ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ಇನ್ನಿಂಗ್ಸ್ನಲ್ಲಿ 131 ಓವರ್ ಬ್ಯಾಟ್ ಬೀಸಿದ ಟೀಂ ಇಂಡಿಯಾ ಆಟಗಾರರು, ನೂತನ ದಾಖಲೆ ಬರೆದಿದ್ದಾರೆ.
18 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಭಾರತ ತಂಡದ 4ನೇ ಇನ್ನಿಂಗ್ಸ್ನಲ್ಲಿ 100ಕ್ಕೂ ಹೆಚ್ಚು ಓವರ್ ಬ್ಯಾಟಿಂಗ್ ನಡೆಸಿದೆ. ಈ ಹಿಂದೆ 2002 ರಲ್ಲಿ ಲಾರ್ಡ್ಸ್ ಟೆಸ್ಟ್‌ನಲ್ಲಿ ಭಾರತ 109.4 ಓವರ್‌ಗಳ ವರೆಗೆ ಬ್ಯಾಟಿಂಗ್ ಮಾಡಿತು, ಈ ಪಂದ್ಯದಲ್ಲಿ ಅಜಿತ್ ಅಗರ್ಕರ್ ಶತಕವನ್ನು ಸಿಡಿಸಿ ಮಿಂಚಿದ್ದರು. 1979 ಭಾರತ 4ನೇ ಇನ್ನಿಂಗ್ಸ್ನಲ್ಲಿ 150.5 ಓವರ್‌ಗಳ ಕಾಲ ಬ್ಯಾಟಿಂಗ್ ನಡೆಸಿದ್ದು ದಾಖಲೆಯಾಗಿದೆ.
ಇಂದು ಮುಕ್ತಾಯವಾದ ಪಂದ್ಯದಲ್ಲಿ ತಮ್ಮ ಎದೆಗಾರಿಕೆ ತೋರಿದ ಅಶ್ವಿನ್ ಮತ್ತು ಹನುಮ ವಿಹಾರಿ 42.4 ಓವರ್‌ಗಳ ಕಾಲ ಬ್ಯಾಟ್ ಬೀಸಿ ಅಜೇಯರಾಗಿ ಉಳಿದ್ರು.
-
62 unbeaten runs in 256 balls, with both playing through injuries 🙌
— ICC (@ICC) January 11, 2021 " class="align-text-top noRightClick twitterSection" data="
What a performance from this duo!#AUSvIND pic.twitter.com/ZKEQS3BgPx
">62 unbeaten runs in 256 balls, with both playing through injuries 🙌
— ICC (@ICC) January 11, 2021
What a performance from this duo!#AUSvIND pic.twitter.com/ZKEQS3BgPx62 unbeaten runs in 256 balls, with both playing through injuries 🙌
— ICC (@ICC) January 11, 2021
What a performance from this duo!#AUSvIND pic.twitter.com/ZKEQS3BgPx
ಅಲ್ಲದೇ 4ನೇ ವಿಕೆಟ್ಗೆ ಭರ್ಜರಿ 148 ರನ್ಗಳ ಕಾಣಿಕೆ ನೀಡಿದ ರಿಷಭ್ ಪಂತ್ ಮತ್ತು ಪೂಜಾರ ಆಸೀಸ್ ಬೌಲರ್ಗಳ ಬೆವರಿಳಿಸಿದ್ರು. ಬೌಂಡರಿ ಸಿಕ್ಸರ್ಗಳಿಂದ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಷಭ್ ಪಂತ್ 97 ರನ್ ಗಳಿಸಿರುವಾಗ ಲಿಯಾನ್ ಎಸೆತದಲ್ಲಿ ಕಮ್ಮಿನ್ಸ್ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು. ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಸಿಡಿದ್ದ ಪೂಜಾರ ದ್ವಿತೀಯ ಇನ್ನಿಂಗ್ಸ್ನಲ್ಲಿ 77 ರನ್ ಗಳಿಸಿ ಔಟ್ ಆದ್ರು.
ಒಂದೆಡೆ ಹನುಮ ವಿಹಾರಿ ಮಂಡಿರುಜ್ಜು ಗಾಯಕ್ಕೆ ತುತ್ತಾದರೆ, ಮತ್ತೊಂದೆಡೆ ಆರ್. ಅಶ್ವಿನ್ ಅವರ ಭುಜ ಮತ್ತು ಹೊಟ್ಟೆಗೆ ಚೆಂಡು ಬಡಿದು ಗಾಯಗೊಂಡರು. ಆದರೂ ಛಲ ಬಿಡದೇ ಆಸೀಸ್ ಬೌಲರ್ಗಳ ಮಾರಕ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ರು. ಈ ಇಬ್ಬರ ವಿಕೆಟ್ ಪಡೆಯಲೆಂದು ಯತ್ನಿಸಿದ ಆಸೀಸ್ ಬೌಲರ್ಗಳ ಸರ್ವ ಪ್ರಯತ್ನವೂ ವಿಫಲವಾಯಿತು.
ಅಂತಿಮ ದಿನದಾಟದ ಅಂತ್ಯಕ್ಕೆ ಭಾರತ 131 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 334 ರನ್ಗಳಿಸಿದ ಪರಿಣಾಮ ಪಂದ್ಯ ಡ್ರಾನಲ್ಲಿ ಅಂತ್ಯವಾಯ್ತು. 6ನೇ ವಿಕೆಟ್ಗೆ ಹನುಮ ವಿಹಾರಿ ಮತ್ತು ಅಶ್ವಿನ್ ಜೋಡಿ 256 ಚೆಂಡು ಎದುರಿಸಿ 62 ರನ್ ಕಲೆಹಾಕಿತು. 161 ಬಾಲ್ ಎದುರಿಸಿದ ವಿಹಾರಿ 23 ರನ್ ಗಳಿಸಿದ್ರೆ, 128 ಚೆಂಡು ಎದುರಿಸಿದ ಅಶ್ವಿನ್ 39 ರನ್ ಗಳಿಸಿ ಅಜೇಯರಾಗಿ ಉಳಿದ್ರು.