ದುಬೈ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ಇಂಗ್ಲೆಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಮಧ್ಯೆ ಐಸಿಸಿ ವಿಶ್ವಕಪ್ ಕ್ರಿಕೆಟ್ ತಂಡ ಪ್ರಕಟಗೊಂಡಿದ್ದು, ಭಾರತೀಯ ಇಬ್ಬರು ಆಟಗಾರರು ಆಯ್ಕೆಗೊಂಡಿದ್ದಾರೆ.
ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು, ನ್ಯೂಜಿಲ್ಯಾಂಡ್ನ ಕೇನ್ ವಿಲಿಯಮ್ಸನ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ವಿಶ್ವಕಪ್ ಟೂರ್ನಮೆಂಟ್ನಲ್ಲಿ ರೋಹಿತ್ ಶರ್ಮಾ ಅತಿ ಹೆಚ್ಚು ರನ್ಗಳಿಕೆ ಮಾಡಿರುವ ಆಟಗಾರನಾಗಿದ್ದಾರೆ.
ತಂಡ ಇಂತಿದೆ
ಜಾಸನ್ ರಾಯ್ (ಇಂಗ್ಲೆಂಡ್), ರೋಹಿತ್ ಶರ್ಮಾ(ಇಂಡಿಯಾ), ಕೇನ್ ವಿಲಿಯಮ್ಸನ್(ನ್ಯೂಜಿಲ್ಯಾಂಡ್), ರೂಟ್(ಇಂಗ್ಲೆಂಡ್), ಶಕೀಬ್ ಅಲ್ ಹಸನ್(ಬಾಂಗ್ಲಾದೇಶ),ಬೆನ್ ಸ್ಟೋಕ್ಸ್(ಇಂಗ್ಲೆಂಡ್), ಅಲೆಕ್ಸ್ ಕ್ಯಾರಿ (ಆಸ್ಟ್ರೇಲಿಯಾ), ಮಿಚಲ್ ಸ್ಟಾರ್ಕ್(ಆಸ್ಟ್ರೇಲಿಯಾ), ಆರ್ಚರ್(ಇಂಗ್ಲೆಂಡ್), ಫರ್ಗ್ಯುಸನ್(ನ್ಯೂಜಿಲ್ಯಾಂಡ್), ಜಸ್ಪ್ರೀತ್ ಬುಮ್ರಾ(ಭಾರತ) ಹಾಗೂ 12ನೇ ಆಟಗಾರನಾಗಿ ಬೌಲ್ಟ್ ಆಯ್ಕೆಯಾಗಿದ್ದಾರೆ.
-
Find out the thinking behind the #CWC19 Team of the Tournament 👇 https://t.co/SFQPHYOXED
— ICC (@ICC) July 15, 2019 " class="align-text-top noRightClick twitterSection" data="
">Find out the thinking behind the #CWC19 Team of the Tournament 👇 https://t.co/SFQPHYOXED
— ICC (@ICC) July 15, 2019Find out the thinking behind the #CWC19 Team of the Tournament 👇 https://t.co/SFQPHYOXED
— ICC (@ICC) July 15, 2019
ವಿಶೇಷವೆಂದರೆ ತಂಡದ ವಿಕೆಟ್ ಕೀಪರ್ ಆಗಿ ಅಲೆಕ್ಸ್ ಕ್ಯಾರಿ ಆಯ್ಕೆಯಾಗಿದ್ದರೆ, ಪಾಕ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಶ್ರೀಲಂಕಾ ತಂಡದ ಯಾವುದೇ ಪ್ಲೇಯರ್ ಇದರಲ್ಲಿ ಅವಕಾಶ ಪಡೆದುಕೊಂಡಿಲ್ಲ.