ETV Bharat / state

ಬೆಳಗಾವಿ: ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಕದ್ದ ಸಿಬ್ಬಂದಿ, ಅದೇ ಹಣದಲ್ಲಿ ತಾಯಿಗೆ ಮಾಂಗಲ್ಯ ಸರ ಖರೀದಿಸಿದ!

ಎಟಿಎಂ ಕಳ್ಳತನ ಪ್ರಕರಣವನ್ನು ಬೆಳಗಾವಿ ಪೊಲೀಸರು ಭೇದಿಸಿದ್ದಾರೆ. ಬ್ಯಾಂಕ್ ಸಿಬ್ಬಂದಿಯೇ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.

ಬೆಳಗಾವಿ: ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಕದ್ದ ಬ್ಯಾಂಕ್ ಸಿಬ್ಬಂದಿ ಅರೆಸ್ಟ್
ಬೆಳಗಾವಿ: ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಕದ್ದ ಬ್ಯಾಂಕ್ ಸಿಬ್ಬಂದಿ ಅರೆಸ್ಟ್ (ETV Bharat)
author img

By ETV Bharat Karnataka Team

Published : 18 hours ago

ಬೆಳಗಾವಿ: ಎಟಿಎಂಗೆ ಹಣ ಹಾಕಿದ ಬ್ಯಾಂಕ್ ಸಿಬ್ಬಂದಿ, ಎರಡು ಗಂಟೆ ಬಳಿಕ ತಾನೇ ಅದರಲ್ಲಿನ ಲಕ್ಷಾಂತರ ರೂ. ಹಣವನ್ನು ಲಪಟಾಯಿಸಿದ್ದ ಪ್ರಕರಣ ಭೇದಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬೆಳಗಾವಿಯ ಕಂಗ್ರಾಳಿ ಕೆ ಹೆಚ್ ಜ್ಯೋತಿ ನಗರದ ನಿವಾಸಿ ಕೃಷ್ಣಾ ಸುರೇಶ ದೇಸಾಯಿ (23) ಬಂಧಿತ ಆರೋಪಿ.

ಎಟಿಎಂಗೆ ಹಣ ಹಾಕಿ ಬಳಿಕ ತಾನೇ ಎಗರಿಸಿದ: ಹೆಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಎಟಿಎಂ ಕಸ್ಟೋಡಿಯನ್ ಆಗಿ ಆರೋಪಿ ಕೃಷ್ಣಾ ಕೆಲಸ ಮಾಡುತ್ತಿದ್ದರು. ನಿತ್ಯ ಬ್ಯಾಂಕಿನಿಂದ ಹಣ ತಂದು ನಗರದ ಎಲ್ಲ ಹೆಚ್‌ಡಿಎಫ್‌ಸಿ ಎಟಿಎಂಗಳಿಗೆ ಕೃಷ್ಣಾ ಹಣ ಹಾಕುತ್ತಿದ್ದರು. ನವೆಂಬರ್ 26ರಂದು ಬೆಳಗಾವಿಯ ಕೋರ್ಟ್ ಎದುರಿನ ಹೆಚ್‌ಡಿಎ‌ಫ್‌ಸಿ ಎಟಿಎಂನಲ್ಲಿ ಹಣ ಹಾಕಿ ಹೋಗಿದ್ದ ಕೃಷ್ಣಾ, ಕೆಲ ಹೊತ್ತಿನ ಬಳಿಕ‌ ತಾನೇ ಬಂದು ಲಾಕ್ ಓಪನ್ ಮಾಡಿ 8.65 ಲಕ್ಷ ಹಣ ಎಗರಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ (ETV Bharat)

ಎಟಿಎಂ ಕಳ್ಳತನ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಪೊಲೀಸರಿಗೆ ಶಾಕ್ ಆಗಿತ್ತು. ಸಿಸಿಟಿವಿ ಕ್ಯಾಮರಾದಲ್ಲಿ ಎಟಿಎಂನಲ್ಲಿ ಕೃಷ್ಣಾ ಹಣ ಹಾಕಿ ಬಳಿಕ ವಾಪಸ್ ಬಂದು ಹಣ ತೆಗೆದುಕೊಂಡು ಹೋಗಿದ್ದ ದೃಶ್ಯ ಸೆರೆಯಾಗಿತ್ತು.

ತಾಯಿಗೆ ಮಾಂಗಲ್ಯ ಸರ ಖರೀದಿ: ಎಟಿಎಂನಿಂದ ಕದ್ದ 8.65 ಲಕ್ಷ ರೂ. ಹಣದಲ್ಲಿ ಕೃಷ್ಣಾ ‌1.54 ಲಕ್ಷ ರೂ. ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ತಾಯಿಗೆ ಮಾಡಿಸಿದ್ದ. ಸ್ವಲ್ಪ ಹಣದಲ್ಲಿ ಮೋಜು ಮಸ್ತಿ ಮಾಡಿದ್ದ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಚಿನ್ನದ ಸರ ಮತ್ತು 5.74 ಲಕ್ಷ ರೂ. ಹಣವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಆರೋಪಿ ಕೃಷ್ಣಾ ಬಳಿ ಎಟಿಎಂ ಕೀ ಇತ್ತು. ಆ ಕೀ ಉಪಯೋಗಿಸಿ ಎಟಿಎಂ ಓಪನ್ ಮಾಡಿ ಹಣ ಕಳ್ಳತನ ಮಾಡಿದ್ದ. ಸಿಸಿಟಿವಿಯಲ್ಲಿ ಈ ಎಲ್ಲ ದೃಶ್ಯಗಳು ಸೆರೆಯಾಗಿದ್ದವು. ಆರೋಪಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿ ವಿರುದ್ಧ ಇದು ಮೊದಲ ಕೇಸ್ ಆಗಿದೆ. ಈ ರೀತಿ ಹಿಂದೆಯೂ ಕಳ್ಳತನ ಮಾಡಿರುವ ಬಗ್ಗೆ ಹೆಚ್ಚಿನ ವಿಚಾರಣೆ ಮಾಡಬೇಕಿದೆ ಎಂದು ತಿಳಿಸಿದರು.

ಇದನ್ನೂ ಓದಿ: KSRTC ಬಸ್​ - ಕಾರ್​ ಮಧ್ಯೆ ಭೀಕರ ಅಪಘಾತ: ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.