ಹೈದರಾಬಾದ್: ಭಾರತ ಟೆಸ್ಟ್ ತಂಡದ ನಾಯಕತ್ವ ಜವಾಬ್ದಾರಿಯನ್ನು ಕೊಹ್ಲಿ ವಹಿಸಿಕೊಂಡು ಇಂದಿಗೆ 6 ವರ್ಷ ತುಂಬಿದೆ. ಕೊಹ್ಲಿ ಆಸ್ಟ್ರೇಲಿಯಾದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ನಾಯಕತ್ವ ಜವಾಬ್ದಾರಿವಹಿಸಿಕೊಂಡಿದ್ದರು.
ಅಡಿಲೇಡ್ನಲ್ಲಿ ನಡೆದಿದ್ದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ಬಿಸಿಸಿಐ ಮೊದಲ ಟೆಸ್ಟ್ ಪಂದ್ಯದ ನಾಯಕತ್ವ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿಗೆ ವಹಿಸಿತ್ತು. ಯುವ ಪಡೆಯನ್ನು ಅದ್ಭುತವಾಗಿ ಮುನ್ನಡೆಸಿದ್ದ ಕೊಹ್ಲಿ ಎರಡೂ ಇನ್ನಿಂಗ್ಸ್ಗಳಲ್ಲೂ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದರು. ದುರಾದೃಷ್ಟವಶಾತ್ ಇತರೆ ಬ್ಯಾಟ್ಸ್ಮನ್ಗಳ ವಿಫಲತೆಯಿಂದ ಕೇವಲ 48ರನ್ಗಳ ಅಂತರದಿಂದ ಭಾರತ ತಂಡ ಸೋಲು ಕಂಡಿತ್ತು.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೆಲಿಯಾ ವಾರ್ನರ್(145), ಮೈಕಲ್ ಕ್ಲಾರ್ಕ್(162) ಹಾಗೂ ಸ್ಟಿವ್ ಸ್ಮಿತ್(162) ಶತಕದ ನೆರವಿನಿಂದ 517 ರನ್ಗಳಿಸಿದ್ದರು. ಇದಕ್ಕುತ್ತರವಾಗಿ ಭಾರತ ಕೊಹ್ಲಿ(115) ಶತಕ, ವಿಜಯ್(53) ಹಾಗೂ ರಹಾನೆ(62) ಅರ್ಧಶತಕದ ನೆರವಿನಿಂದ 444 ರನ್ಗಳಿಸಿತ್ತು. 73 ರನ್ಗಳ ಮುನ್ನಡೆ ಪಡೆದಿದ್ದ ಆಸೀಸ್ 2ನೇ ಇನ್ನಿಂಗ್ಸ್ನಲ್ಲಿ 290 ರನ್ಗಳಿಸಿ, ಭಾರತಕ್ಕೆ 364 ರನ್ಗಳ ಗುರಿ ನೀಡಿತ್ತು.
ಭಾರತದ ಪರ ಮುರುಳಿ ವಿಜಯ್ 99 ಮತ್ತು ವಿರಾಟ್ ಕೊಹ್ಲಿ 141 ರನ್ಗಳಿಸಿ ಉತ್ತಮ ಪೈಪೋಟಿ ನಡೆಸಿತ್ತಾದರೂ, ನಥನ್ ಲಿಯಾನ್ ದಾಳಿಗೆ ದಿಢೀರ್ ಕುಸಿತ ಕಂಡು 315 ರನ್ಗಳಿಗೆ ಆಲೌಟ್ ಆಗುವ ಮೂಲಕ 48 ರನ್ಗಳ ಸೋಲು ಕಂಡಿತ್ತು. ಲಿಯಾನ್ 7 ವಿಕೆಟ್ ಪಡೆದು ಮಿಂಚಿದ್ದರು.
-
From 2014 to 2018 – How Virat Kohli turned it around 💪@imVkohli chats with @mayankcricket on how he put behind his failures in England with technical inputs from @sachin_rt and @RaviShastriOfc and came out all guns blazing in 2018 🙌👌
— BCCI (@BCCI) July 24, 2020 " class="align-text-top noRightClick twitterSection" data="
Full video 📽️👉 https://t.co/yNMw87SR4z pic.twitter.com/m6zCPftcTC
">From 2014 to 2018 – How Virat Kohli turned it around 💪@imVkohli chats with @mayankcricket on how he put behind his failures in England with technical inputs from @sachin_rt and @RaviShastriOfc and came out all guns blazing in 2018 🙌👌
— BCCI (@BCCI) July 24, 2020
Full video 📽️👉 https://t.co/yNMw87SR4z pic.twitter.com/m6zCPftcTCFrom 2014 to 2018 – How Virat Kohli turned it around 💪@imVkohli chats with @mayankcricket on how he put behind his failures in England with technical inputs from @sachin_rt and @RaviShastriOfc and came out all guns blazing in 2018 🙌👌
— BCCI (@BCCI) July 24, 2020
Full video 📽️👉 https://t.co/yNMw87SR4z pic.twitter.com/m6zCPftcTC
ಧೋನಿ 3ನೇ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ ನಂತರ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡಕ್ಕೆ ಪೂರ್ಣ ಪ್ರಮಾಣದ ನಾಯಕರಾದರು. ಅಲ್ಲಿಂದ ಇಲ್ಲಿಯವರೆಗೆ ಕೊಹ್ಲಿ 55 ಟೆಸ್ಟ್ ಪಂದ್ಯಗಳಲ್ಲಿ ನಾಯಕರಾಗಿದ್ದಾರೆ. ಕೊಹ್ಲಿ ಭಾರತದ ಶ್ರೇಷ್ಠ ಟೆಸ್ಟ್ ನಾಯಕನಾಗಿದ್ದು 55 ಪಂದ್ಯಗಳಲ್ಲಿ 33 ಜಯ ತಂದುಕೊಟ್ಟಿದ್ದಾರೆ. ಧೋನಿ 60 ಪಂದ್ಯಗಳಲ್ಲಿ 27ರಲ್ಲಿ ಜಯ ಮತ್ತು 18 ಸೋಲು ಕಂಡಿದ್ದರೆ, ಗಂಗೂಲಿ ನಾಯಕತ್ವದಲ್ಲಿ ಭಾರತ 49 ಪಂದ್ಯಗಳಿಂದ 21 ಜಯ ಮತ್ತು 13 ಸೋಲು ಕಂಡಿದೆ.