗತ್ಯವಿತ್ತು, ಅಷ್ಟೇ ಪ್ರಮಾಣದ ವಿಕೆಟ್ ಸಹ ಉಳಿದಿತ್ತು. ನಿರಾಯಾಸವಾಗಿ ಗೆದ್ದೇಬಿಡುತ್ತೇವೆ ಎನ್ನುವ ಅಚಲ ನಂಬಿಕೆಯಲ್ಲಿದ್ದ ಆ ತಂಡ ಒಂದು ರನ್ನಿನಿಂದ ಸೋತಿದೆ ಎಂದರೆ ನೀವು ನಂಬಲೇಬೇಕು.
ಹೌದು, ಕ್ರಿಕೆಟ್ ಇತಿಹಾಸದ ಬಹುದೊಡ್ಡ ಹೈಡ್ರಾಮಾ ಒಂದಕ್ಕೆ ಸಾಕ್ಷಿಯಾಗಿದ್ದು ಆಸ್ಟ್ರೇಲಿಯಾದ ಪರ್ತ್ ಮೈದಾನ. ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ ಟೂರ್ನಿಯೊಂದರಲ್ಲಿ ಈ ಪರಿಯ ನಾಟಕೀಯ ಫಲಿತಾಂಶ ಕಂಡುಬಂದಿದೆ.
-
"Victoria have won this game from absolutely nowhere!" #MarshCup | @MarshGlobal pic.twitter.com/FayTxdJdOb
— cricket.com.au (@cricketcomau) September 23, 2019 " class="align-text-top noRightClick twitterSection" data="
">"Victoria have won this game from absolutely nowhere!" #MarshCup | @MarshGlobal pic.twitter.com/FayTxdJdOb
— cricket.com.au (@cricketcomau) September 23, 2019"Victoria have won this game from absolutely nowhere!" #MarshCup | @MarshGlobal pic.twitter.com/FayTxdJdOb
— cricket.com.au (@cricketcomau) September 23, 2019
ಮೊದಲು ಬ್ಯಾಟ್ ಮಾಡಿದ್ದ ವಿಕ್ಟೋರಿಯಾ 47.5 ಓವರ್ನಲ್ಲಿ 185 ರನ್ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಟಾಸ್ಮೇನಿಯಾ ತಂಡ ಇನ್ನೇನು ಗೆಲುವಿನ ನಗೆ ಬೀರಬೇಕು ಎನ್ನುವಷ್ಟರಲ್ಲಿ ಸತತ ವಿಕೆಟ್ ಕಳೆದುಕೊಂಡು ಅನಿರೀಕ್ಷಿತ ಸೋಲನುಭವಿಸಿತು.
181 ರನ್ನಿಗೆ ಐದು ವಿಕೆಟ್ ಕಳೆದುಕೊಂಡಿದ್ದ ಟಾಸ್ಮೇನಿಯಾ ಇನ್ನು ಆರು ರನ್ ಗಳಿಸಿದ್ದರೆ ಸುಲಭ ಜಯ ಸಂಪಾದಿಸುತ್ತಿತ್ತು. ಆದರೆ ವಿಕ್ಟೋರಿಯಾ ತಂಡದ ಬಿಗುದಾಳಿಗೆ ನಿರಂತರ ವಿಕೆಟ್ ಉರುಳಿದವು.
ಜೇಮ್ಸ್ ಫಾಲ್ಕನರ್, ಗುರೀಂದರ್ ಸಂಧುರಂತಹ ಖ್ಯಾತ ಆಲ್ರೌಂಡರ್ಗಳಿದ್ದರೂ ಟಾಸ್ಮೇನಿಯಾ ತಂಡಕ್ಕೆ ಜಯ ದಕ್ಕಲಿಲ್ಲ. 39 ಓವರ್ನಲ್ಲಿ ಮೂರು ವಿಕೆಟ್ ಹಾಗೀ ನಲ್ವತ್ತನೇ ಓವರ್ನಲ್ಲಿ ಕೊನೆಯ ವಿಕೆಟ್ ಕಳೆದುಕೊಂಡು ಟಾಸ್ಮೇನಿಯಾ ರೋಚಕ ಸೋಲು ಕಂಡಿತು.
-
Chasing the bonus point left Tasmania with zero points. Incredible scenes as Victoria win the unwinnable game. You've got to see it to believe it! #MarshCup | @MarshGlobalhttps://t.co/TAboPWjU7F pic.twitter.com/Gt5g8i5jF5
— cricket.com.au (@cricketcomau) September 23, 2019 " class="align-text-top noRightClick twitterSection" data="
">Chasing the bonus point left Tasmania with zero points. Incredible scenes as Victoria win the unwinnable game. You've got to see it to believe it! #MarshCup | @MarshGlobalhttps://t.co/TAboPWjU7F pic.twitter.com/Gt5g8i5jF5
— cricket.com.au (@cricketcomau) September 23, 2019Chasing the bonus point left Tasmania with zero points. Incredible scenes as Victoria win the unwinnable game. You've got to see it to believe it! #MarshCup | @MarshGlobalhttps://t.co/TAboPWjU7F pic.twitter.com/Gt5g8i5jF5
— cricket.com.au (@cricketcomau) September 23, 2019
ಸಂಕ್ಷಿಪ್ತ ಸ್ಕೋರ್:
ವಿಕ್ಟೋರಿಯಾ: ಗ್ಲೆನ್ ಮ್ಯಾಕ್ಸ್ವೆಲ್ 34, ವಿಲ್ ಸದರ್ಲ್ಯಾಂಡ್ 53, ಮ್ಯಾಥ್ಯೂ ಶಾರ್ಟ್ 27
ನಥನ್ ಎಲಿಸ್ 3 ವಿಕೆಟ್, ಜಾಕ್ಸನ್ ಬರ್ಡ್ ಹಾಗೂ ಜೇಮ್ಸ್ ಫಾಲ್ಕನರ್ ತಲಾ 2 ವಿಕೆಟ್
ಟಾಸ್ಮೇನಿಯಾ: ಬೆನ್ ಮೆಕ್ಡರ್ಮಾರ್ಟ್ 78, ಜಾರ್ಜ್ ಬೇಲಿ 27, ಜೋರ್ಡಾನ್ ಸಿಲ್ಕ್ 22
ಜಾಕ್ಸನ್ ಕೋಲ್ಮ್ಯಾನ್ ಹಾಗೂ ಕ್ರಿಸ್ ಟ್ರೆಮೈನ್ ತಲಾ 4 ವಿಕೆಟ್, ವಿಲ್ ಸದರ್ಲ್ಯಾಂಡ್ 2 ವಿಕೆಟ್