ಪುಣೆ: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಸರಣಿಯಲ್ಲಿ ಅದ್ಭುತ ಬೌಲಿಂಗ್ ಮೂಲಕ 2-1ರಲ್ಲಿ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿದ ವೇಗಿ ಭುವನೇಶ್ವರ್ ಕುಮಾರ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡದಿರುವುದಕ್ಕೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಡೆದ ಕೊನೆಯ ಪಂದ್ಯವನ್ನು ಭಾರತ ಗೆಲ್ಲುವುದರೊಂದಿಗೆ ಏಕದಿನ ಸರಣಿಯನ್ನು 2-1ರಲ್ಲಿ ಭಾರತ ವಶಪಡಿಸಿಕೊಂಡಿತು. ಮೂರು ಪಂದ್ಯಗಳಿಂದ 219 ರನ್ಗಳಿಸಿದ್ದ ಜಾನಿ ಬೈರ್ಸ್ಟೋವ್ಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಆದರೆ ಇದಕ್ಕೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ 4 ವಿಕೆಟ್ ಪಡೆದಿದ್ದ ಶಾರ್ದುಲ್ ಠಾಕೂರ್ಗೆ ಪಂದ್ಯ ಶ್ರೇಷ್ಠ ಮತ್ತು ಸರಣಿಯಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಭುವನೇಶ್ವರ್ ಕುಮಾರ್ಗೆ ಸರಣಿ ಶ್ರೇಷ್ಠ ಪ್ರಶಸ್ತಿ ನೀಡಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
-
How was @BhuviOfficial not player of the series ???? #JustSaying #INDvsENG
— Michael Vaughan (@MichaelVaughan) March 28, 2021 " class="align-text-top noRightClick twitterSection" data="
">How was @BhuviOfficial not player of the series ???? #JustSaying #INDvsENG
— Michael Vaughan (@MichaelVaughan) March 28, 2021How was @BhuviOfficial not player of the series ???? #JustSaying #INDvsENG
— Michael Vaughan (@MichaelVaughan) March 28, 2021
ಕೊಹ್ಲಿ ಅಲ್ಲದೆ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಕೂಡ ಟ್ವಿಟರ್ನಲ್ಲಿ " ಭುವನೇಶ್ವರ್ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಆಯ್ಕೆಯಾಗದಿರುವುದು ಹೇಗೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಗಾಯದ ಕಾರಣ 2 ವರ್ಷದಿಂದ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕುಮಾರ್ ಇಂಗ್ಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಯಲ್ಲಿ ಕಮ್ಬ್ಯಾಕ್ ಮಾಡಿದ್ದರು. ಅವರು ಕೊನೆಯ ಪಂದ್ಯದಲ್ಲಿ ಪ್ರಮುಖ 3 ವಿಕೆಟ್ ಸೇರಿದಂತೆ 3 ಪಂದ್ಯಗಳ ಸರಣಿಯಲ್ಲಿ 6 ವಿಕೆಟ್ ಪಡೆದಿದ್ದರು. ವಿಕೆಟ್ ಅಷ್ಟೇ ಅಲ್ಲದೆ ಕೇವಲ 4.6 ರ ಎಕಾನಮಿಯಲ್ಲಿ 29 ಓವರ್ ಎಸೆಯುವ ಮೂಲಕ ಇಂಗ್ಲೆಂಡ್ ರನ್ಗಳಿಕೆಗೂ ಕಡಿವಾಣ ಹಾಕಿದ್ದರು.
ಇದನ್ನು ಓದಿ:ರಿಷಭ್ ಪಂತ್ ಭಾರತ ಕ್ರಿಕೆಟ್ನ ಭವಿಷ್ಯ, ಆತನಿಲ್ಲದ ತಂಡ ಊಹಿಸಲು ಅಸಾಧ್ಯ: ಇಯಾನ್ ಬೆಲ್