ETV Bharat / sports

2 ರನ್​ಗಳ ರೋಚಕ ಗೆಲುವಿನೊಂದಿಗೆ ಫೈನಲ್ ಪ್ರವೇಶಿಸಿದ ಸೂಪರ್ ನೋವಾಸ್​

ಮೊದಲು ಬ್ಯಾಟಿಂಗ್ ನಡೆಸಿದ್ದ ಸೂಪರ್ ನೋವಾಸ್​ ಚಾಮರಿ ಅಟಪಟ್ಟು(67) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಒವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 146 ರನ್​ಗಳಿಸಿತ್ತು.

ವುಮೆನ್ಸ್​ ಟಿ20 ಚಾಲೆಂಜ್​​
ವುಮೆನ್ಸ್​ ಟಿ20 ಚಾಲೆಂಜ್​​
author img

By

Published : Nov 7, 2020, 11:56 PM IST

ಶಾರ್ಜಾ: ತೀವ್ರ ರೋಚಕತೆಯಿಂದ ಕೂಡಿದ್ದ ವುಮೆನ್ಸ್​ ಟಿ20 ಚಾಲೆಂಜ್​ನ ಕೊನೆಯ ಲೀಗ್​ ಪಂದ್ಯದಲ್ಲಿ ಟ್ರೈಲ್​ಬ್ಲೇಜರ್ಸ್​ ವಿರುದ್ಧ ಸೂಪರ್ ನೋವಾಸ್ ತಂಡ 2 ರನ್​ಗಳ ರೋಚಕ ಜಯ ಸಾಧಿಸಿ ಫೈನಲ್ ಪ್ರವೇಶಿಸಿದೆ.

ಮೊದಲು ಬ್ಯಾಟಿಂಗ್ ನಡೆಸಿದ್ದ ಸೂಪರ್ ನೋವಾಸ್​ ಚಾಮರಿ ಅಟಪಟ್ಟು(67) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಒವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 146 ರನ್​ಗಳಿಸಿತ್ತು.

147 ರನ್​ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಟ್ರೈಲ್​ಬ್ಲೇಜರ್ಸ್​ 20 ಓವರ್​ಗಳಲ್ಲಿ 144 ರನ್​ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳಿಂದ ಸೋಲೊಪ್ಪಿಕೊಂಡಿತು. ಡೊಟ್ಟಿನ್ 27, ಮಂಧಾನ 33, ದೀಪ್ತಿ ಶರ್ಮಾ 45 ಹಾಗೂ ಹರ್ಲೀನ್ ಡಿಯೋಲ್ 27 ರನ್​ಗಳಿಸಿ ಕೊನೆಯ ಓವರ್​ವರೆಗೂ ಹೋರಾಟ ನಡೆಸಿದರು. ಆದರೆ ಟ್ರೈಲ್​ಬ್ಲೇಜರ್ಸ್​ ಕೊನೆಯ ಓವರ್​ನಲ್ಲಿ 10 ರನ್​ಗಳಿಸಲಾಗದೆ ಕೇವಲ 2 ರನ್​ಗಳ ರೋಚಕ ಸೋಲು ಕಂಡಿತು.

ಕೇವಲ 48 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 67 ರನ್​ಗಳಿಸಿದ ಚಾಮರಿ ಅಟಪಟ್ಟು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಮುಂದಿನ ಫೈನಲ್​ ಪಂದ್ಯದಲ್ಲೂ ಈ ತಂಡಗಳೇ ಎದುರಾಳಿಗಳಾಗಲಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.