ETV Bharat / state

ಮಂಗಳೂರಲ್ಲಿ ಕೇಂದ್ರೀಕೃತವಾದ ಫೆಂಗಲ್ ಚಂಡಮಾರುತ: ಸಂಜೆವರೆಗೂ ಸುರಿಯಲಿದೆ ಭಾರಿ ಮಳೆ

ಫೆಂಗಲ್ ಚಂಡಮಾರುತ ಮಂಗಳೂರಲ್ಲಿ ಕಾಣಿಸಿಕೊಂಡಿದ್ದು, ರಾತ್ರಿ ಧಾರಾಕಾರ ಮಳೆ ಸುರಿದಿದೆ. ಇದರಿಂದಾಗಿ ತಗ್ಗುಪ್ರದೇಶಗ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.

ಮಂಗಳೂರು ಮಳೆ ಫೆಂಗಲ್ ಚಂಡಮಾರು fengal cyclone Mangaluru rain
ಮಂಗಳೂರಲ್ಲಿ ಧಾರಾಕಾರ ಮಳೆಯಿಂದ ತಗ್ಗು ಪ್ರದೇಶಕ್ಕೆ ನುಗ್ಗಿದ ನೀರು (ETV Bharat)
author img

By ETV Bharat Karnataka Team

Published : 19 hours ago

ಮಂಗಳೂರು: ತಮಿಳುನಾಡು ಭಾಗದಲ್ಲಿ ಸಾಕಷ್ಟು ಹಾನಿ ಮಾಡಿದ ಫೆಂಗಲ್ ಚಂಡಮಾರುತ ರಾತ್ರಿ ವೇಳೆಗೆ ಮಂಗಳೂರು ಭಾಗದಲ್ಲಿ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಫೆಂಗಲ್ ಚಂಡಮಾರುತ ಸದ್ಯ ಮಂಗಳೂರು ಭಾಗದ ಅರಬ್ಬಿ ಸಮುದ್ರದಲ್ಲಿ ಇದ್ದು, ಬಳಿಕ ಇದು ಸಮುದ್ರದ ಮಧ್ಯೆ ತೆರಳಿ ಕೊನೆಗೊಳ್ಳಲಿದೆ. ಈ ಚಂಡಮಾರುತದ ಪ್ರಭಾವದಿಂದ ಇಂದು ಸಂಜೆಯವರೆಗೆ ಮಳೆಯ ಅಬ್ಬರ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾತ್ರಿ ಸುರಿದ ಮಳೆಗೆ ಮಂಗಳೂರು ನಗರ ಸಹಿತ ವಿವಿಧೆಡೆ ಜನರು ತತ್ತರಿಸುವಂತಾಗಿದೆ. ಕೊಟ್ಟಾರ ಚೌಕಿ ಪ್ರದೇಶದಲ್ಲಿ ಸೋಮವಾರ ಸಂಜೆ ವೇಳೆ ರಾಜಕಾಲುವೆಗಳು ಉಕ್ಕಿ ಹರಿದು ನೀರು ರಸ್ತೆಗೆ ಬಂದಿದ್ದು, ತಗ್ಗು ಪ್ರದೇಶದಲ್ಲಿದ್ದ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದ್ದವು.

ಇನ್ನು ಪಂಪ್ ವೆಲ್, ಬಜ್ಜೊಡಿ, ಬಜಾಲ್ ಅಂಡರ್ ಪಾಸ್ ಮತ್ತು ಪಡೀಲ್ ಸೇರಿ ಹಲವೆಡೆ ಹೆದ್ದಾರಿಯಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇನ್ನೂ ಅರಬ್ಬಿ ಸಮುದ್ರದಲ್ಲಿ ಗಾಳಿ ಒತ್ತಡ ಮತ್ತು ಅಲೆಗಳ ಅಬ್ಬರ ಜೋರಾಗಿದ್ದು, ಸಮುದ್ರದಲ್ಲಿ ಮೀನುಗಾರಿಕೆ ನಡೆಸಲಾಗದೇ ದೋಣಿಗಳು ದಡ ಸೇರಿದೆ. ಸದ್ಯ ಸಮುದ್ರವು ಕೂಡ ಪ್ರಕ್ಷುಬ್ದವಾಗಿದೆ.

ಫೆಂಗಲ್ ಚಂಡಮಾರುತ ಪರಿಣಾಮ ಮಂಗಳೂರಲ್ಲಿ ಮಳೆ (ETV Bharat)

ಎರಡು ಸಾವು: ಪುತ್ತೂರಿನಲ್ಲಿ ವಿದ್ಯುತ್ ಶಾಕ್​​ನಿಂದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರೆ, ಬೆಳ್ತಂಗಡಿಯಲ್ಲಿ ನೀರಿನಲ್ಲಿ ಒಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ. ಪುತ್ತೂರಿನ ಕೆಯ್ಯೂರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೂಲಿ ಕಾರ್ಮಿಕ ನಾರಯಣ (45) ವಿದ್ಯುತ್ ಶಾಕ್​​ನಿಂದ ಮೃತಪಟ್ಟವರು. ಇನ್ನು ಕಾಲು ಜಾರಿ ನದಿಗೆ ಬಿದ್ದು ಆರ್​ಎಸ್​ಎಸ್ ಪ್ರಚಾರಕ ಪ್ರಸಾದ್ ಎಂಬವರು ಸಾವನ್ನಪ್ಪಿದ್ದಾರೆ. ತನ್ನ ಸಂಬಂಧಿಕರ ಜೊತೆಗೆ ನದಿ ಬಳಿಗೆ ಬಂದಿದ್ದ ಅವರು ಕಾಲು ಜಾರಿ ಬಿದ್ದಿದ್ದಾರೆ.

ಫೆಂಗಲ್ ಚಂಡಮಾರುತದಿಂದ ಸಾವು ಸಂಭವಿಸಿಲ್ಲ; ಡಿಸಿ: ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಫೆಂಗಲ್ ಚಂಡಮಾರುತದಿಂದ ಯಾವುದೇ ಸಾವು ಸಂಭವಿಸಿದ ವರದಿಯಾಗಿಲ್ಲ. ಓರ್ವ ನದಿಯಲ್ಲಿ ಕಾಲು ಜಾರಿ ಬಿದ್ದು ಮತ್ತು ಮತ್ತೋರ್ವ ವಿದ್ಯುತ್ ಶಾಕ್​​ನಿಂದ ಮೃತರಾದದ್ದು ವರದಿಯಾಗಿದೆ. ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದರು.

ಫೆಂಗಲ್ ಚಂಡಮಾರುತದ ಪರಿಣಾಮದಿಂದ ಈಗಾಗಲೇ ಕೊಡಗು, ಉಡುಪಿ, ಬೆಂಗಳೂರು, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಲಾಗಿದೆ. ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಇಂದು ಕೂಡ ಶಾಲಾ ಕಾಲೇಜಿಗೆ ರಜೆ ನೀಡಲಾಗಿದೆ.

ಉಡುಪಿಯಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ, ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಪರಿಣಾಮ ಎರಡು ದಿನ ಆರೆಂಜ್ ಅಲರ್ಟ್ ಘೋಷಣೆಯಾಗಿದೆ. ಮಾತ್ರವಲ್ಲದೇ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಕಟ್ಟೆಚರವನ್ನು ನೀಡಿದ್ದಾರೆ. ಸಾರ್ವಜನಿಕರು ಶೀತಲಾವಸ್ಥೆಯಿರುವ ಅಥವಾ ಕುಸಿತದ ಹಂತದ ಕಂಪೌಂಡ್ ಅಥವಾ ಮನೆಯ ಗೋಡೆ ಕಂಡುಬಂದಲ್ಲಿ ತುರ್ತುಸೇವೆಗೆ 1077, ದೂ.ಸಂಖ್ಯೆ: 0820-2574802 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಫೆಂಗಲ್ ಅಬ್ಬರ: ಕೊಡಗಿಗೆ ರೆಡ್, ಹಲವೆಡೆ ಆರೆಂಜ್ ಅಲರ್ಟ್; ಈ ಜಿಲ್ಲೆಗಳಲ್ಲಿ ಇಂದೂ ಶಾಲೆಗಳಿಗೆ ರಜೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.