ETV Bharat / sports

ರವಿಶಾಸ್ತ್ರಿ ಏನು ಮಾಡಿದ್ದಾರೆ? ಟೀಂ ಇಂಡಿಯಾ ಕೋಚ್​ ಬಗ್ಗೆ ಗಂಗೂಲಿ ಮಾತು! - ಬಿಸಿಸಿಐ ನೂತನ ಸಾರಥಿ

ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಅವರ ಜೊತೆ ಮಾತನಾಡಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಾರೆ ಪ್ರಶ್ನೆಗೆ. ಗಂಗೂಲಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ.

ಟೀಂ ಇಂಡಿಯಾ ಕೋಚ್​ ಬಗ್ಗೆ ಗಂಗೂಲಿ ಮಾತು
author img

By

Published : Oct 18, 2019, 4:26 PM IST

ಕೋಲ್ಕತ್ತಾ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಕೆಲವೇ ದಿನಗಳಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹೀಗಿರುವಾಗ ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ.

ಕೋಲ್ಕತ್ತಾದಲ್ಲಿ ಸೌರವ್​ ಗಂಗೂಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಪತ್ರಕರ್ತರೊಬ್ಬರು ನೀವು ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ ಅವರ ಜೊತೆ ಮಾತನಾಡಿದ್ದೀರಾ? ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಗಂಗೂಲಿ, ಯಾಕೆ? ಈಗ ಅವರೇನು ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

Ravi Shastri
ಟೀಂ ಇಂಡಿಯಾ ಕೋಚ್​ ರವಿಶಾಸ್ತ್ರಿ

ಈ ಮೂಲಕ ಗಂಗೂಲಿ ಮತ್ತು ರವಿಶಾಸ್ತ್ರಿ ಮಧ್ಯೆ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾದಂತಿದೆ. 2016ರಲ್ಲಿ ರವಿಶಾಸ್ತ್ರಿ ಮತ್ತು ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕೋಚ್​ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದರು. ಆದ್ರೆ ಅನಿಲ್​ ಕುಂಬ್ಳೆ ಕೋಚ್​ ಆಗಿ ಆಯ್ಕೆಯಾದ ಹಿಂದೆ ಗಂಗೂಲಿ ಕೈವಾಡವಿದೆ ಎಂದು ಶಾಸ್ತ್ರಿ ಆರೋಪಿಸಿದ್ದರು.

ರವಿಶಾಸ್ತ್ರಿ ಆರೋಪಕ್ಕೆ ಉತ್ತರಿಸಿದ್ದ ಸೌರವ್​ ಗಂಗೂಲಿ, ಕುಂಬ್ಳೆ ಅವರನ್ನು ಕೋಚ್ ಆಗಿ ನೇಮಿಸುವ ಹಿಂದೆ ನಾನು ಇದ್ದೇನೆ ಎಂದು ರವಿಶಾಸ್ತ್ರಿ ಭಾವಿಸಿದರೆ, ಅವರು ಮೂರ್ಖರ ಸ್ವರ್ಗದಲ್ಲಿ ವಾಸಿಸುತ್ತಿದ್ದಾರೆ ಎಂದೇ ಅರ್ಥ ಎಂದಿದ್ದರು. ಅಂದಿನಿಂದ ರವಿಶಾಸ್ತ್ರಿ ಮತ್ತು ಗಂಗೂಲಿ ನಡುವೆ ಮನಸ್ತಾಪ ಉಂಟಾಗಿತ್ತು.

Intro:Body:

empty

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.