ETV Bharat / sports

ಸಚಿನ್​ ಸ್ಟ್ರೈಕ್​ನಲ್ಲಿ ಬ್ಯಾಟಿಂಗ್​ ಹೋಗದಿರಲು ನೀಡುತ್ತಿದ್ದ ಎರಡು ಕಾರಣ ಬಹಿರಂಗಪಡಿಸಿದ ಗಂಗೂಲಿ - ಗಂಗೂಲಿ-ಸಚಿನ್​

ಭಾರತದ ಪರ ಗಂಗೂಲಿ ಹಾಗೂ ಸಚಿನ್​ ತೆಂಡೂಲ್ಕರ್​ ಸಾಕಷ್ಟು ಬಾರಿ ಆರಂಭಿಕರಾಗಿ ಕಣಕ್ಕಿಳಿದದಿದ್ದಾರೆ. ಆದರೆ ಯಾವಾಗಲು ಗಂಗೂಲಿಯೇ ಮೊದಲ ಎಸೆತವನ್ನು ಎದರಿಸಬೇಕಿತ್ತಂತೆ. ಅತಿ ಹೆಚ್ಚು ರನ್​ ಸರದಾರರಾಗಿರುವ ಸಚಿನ್​ ಸ್ಟ್ರೈಕ್​ನಲ್ಲಿ ನಿಂತು ಮೊದಲ ಎಸೆತವನ್ನು ಎದುರಿಸಿದ್ದು, ಬಹಳ ಕಡಿಮೆ ಅದೂ ನನ್ನ ಒತ್ತಡದಿಂದ ಬೆರಳೆಣಿಕೆಯಷ್ಟು ಪಂದ್ಯದಲ್ಲಿ ಮಾತ್ರ ಇನ್ನಿಂಗ್ಸ್​ ಆರಂಭಿಸಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

ಸೌರವ್​ ಗಂಗೂಲಿ-ಸಚಿನ್​ ತೆಂಡೂಲ್ಕರ್​
ಸೌರವ್​ ಗಂಗೂಲಿ-ಸಚಿನ್​ ತೆಂಡೂಲ್ಕರ್​
author img

By

Published : Jul 6, 2020, 7:49 PM IST

ಮುಂಬೈ: ಟೆಸ್ಟ್​ ಹಾಗೂ ಏಕದಿನ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​, ಶತಕ ಸೇರಿದಂತೆ ಹಲವಾರು ಬ್ಯಾಟಿಂಗ್​ ದಾಖಲೆಯನ್ನು ಹೊಂದಿರುವ ಸಚಿನ್​ ತೆಂಡೂಲ್ಕರ್​ ಆರಂಭಿಕನಾಗಿ ಕಣಕ್ಕಿಳಿದರೂ ಸ್ಟೈಕ್​ನಲ್ಲಿ ನಿಂತು ಮೊದಲ ಎಸೆತವನ್ನು ಎದುರಿಸುತ್ತಿರಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಭಾರತ ತಂಡ ಮಾಜಿ ನಾಯಕ ಸೌರವ್​ ಗಂಗೂಲಿ ಬಹಿರಂಗಪಡಿಸಿದ್ದಾರೆ.

ಬಿಸಿಸಿಐ ಸಲುವಾಗಿ ಮಯಾಂಕ್​ ಅಗರ್​ವಾಲ್​ ನಡೆಸಿದ ಲೈವ್​ ಸಂವಾದದ ವೇಳೆ ಹಲವಾರು ಕೂತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿರುವ ಗಂಗೂಲಿ ಸಚಿನ್​ ಕುರಿತ ಮಹತ್ವದ ಸಂಗತಿಯೊಂದನ್ನು ಅಭಿಮಾನಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

ಭಾರತದ ಪರ ಗಂಗೂಲಿ ಹಾಗೂ ಸಚಿನ್​ ತೆಂಡೂಲ್ಕರ್​ ಸಾಕಷ್ಟು ಬಾರಿ ಆರಂಭಿಕರಾಗಿ ಕಣಕ್ಕಿಳಿದದಿದ್ದಾರೆ. ಆದರೆ ಯಾವಾಗಲು ಗಂಗೂಲಿಯೇ ಮೊದಲ ಎಸೆತವನ್ನು ಎದರಿಸಬೇಕಿತ್ತಂತೆ. ಅತಿ ಹೆಚ್ಚು ರನ್​ ಸರದಾರರಾಗಿರುವ ಸಚಿನ್​ ಸ್ಟ್ರೈಕ್​ನಲ್ಲಿ ನಿಂತು ಮೊದಲ ಎಸೆತವನ್ನು ಎದುರಿಸಿದ್ದು, ಬಹಳ ಕಡಿಮೆ ಅದೂ ನನ್ನ ಒತ್ತಡದಿಂದ ಬೆರಳೆಣಿಕೆಯಷ್ಟು ಪಂದ್ಯದಲ್ಲಿ ಮಾತ್ರ ಇನ್ನಿಂಗ್ಸ್​ ಆರಂಭಿಸಿದ್ದಾರೆ ಎಂದು ಗಂಗೂಲಿ ಹೇಳಿದ್ದಾರೆ.

ಈ ವೇಳೆ ಸಚಿನ್ ನಾನ್ ಸ್ಟ್ರೈಕ್​ನಲ್ಲಿ ನಿಲ್ಲಲು ಎರಡು ಕಾರಣ ಹೇಳಿದ್ದರಂತೆ, ಉತ್ತಮ ಫಾರ್ಮ್ ಮತ್ತೊಂದು ಕಳಪೆ ಫಾರ್ಮ್. ನಾನು ಉತ್ತಮ ಫಾರ್ಮ್​ನಲ್ಲಿದ್ದೇನೆ ಈಗ ಯಾವುದೇ ಬದಲಾವಣೆ ಮಾಡುವುದು ಬೇಡ ನೀನೆ ಇನ್ನಿಂಗ್ಸ್​ ಆರಂಭಿಸು ಎಂದು, ಮತ್ತೊಂದು ನಾನು ಉತ್ತಮ ಫಾರ್ಮ್​ನಲ್ಲಿಲ್ಲ, ಹಾಗಾಗಿ ನಾನ್​ಸ್ಟ್ರೈಕ್​ನಲ್ಲಿ ಇರುವುದೇ ಸೂಕ್ತ ಎಂದು ಎರಡು ಕಾರಣಗಳನ್ನು ನೀಡುತ್ತಿದ್ದರು ಎಂದು ದಾದಾ ಹೇಳಿದ್ದಾರೆ.

ಅದರೂ ಒಮ್ಮೊಮ್ಮೆ ನಾನು ಸಚಿನ್ ಗಿಂತ ವೇಗವಾಗಿ ಹೋಗಿ ನಾನ್​ಸ್ಟ್ರೈಕ್​ನಲ್ಲಿ ನಿಂತು ಬಿಡುತ್ತಿದ್ದೆ. ಆ ಸಂದರ್ಭದಲ್ಲಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಾರಣ ಸಚಿನ್​ ಅನಿವಾರ್ಯವಾಗಿಸ್ಟ್ರೈಕ್ ತೆಗೆದುಕೊಳ್ಳುತ್ತಿದ್ದರೂ ಎಂದು, ಹೀಗೆ ಒಂದೆರೆಡು ಬಾರಿ ನಡೆದಿತ್ತು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.