ಹೈದರಾಬಾದ್: ದಿ ವಾಲ್ ಎಂದು ಕರೆಯಲ್ಪಡುವ ರಾಹುಲ್ ದ್ರಾವಿಡ್ರನ್ನ ಜನ ವಾಲ್ ಎಂದು ಕರೆದರೆ ಅಷ್ಟು ಇಷ್ಟ ಆಗುವುದಿಲ್ಲವಂತೆ. ಹೀಗೆಂದು ಸ್ವತಃ ರಾಹುಲ್ ದ್ರಾವಿಡ್ ಅವರೆ ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="">
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ರಾಹುಲ್ ದ್ರಾವಿಡ್, 'ದಿ ವಾಲ್' ಎಂಬ ಬಿರುದು ಬಂದಿದ್ದರ ಬಗ್ಗೆ ಮಾತನಾಡಿದ್ದಾರೆ. ಯಾರೋ ಬುದ್ದಿವಂತ ಸಂಪಾದಕರೋ ಅಥವಾ ಪತ್ರಕರ್ತರೋ ನನಗೆ ವಾಲ್ ಎಂದು ಬಿರುದು ನೀಡಿದ್ರು. ಆದ್ರೆ ನಾನು ಉತ್ತಮವಾಗಿ ಆಡದಿದ್ದಾಗ, 'ಬಿರುಕು ಬಿಟ್ಟ ಗೋಡೆ', 'ಗೋಡೆಯ ಮತ್ತೊಂದು ಇಟ್ಟಿಗೆ ಕುಸಿಯಿತು' ಎಂದು ಹೆಡ್ಲೈನ್ ನೀಡಿ ಪತ್ರಿಕೆಗಳಲ್ಲಿ ಬರೆಯುತ್ತಿದ್ದರು ಎಂದಿದ್ದಾರೆ. ಅಲ್ಲದೆ ಜನ ನನ್ನನ್ನ ರಾಹುಲ್ ಎಂದು ಕರೆದರೆ ಇಷ್ಟ ಪಡುತ್ತೇನೆ, ವಾಲ್ ಎಂದರೆ ಇಷ್ಟ ಆಗೋದಿಲ್ಲ ಎಂದು ತಮ್ಮ ಮನದಿಂಗಿತವನ್ನ ಬಿಚ್ಚಿಟ್ಟಿದ್ದಾರೆ.
ಇದೇ ವೇಳೆ, ಸೆಹ್ವಾಗ್ ಜೊತೆಗಿನ ಒಡೆನಾಟದ ಬಗ್ಗೆ ಮಾತನಾಡಿರುವ ಅವರು, ಶ್ರೀಲಂಕಾ ವಿರುದ್ಧದ ಪಂದ್ಯವೊಂದರಲ್ಲಿ ನಾನು ಸೆಹ್ವಾಗ್ ಬ್ಯಾಟಿಂಗ್ ಮಾಡುತ್ತಿದ್ದೆವು. ನಾನು ಸೆಹ್ವಾಗ್ ಬಳಿ ತೆರಳಿ ಪಿಚ್ ಕಂಡೀಷನ್ ಬಗ್ಗೆ ಪ್ರಶ್ನೆ ಮಾಡಿದೆ. ಆದ್ರೆ ವೀರು ಪಿಚ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ. ಸುಮ್ಮನೆ ಬಾಲ್ ನೋಡಿಕೊಡು ಹೊಡಿಯೋದು ಅಷ್ಟೆ ಎಂದು ಹೇಳಿದ್ದರು ಎಂದು ನೆನಪಿಸಿಕೊಂಡಿದ್ದಾರೆ.