ETV Bharat / sports

ಆತ ಬೌಲಿಂಗ್ ವಿಭಾಗದ ದ್ರಾವಿಡ್, ನಮ್ಮ ವಿರುದ್ಧ ಕಳಪೆ ಬೌಲಿಂಗ್ ಮಾಡಿದ ನೆನಪೇ ಇಲ್ಲ: ಸ್ಟೀವ್ ವಾ - ಸ್ಟೀವ್​ ವಾ ಭಾರತ ತಂಡ

ಕ್ರಿಕೆಟ್​ ಆಟವನ್ನು ಆನಂದಿಸುತ್ತಾ ತಮ್ಮ ದೇಶದ ಪರವಾಗಿ ಅವರಂತೆ( ಅನಿಲ್ ಕುಂಬ್ಳೆ) ಆಡಿದ ಮತ್ತೊಬ್ಬ ಆಟಗಾರನನ್ನು ನಾನು ನೋಡಿಲ್ಲ. ಇದು(ಕ್ರಿಕೆಟ್​) ಎಲ್ಲವೂ ಆಗಿತ್ತು. ಅವರನ್ನು ಖಂಡಿತಾ ಒಬ್ಬ ಲೆಗ್ ಸ್ಪಿನ್ನರ್​ನಂತೆ ಎದುರಿಸದೆ. ಸ್ಲೋ ಇನ್-ಸ್ವಿಂಗ್ ಬೌಲರ್​ನಂತೆ ಎಂದು ಆಡುತ್ತಿದ್ದೆವು ಎಂದು ಸ್ಟೀವ್​ ವಾ ಹೇಳಿದ್ದಾರೆ.

ಸ್ಟೀವ್​ ವಾ ಅನಿಲ್​ ಕುಂಬ್ಳೆ
ಸ್ಟೀವ್​ ವಾ ಅನಿಲ್​ ಕುಂಬ್ಳೆ
author img

By

Published : Jan 13, 2021, 9:08 PM IST

ನವದೆಹಲಿ: ಭಾರತದ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿರುವ ದಾಖಲೆ ಹೊಂದಿರುವ ಕನ್ನಡಿಗ ಅನಿಲ್ ಕುಂಬ್ಳೆಯನ್ನು ಬೌಲಿಂಗ್​ ವಿಭಾಗದ ರಾಹುಲ್ ದ್ರಾವಿಡ್​ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾ ತಂಡವನ್ನು 57 ಪಂದ್ಯಗಲ್ಲಿ ಮುನ್ನಡೆಸಿ 72 ಗೆಲುವಿನ ಸರಾಸರಿ ಹೊಂದಿರುವ ಸ್ಟೀವ್​ 41 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. 1997 ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದರಿಂದ ಹಿಡಿದು 2004ರವರೆಗೆ ತಂಡವನ್ನು ಮುನ್ನಡೆಸಿದ್ದರು. ಅವರ ನಾಯಕತ್ವದ ದಾಖಲೆಯೆಂದರೆ ಟೆಸ್ಟ್​ ಕ್ರಿಕೆಟ್​ನಲ್ಲಿ ಸತತ 16 ಪಂದ್ಯಗಳಲ್ಲಿ ಜಯ ಸಾಧಿಸಿದ್ದು. ಆದರೆ 2001ರಲ್ಲಿ ಸೌರವ್​ ಗಂಗೂಲಿ ನೇತೃತ್ವದ ಟೀಮ್ ಇಂಡಿಯಾ ಟೆಸ್ಟ್​ ಕ್ರಿಕೆಟ್​ನಲ್ಲಿ ಆಸೀಸ್​ ನಡೆಸುತ್ತಿದ್ದ ದಂಡಯಾತ್ರೆಗೆ ಪೂರ್ಣ ವಿರಾಮ ಹಾಕಿತ್ತು.

ಅನಿಲ್ ಕುಂಬ್ಳೆ
ಅನಿಲ್ ಕುಂಬ್ಳೆ

ಕ್ರಿಕೆಟ್​ ಆಟವನ್ನು ಆನಂದಿಸುತ್ತಾ ತಮ್ಮ ದೇಶದ ಪರವಾಗಿ ಪರ ಅವರಂತೆ( ಅನಿಲ್ ಕುಂಬ್ಳೆ) ಆಡಿದ ಮತ್ತೊಬ್ಬ ಆಟಗಾರನನ್ನು ನಾನು ನೋಡಿಲ್ಲ. ಇದು(ಕ್ರಿಕೆಟ್​) ​ ಎಲ್ಲವೂ ಆಗಿತ್ತು. ಅವರನ್ನು ಖಂಡಿತಾ ಒಬ್ಬ ಲೆಗ್ ಸ್ಪಿನ್ನರನಂತೆ ಎದುರಿಸದೆ, ಸ್ಲೋ ಇನ್-ಸ್ವಿಂಗ್ ಬೌಲರ್​ನಂತೆ ಎಂದು ಆಡುತ್ತಿದ್ದೆವು ಎಂದಿದ್ದಾರೆ.

ಅವರು ಬೌಲಿಂಗ್ ವೇಗದಲ್ಲಿ ಅದ್ಭುತ ಬದಲಾವಣೆ ಹೊಂದಿದ್ದರು. ಕ್ರೀಸ್​ಅನ್ನು ಬಳಸುವುದರಲ್ಲಿ ಮತ್ತು ಬೌಲಿಂಗ್​ನಲ್ಲಿ ತೋರುತ್ತಿದ್ದ ವೇರಿಯೇಷನ್ಸ್​ ಅತ್ಯುತ್ತಮವಾಗಿತ್ತು. ಅವರು ಕಠಿಣ ಪ್ರತಿಸ್ಪರ್ಧಿಯಾಗಿದ್ದರು. ಅವರು ನಮ್ಮ ವಿರುದ್ಧ ಕಳಪೆ ಬೌಲಿಂಗ್ ಮಾಡಿರುವುದು ನನಗೆ ನೆನೆಪಿಲ್ಲ. ಖಂಡಿತಾ ಅವರು ಬೌಲಿಂಗ್ ವಿಭಾಗದ ದ್ರಾವಿಡ್​ನಂತಿದ್ದರು. ನಾಯಕನಿಗೆ ಕುಂಬ್ಳೆಯವರಿಗೆ ಹೇಗೆ, ಯಾವ ಸಮಯದಲ್ಲಿ ತಂಡಕ್ಕೆ ಏನು ಮಾಡಲಿದ್ದಾರೆ ಎಂಬುದು ತಿಳಿದಿತ್ತು ಎಂದು ವಾ ಹೇಳಿದ್ದಾರೆ.

ಅನಿಲ್ ಕುಂಬ್ಳೆ ಆಸ್ಟ್ರೆಲಿಯಾ ವಿರುದ್ಧ 1996ರಿಂದ 2008ರವರೆಗೆ 20 ಟೆಸ್ಟ್​ ಪಂದ್ಯಗಳಲ್ಲಿ 111 ವಿಕೆಟ್​ ಪಡೆದಿದ್ದಾರೆ. 2 ಬಾರಿ 10 ವಿಕೆಟ್​ ಹಾಗೂ 10 ಬಾರಿ 5 ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಒಟ್ಟಾರೆ 132 ಟೆಸ್ಟ್​ ಪಂದ್ಯಗಳನ್ನಾಡಿದ್ದು, 619 ವಿಕೆಟ್ ಪಡೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.