ಲಖನೌ: ಜನವರಿ 10 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿಗೆ ಯುಪಿ ತಂಡವನ್ನು ಪ್ರಕಟಿಸಿದೆ. ಈ ತಂಡದ ನಾಯಕತ್ವದ ಜವಾಬ್ದಾರಿಯನ್ನ ಪ್ರಿಯಮ್ ಗರ್ಗ್ ನೀಡಲಾಗಿದೆ.
ಇನ್ನೂ ತಂಡದಲ್ಲಿ ಟೀಮ್ ಇಂಡಿಯಾದ ಅನುಭವಿ ಆಟಗಾರರಾದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಹಾಗೂ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (ಯುಪಿಸಿಎ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದೀಪಕ್ ಶರ್ಮಾ 15 ಸದಸ್ಯರ ತಂಡವನ್ನು ಶುಕ್ರವಾರ ಪ್ರಕಟಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಏಳು ಜನರನ್ನ ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ. ಮುಖ್ಯ ಕೋಚ್ ಆಗಿ ಜ್ಞಾನೇಂದ್ರ ಪಾಂಡೆ ಅವರಿಗೆ ಜವಾಬ್ದಾರಿಯನ್ನ ನೀಡಲಾಗಿದೆ.
ಗ್ರೂಪ್-ಎ ನಲ್ಲಿ ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಪಂಜಾಬ್, ರೈಲ್ವೆ ಮತ್ತು ತ್ರಿಪುರಾ ತಂಡಗಳಿವೆ. ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಯುಪಿ ಜನವರಿ 10 ರಂದು ಬೆಂಗಳೂರಿನಲ್ಲಿ ಪಂಜಾಬ್ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಲಿದೆ.
ಓದಿ : ಇಂಗ್ಲೆಂಡ್ನಿಂದ- ಟಿ20 ವಿಶ್ವಕಪ್ವರೆಗೆ: ಟೀಂ ಇಂಡಿಯಾ 2021ರ ಸಂಪೂರ್ಣ ವೇಳಾಪಟ್ಟಿ!
ಯುಪಿ ತಂಡ: ಪ್ರಿಯಮ್ ಗರ್ಗ್ (ನಾಯಕ), ಕರಣ್ ಶರ್ಮಾ (ಉಪನಾಯಕ), ಸುರೇಶ್ ರೈನಾ, ಭುವನೇಶ್ವರ್ ಕುಮಾರ್, ರಿಂಕು ಸಿಂಗ್, ಮಾಧವ್ ಕೌಶಿಕ್, ಸಮರ್ತ್ ಸಿಂಗ್, ಶುಭಮ್ ಚೌಬೆ, ಧ್ರುವ್ ಚಂದ್ ಜುರೆಲ್ (ವಿಕೆಟ್ ಕೀಪರ್) , ಅಂಕಿತ್ ರಜಪೂತ್, ಮೊಹ್ಸಿನ್ ಖಾನ್, ಶಿವಂ ಮಾವಿ, ಶಿವ ಸಿಂಗ್ ಮತ್ತು ಶಾನು ಸೈನಿ. ಮೀಸಲು ಆಟಗಾರರಾಗಿ ಆಕಿಬ್ ಖಾನ್, ಸಮೀರ್ ಚೌಧರಿ, ಮೋಹಿತ್ ಜಂಗ್ರಾ, ಹರ್ದೀಪ್ ಸಿಂಗ್, ಅಭಿಷೇಕ್ ಗೋಸ್ವಾಮಿ, ನಲಿನ್ ಮಿಶ್ರಾ ಮತ್ತು ಪೂರ್ಣಕ್ ತ್ಯಾಗಿ ಅವರನ್ನ ಆಯ್ಕೆ ಮಾಡಲಾಗಿದೆ.