ರಾಯ್ಪುರ(ಛತ್ತೀಸ್ಗಢ): ಕ್ರಿಕೆಟ್ ಪ್ರೇಮಿಗಳಿಗೆ ನಾಳೆಯಿಂದ ಕ್ರಿಕೆಟ್ ಹಬ್ಬ ಶುರುವಾಗಲಿದೆ. ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಬ್ಯಾಟಿಂಗ್ನ್ನು ನೋಡಬಹುದಾಗಿದೆ.
ಹೌದು, ಮಾರ್ಚ್ 5 ರಿಂದ ದಿಗ್ಗಜರ ಕ್ರಿಕಟ್ ಹಬ್ಬ ಶುರುವಾಗಲಿದೆ. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2021ಗೆ ನಾಳೆಯಿಂದ ಚಾಲನೆ ದೊರೆಯಲಿದ್ದು, ಮೊದಲ ಪಂದ್ಯ ಇಂಡಿಯಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್ ಮಧ್ಯೆ ಪೈಪೋಟಿ ನಡೆಯಲಿದೆ.
![Road Safety World Series 2021 Tendulkar gets into practice mode Sachin Tendulkar in Chhattisgarh Virender Sehwag in Road Safety World Series ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ಸುದ್ದಿ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ಆರಂಭ ಮಾರ್ಚ್ 5ರಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021](https://etvbharatimages.akamaized.net/etvbharat/prod-images/10861404_asj-1.jpg)
ಕಳೆದ ಬಾರಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ 2020 ಕೊರೊನಾದಿಂದ ಅರ್ಧಕ್ಕೆ ಮೊಟಕುಗೊಳಿಸಲಾಗಿತ್ತು. ಈ ಬಾರಿ ಈ ಸಿರೀಸ್ ಮತ್ತೆ ಶುರುವಾಗಿದ್ದು, ಲೆಜೆಂಡ್ಗಳ ಆಟ ನೋಡಿ ಕಣ್ತುಂಬಿಕೊಳ್ಳಬಹುದಾಗಿದೆ. ಈಗಾಗಲೇ ಸಚಿನ್ ಮತ್ತು ಸೆಹ್ವಾಗ್ ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ.
![Road Safety World Series 2021 Tendulkar gets into practice mode Sachin Tendulkar in Chhattisgarh Virender Sehwag in Road Safety World Series ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ಸುದ್ದಿ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021 ಆರಂಭ ಮಾರ್ಚ್ 5ರಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರಿಸ್ 2021](https://etvbharatimages.akamaized.net/etvbharat/prod-images/10861404_asj-4.jpg)
ಈ ಸಿರೀಸ್ನಲ್ಲಿ ಆಸ್ಟ್ರೇಲಿಯಾ ಹೊರತು ಪಡಿಸಿ ಆರು ತಂಡಗಳು ಆಡಲಿವೆ. ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ್ ಮತ್ತು ಶ್ರೀಲಂಕಾ ಈ ಸಿರೀಸ್ನಲ್ಲಿ ಭಾಗಿಯಾಗಿವೆ. ಮಾರ್ಚ್ 5 ರಿಂದ ಶುರುವಾಗುವ ಈ ಪಂದ್ಯಾವಳಿ ಮಾರ್ಚ್ 21ರವರೆಗೆ ನಡೆಯಲಿದೆ. ಮಾರ್ಚ್ 17 ಮತ್ತು 19ರಂದು ಸೆಮಿ ಫೈನಲ್ ಪಂದ್ಯಗಳು ನಡೆಯಲಿವೆ.
ಈ 17 ದಿನಗಳ ಆಟ ಛತ್ತೀಸ್ಗಢದ ರಾಯ್ಪುರದ ವೀರ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ.