ETV Bharat / sports

15 ವರ್ಷಗಳ ಅಂಪೈರ್​ ವೃತ್ತಿಗೆ ಬ್ರೂಸ್ ಆಕ್ಸೆನ್‌ಫೋರ್ಡ್ ವಿದಾಯ - ಐಸಿಸಿ

2012ರಿಂದಲೂ ಐಸಿಸಿ ಅಂಪೈರ್‌ಗಳ ಎಲೀಟ್ ಪ್ಯಾನಲ್‌ನಲ್ಲಿದ್ದ ಆಕ್ಸೆನ್‌ಫೋರ್ಡ್,​ ಬ್ರಿಸ್ಬೇನ್​ನಲ್ಲಿ ನಡೆದ ಬಾರ್ಡರ್​-ಗಾವಸ್ಕರ್​ ಟ್ರೋಫಿಯ 4ನೇ ಟೆಸ್ಟ್ ನಲ್ಲಿ ಕೊನೆಯ ಬಾರಿ ಆಡಿದ್ದರು.​

Umpire Bruce Oxenford announces retirement
ಬ್ರೂಸ್ ಆಕ್ಸೆನ್‌ಫೋರ್ಡ್ ವಿದಾಯ
author img

By

Published : Jan 28, 2021, 8:10 PM IST

ದುಬೈ: ಕಳೆದ 15 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನ ಮೂರು ವಿಭಾಗದಲ್ಲೂ ಅಂಪೈರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆಸ್ಟ್ರೇಲಿಯಾ ಬ್ರೂಸ್ ಆಕ್ಸೆನ್‌ಫೋರ್ಡ್ ತಮ್ಮ ಅಂಪೈರ್​ ವೃತ್ತಿಗೆ ಗುರುವಾರ ವಿದಾಯ ಹೇಳಿದ್ದಾರೆ.

ಬ್ರೂಸ್ ಆಕ್ಸೆನ್‌ಫೋರ್ಡ್ ವಿದಾಯ
ಬ್ರೂಸ್ ಆಕ್ಸೆನ್‌ಫೋರ್ಡ್ ವಿದಾಯ

"ತೀರ್ಪುಗಾರನಾಗಿ ವೃತ್ತಿಜೀವನವನ್ನು ಒಮ್ಮೆ ಹಿಂತಿರುಗಿ ನೋಡಿದಾಗ, ನಾನು 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್​ ಆಗಿ ಪ್ರತಿನಿಧಿಸಿದ್ದೆ ಎಂಬುದನ್ನು ನನ್ನಿಂದಲೇ ನಂಬಲಾಗುತ್ತಿಲ್ಲ. ಅಂಪೈರಿಂಗ್ ಪಯಣ ಆರಂಭಿಸಿದಾಗ ಇಷ್ಟೊಂದು ಸುದೀರ್ಘ ವೃತ್ತಿಜೀವನವನ್ನು ಹೊಂದುವ ಭರವಸೆಯಿರಲಿಲ್ಲ ಎಂದು ಹೇಳಿರುವ ಆಕ್ಸೆನ್‌ಫೋರ್ಡ್, ಇಷ್ಟು ವರ್ಷಗಳ ಕಾಲ ತಮ್ಮ ಬೆಂಬಲಿಸಿದ ಐಸಿಸಿ ಮತ್ತು ಕ್ರಿಕೆಟ್ ಆಸ್ಟ್ರೇಲಿಯಾದ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

  • "I look back with pride at my international career as an umpire."

    Umpire Bruce Oxenford will retire from international cricket after an illustrious career that spanned over 15 years.

    — ICC (@ICC) January 28, 2021 " class="align-text-top noRightClick twitterSection" data=" ">

ಆಕ್ಸೆನ್‌ಫೋರ್ಡ್ 2006ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಗಬ್ಬಾದಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಅಂಪೈರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು. ಅವರು ಕಳೆದ 3 ಏಕದಿನ ವಿಶ್ವಕಪ್​ ಮತ್ತು 3 ಟಿ20 ವಿಶ್ವಕಪ್​ನಲ್ಲಿ ಅಂಪೈರ್​ ಆಗಿ ಕಾರ್ಯನಿರ್ವಹಿಸಿದ್ದಾರೆ. 2012 ಮತ್ತು 2014ರ ಮಹಿಳಾ ಟಿ20 ವಿಶ್ವಕಪ್​ನಲ್ಲೂ ಕಾರ್ಯನಿರ್ವಹಿಸಿದ್ದರು.

ಆಕ್ಸೆನ್‌ಫೋರ್ಡ್ 61 ಟೆಸ್ಟ್​, 97 ಏಕದಿನ ಹಾಗೂ 20 ಟಿ20 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಅವರು ಕ್ರಿಕೆಟ್ ಆಡುತ್ತಿದ್ದ ವೇಳೆ ಕ್ವೀನ್ಸ್​ಲ್ಯಾಂಡ್​ ಪರ 8 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದರು. ಕೆಳ ಕ್ರಮಾಂಕದ ಬ್ಯಾಟ್ಸ್​ಮನ್ ಮತ್ತು ಲೆಗ್​ ಸ್ಪಿನ್ನರ್​ ಆಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.