ETV Bharat / sports

ಇಂದು ಸೌರವ್ ಗಂಗೂಲಿ ಡಿಸ್ಚಾರ್ಜ್: ವುಡ್​​ಲ್ಯಾಂಡ್ಸ್​ ಆಸ್ಪತ್ರೆಯಿಂದ ಮಾಹಿತಿ - ಸೌರವ್ ಗಂಗೂಲಿ ಲೇಟೆಸ್ಟ್ ನ್ಯೂಸ್

15 ಮಂದಿ ವೈದ್ಯರ ಸಲಹೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರನ್ನು ಇಂದು ಆಸ್ಪತ್ರಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ವುಡ್​ಲ್ಯಾಂಡ್ಸ್​​ ಆಸ್ಪತ್ರೆ ಮಾಹಿತಿ ನೀಡಿದೆ.

Sourav Ganguly
ಸೌರವ್ ಗಂಗೂಲಿ
author img

By

Published : Jan 6, 2021, 8:38 AM IST

ಕೋಲ್ಕತ್ತಾ: ಬಿಸಿಸಿಐ ಅಧಯಕ್ಷ ಸೌರವ್ ಗಂಗೂಲಿ ಆರೋಗ್ಯ ಉತ್ತಮವಾಗಿದ್ದು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದು ವುಡ್​ಲ್ಯಾಂಡ್ಸ್​​ ಆಸ್ಪತ್ರೆಯ ಎಂಡಿ ಮತ್ತು ಸಿಇಒ ಡಾ. ರೂಪಾಲಿ ಬಸು ಮಾಧ್ಯಮಗಳಿಗೆ ತಿಳಿಸಿದ್ದಾರೆ.

"ಸೌರವ್ ಗಂಗೂಲಿ ಚೇತರಿಕೆ ಕಂಡಿದ್ದು, ಚೆನ್ನಾಗಿ ಮಲಗಿದ್ದರು, ಉಪಹಾರ ಸೇವಿಸುತ್ತಿದ್ದಾರೆ. ವೈದ್ಯರೊಂದಿಗೆ ಮಾತನಾಡಿದ್ದಾರೆ. ಡಾ ದೇವಿ ಶೆಟ್ಟಿ ಕೂಡ ಗಂಗೂಲಿ ಅವರನ್ನು ಪರೀಕ್ಷೀಸಿದ್ದಾರೆ, ನಮ್ಮ ವೈದ್ಯರೊಂದಿಗೂ ದೈಹಿಕವಾಗಿ ತಮ್ಮ ಸಮಯವನ್ನು ಕಳೆದಿದ್ದಾರೆ" ಎಂದು ಡಾ ಬಸು ಹೇಳಿದರು.

"ನಾವು ಬಹಳ ಅನುಭವಿ ವೈದ್ಯಕೀಯ ಮಂಡಳಿಯ 13 ಸದಸ್ಯರು ಮತ್ತು ಇಬ್ಬರು ತಜ್ಞರ ಅಭಿಪ್ರಾಯಗಳೊಂದಿಗೆ, ಒಮ್ಮತದ ನಿರ್ಧಾರವನ್ನು ಪುನರ್ ದೃಢೀಕರಿಸುತ್ತೇವೆ, ಸೌರವ್ ಅವರನ್ನು ಜನವರಿ 6 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ನಾವು ನಿರ್ಧರಿಸಿದ್ದೇವೆ. ವೈದ್ಯರು ಮತ್ತು ದಾದಿಯರು ಮನೆಯಲ್ಲಿ ನಿತ್ಯವೂ ಮೇಲ್ವಿಚಾರಣೆ ಮಾಡುತ್ತಾರೆ. ಸುಮಾರು ಎರಡು ಮೂರು ವಾರಗಳ ನಂತರ ಮುಂದಿನ ಕಾರ್ಯವಿಧಾನಗಳು ಅಥವಾ ವೈದ್ಯಕೀಯ ಪರೀಕ್ಷೆಗಳಿಗೆ ಸೌರವ್ ಸಿದ್ಧರಾಗುತ್ತಾರೆ" ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.