ಸಿಡ್ನಿ : ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ 12 ಮತಗಳಿಂದ ಪ್ಯಾಟ್ ಕಮ್ಮಿನ್ಸ್‌ರನ್ನು ಮಣಿಸಿ ಆಸ್ಟ್ರೇಲಿಯಾದ ಪುರುಷರ ಕ್ರಿಕೆಟ್‌ನಲ್ಲಿ ಅತ್ಯುನ್ನತ ಗೌರವವಾದ ಅಲನ್ ಬಾರ್ಡರ್ ಪದಕ ಗೆದ್ದುಕೊಂಡಿದ್ದಾರೆ.
-
See all the winners and runners up from the #AusCricketAwards right here https://t.co/RpW39PFlIV
— cricket.com.au (@cricketcomau) February 6, 2021 " class="align-text-top noRightClick twitterSection" data="
">See all the winners and runners up from the #AusCricketAwards right here https://t.co/RpW39PFlIV
— cricket.com.au (@cricketcomau) February 6, 2021See all the winners and runners up from the #AusCricketAwards right here https://t.co/RpW39PFlIV
— cricket.com.au (@cricketcomau) February 6, 2021
ಸ್ಟೀವ್ ಸ್ಮಿತ್ ಮೂರನೇ ಬಾರಿಗೆ ಪ್ರತಿಷ್ಠಿತ ಪದಕ ಗೆಲ್ಲುತ್ತಿದ್ದಾರೆ. ಕಳೆದ ವರ್ಷ ಡೇವಿಡ್ ವಾರ್ನರ್ ಒಂದು ಮತದಿಂದ ಸ್ಟೀವ್ ಸ್ಮಿತ್ರನ್ನ ಸೋಲಿಸಿ ಪದಕ ಪಡೆದುಕೊಂಡಿದ್ದರು.
ಈ ವರ್ಷ ಸ್ವೀವ್ ಸ್ಮಿತ್ ಆಸ್ಟ್ರೇಲಿಯಾ ಪರ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 45.75 ಸರಾಸರಿಯಲ್ಲಿ 4 ಅರ್ಧಶತಕ ಹಾಗೂ 4 ಶತಕ ಸೇರಿದಂತೆ 1,098 ರನ್ಗಳಿಸಿದ್ದಾರೆ.
"ನನಗೆ ಸ್ವಲ್ಪ ಆಶ್ಚರ್ಯವಾಯಿತು. ನನಗೆ ಗೊತ್ತಿಲ್ಲ, ನಾನು ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದಕ್ಕೆ ಹೆಚ್ಚು ಮತಗಳು ನನಗೆ ಬಂದಿರಬಹುದೆಮದು ನಾನು ಭಾವಿಸುತ್ತೇನೆ. ಕಳೆದ ವರ್ಷ ನಾನು ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದೆ ಎಂದು ನನಗೆ ಅನಿಸುತ್ತಿದೆ ಎಂದು ಪದಕ ಗೆದ್ದ ನಂತರ ಸ್ಮಿತ್ ಪ್ರತಿಕ್ರಿಯಿಸಿದ್ದಾರೆ.
ಓದಿ : ಜೋ ರೂಟ್ ಮತ್ತೊಂದು ದಾಖಲೆ: ಶತಕದ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ
"ನಾನು ಅದನ್ನು ನಿರೀಕ್ಷಿಸಿರಲಿಲ್ಲ. ಮಾರ್ನಸ್ ಅಥವಾ ಪ್ಯಾಟ್ ಕಮ್ಮಿನ್ಸ್ ಬಹುಶಃ ಮುಂಚೂಣಿಯಲ್ಲಿದ್ದಾರೆ ಎಂದು ನಾವು ಭಾವಿಸಿದೆವು. ಯಾಕೆಂದರೆ, ಅವರಿಬ್ಬರೂ ಅಸಾಧಾರಣ ಪ್ರದರ್ಶನ ನೀಡಿದ್ದರು. ನಾನು ರೋಮಾಂಚನಗೊಂಡಿದ್ದೇನೆ, ಮೂರನೇ ಬಾರಿ ನನಗೆ ಪ್ರಶಸ್ತಿ ಬಂದಿರುವುದಕ್ಕೆ ತುಂಬಾ ಖುಷಿಯಾಗಿದೆ. ಇನ್ನು ಮುಂದೆ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡಲು ಬಯಸುತ್ತೇನೆ ಎಂದಿದ್ದಾರೆ.
ಇನ್ನು, ಆಸ್ಟ್ರೇಲಿಯಾದ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಬೆತ್ ಮೂನಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಗೆದ್ದಿದ್ದಾರೆ, ಇದನ್ನು ಅತ್ಯುತ್ತಮ ಮಹಿಳಾ ಕ್ರಿಕೆಟಿಗರಿಗೆ ನೀಡಲಾಗುತ್ತದೆ.
ಪ್ರಶಸ್ತಿ ವಿಜೇತರು:
- ಅಲನ್ ಬಾರ್ಡರ್ ಪದಕ - ಸ್ಟೀವ್ ಸ್ಮಿತ್
- ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿ - ಬೆತ್ ಮೂನಿ
- ವರ್ಷದ ಪುರುಷರ ಟೆಸ್ಟ್ ಆಟಗಾರ - ಪ್ಯಾಟ್ ಕಮ್ಮಿನ್ಸ್
- ಪುರುಷರ ಏಕದಿನ ಆಟಗಾರ - ಸ್ಟೀವ್ ಸ್ಮಿತ್
- ವರ್ಷದ ಮಹಿಳಾ ಏಕದಿನ ಆಟಗಾರ್ತಿ - ರಾಚೆಲ್ ಹೇನ್ಸ್
- ವರ್ಷದ ಮಹಿಳಾ ಟಿ- 20 ಆಟಗಾರ್ತಿ - ಬೆತ್ ಮೂನಿ
- ಪುರುಷರ ಟಿ- 20 ವರ್ಷದ ಆಟಗಾರ - ಆಷ್ಟನ್ ಅಗರ್
- ವರ್ಷದ ಬ್ರಾಡ್ಮನ್ ಯುವ ಕ್ರಿಕೆಟಿಗ - ವಿಲ್ ಸದರ್ಲ್ಯಾಂಡ್
- ವರ್ಷದ ಮಹಿಳಾ ದೇಶೀಯ ಆಟಗಾರ್ತಿ - ಎಲಿಸ್ ವಿಲನ್ನಿ
- ವರ್ಷದ ಯುವ ಕ್ರಿಕೆಟಿಗ - ಹನ್ನಾ ಡಾರ್ಲಿಂಗ್ಟನ್
- ಆಸ್ಟ್ರೇಲಿಯಾದ ಕ್ರಿಕೆಟ್ ಹಾಲ್ ಆಫ್ ಫೇಮ್ - ಜಾನಿ ಮುಲ್ಲಾಘ್, ಮರ್ವ್ ಹ್ಯೂಸ್ ಮತ್ತು ಲಿಸಾ ಸ್ಥಾಲೇಕರ್