ETV Bharat / sports

ಅನಿವೃದ್ಧ್ ಜೋಶಿ ಸ್ಫೋಟಕ ಅರ್ಧಶತಕ: ಕರ್ನಾಟಕ ತಂಡಕ್ಕೆ 2 ವಿಕೆಟ್​ಗಳ ರೋಚಕ ಜಯ - ಅನಿವೃಧ್ಧ ಜೋಶಿ ಅರ್ಧಶತಕ

ಎ ಗುಂಪಿನ್ ಪಂದ್ಯದಲ್ಲಿ ರೈಲ್ವೇಸ್​ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 152 ರನ್​ಗಳಿಸಿತ್ತು. ಶಿವಂ ಚೌದರಿ 48 ಹಾಗೂ ಪ್ರತಾಪ್​ ಸಿಂಗ್​ 41 ಹಾಗೂ ಹರ್ಷ್​ ತ್ಯಾಗಿ 33 ರನ್​ಗಳಿಸಿದ್ದರು.

ಅನಿವೃದ್ಧ ಜೋಶಿ ಅರ್ಧಶತಕ
ಅನಿವೃದ್ಧ ಜೋಶಿ ಅರ್ಧಶತಕ
author img

By

Published : Jan 16, 2021, 4:49 PM IST

Updated : Jan 16, 2021, 6:50 PM IST

ಬೆಂಗಳೂರು: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯ ತಮ್ಮ 4ನೇ ಪಂದ್ಯದಲ್ಲಿ ರೈಲ್ವೇಸ್​ ವಿರುದ್ಧ ಅನಿವೃದ್ಧ್ ಜೋಶಿ ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 2 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಎ ಗುಂಪಿನ್ ಪಂದ್ಯದಲ್ಲಿ ರೈಲ್ವೇಸ್​ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 152 ರನ್​ಗಳಿಸಿತ್ತು. ಶಿವಂ ಚೌದರಿ 48 ಹಾಗೂ ಪ್ರತಾಪ್​ ಸಿಂಗ್​ 41 ಹಾಗೂ ಹರ್ಷ್​ ತ್ಯಾಗಿ 33 ರನ್​ಗಳಿಸಿದ್ದರು.

ಕರ್ನಾಟಕ ತಂಡದ ಪರ ಪ್ರಸಿದ್​ ಕೃಷ್ಣ 2, ಶ್ರೇಯಸ್ ಗೋಪಾಲ್ 2 ಹಾಗೂ ವಿ. ಕೌಶಿಕ್ ಒಂದು ವಿಕೆಟ್ ಪಡೆದರು. ಇನ್ನು 153 ರನ್​ಗಳ ಗುರಿ ಬೆನ್ನತ್ತಿದ ಕರ್ನಾಟಕ ತಂಡ 19.4 ಓವರ್​ಗಳಲ್ಲಿ 8 ವಿಕೆಟ್​ ಕಳೆದುಕೊಂಡು ಟೂರ್ನಿಯಲ್ಲಿ 3ನೇ ಜಯ ಸಾಧಿಸಿತು.

ಅನಿವೃದ್ಧ್​ ಜೋಶಿ 40 ಎಸೆತಗಳಲ್ಲಿ 4 ಸಿಕ್ಸರ್​ 3 ಬೌಂಡರಿ ಸಹಿತ ಅಜೇಯ 64 ರನ್​ಗಳಿಸಿ ಗೆಲುವಿನ ರೂವಾರಿಯಾದರು. ದೇವದತ್​ ಪಡಿಕ್ಕಲ್​ 37 ರನ್​ಗಳಿಸಿ ಸೂಕ್ತ ಬೆಂಬಲ ನೀಡಿದರು. ಆದರೆ, ನಾಯಕ ಕರುಣ್ ನಾಯರ್(14), ಶ್ರೀಜಿತ್​ ರೋಹನ್​ (14) ಸೇರಿದಂತೆ ಪ್ರಮುಖ ಬ್ಯಾಟ್ಸ್​ಮನ್​ಗಳು ವಿಫಲರಾಗಿದ್ದರಿಂದ ಪಂದ್ಯ ಕೊನೆಯ ಓವರ್​ವರೆಗೆ ಹೋಗಬೇಕಾಯಿತು.

ಈ ಗೆಲುವು ಸೇರಿದಂತೆ ಕರ್ನಾಟಕ ತಂಡ ಟೂರ್ನಿಯಲ್ಲಿ ಆಡಿರುವ 4 ಪಂದ್ಯಗಳಲ್ಲಿ 3 ಗೆಲುವು ಹಾಗೂ ಒಂದು ಸೋಲು ಸಹಿತ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು. ಪಂಜಾಬ್​ ತಂಡ 4 ಗೆಲುವಿನೊಂದಿಗೆ 16 ಅಂಕ ಮತ್ತು ಅತ್ಯುತ್ತಮ ರನ್​ರೇಟ್​ ಹೊಂದಿರುವುದರಿಂದ ಎ ಗುಂಪಿನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸುವ ನೆಚ್ಚಿನ ತಂಡವಾಗಿದೆ.

ಇದನ್ನು ಓದಿ:ಪಾಂಡ್ಯ ಸಹೋದರರಿಗೆ ಪಿತೃ ವಿಯೋಗ: ಮುಷ್ತಾಕ್ ಅಲಿ ಟೂರ್ನಿ ತೊರೆದ ಕೃನಾಲ್

Last Updated : Jan 16, 2021, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.