ಮುಂಬೈ: ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಡೆಲ್ಲಿ ತಂಡದ ನಾಯಕ ಶ್ರೇಯಸ್ ಅಯ್ಯರ್ ಶನಿವಾರ ಸಿಎಸ್ಕೆ ವಿರುದ್ಧದ ಮೊದಲ ಪಂದ್ಯಕ್ಕೂ ಮುನ್ನ ಆಟಗಾರರಿಗೆ ವಿಶೇಷ ಸಂದೇಶ ರವಾನಿಸಿ ಶುಭ ಕೋರಿದ್ದಾರೆ.
ಶನಿವಾರ ಐಪಿಎಲ್ನ 2ನೇ ಪಂದ್ಯ ನಡೆಯಲಿದೆ. ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಯುವ ನಾಯಕ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬೈನ ವಾಂಖೆಡೆಯಲ್ಲಿ ಎದುರಿಸಲಿದೆ. ಇತ್ತೀಚೆಗೆ ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶ್ರೇಯಸ್ ಅಯ್ಯರ್ ಆಟಗಾರರಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದು, ಆ ಧ್ವನಿಯಿರುವ ಆಡಿಯೋವನ್ನು ಡೆಲ್ಲಿ ತಂಡದ ತನ್ನ ಟ್ವಿಟರ್ನಲ್ಲಿ ಶೇರ್ ಮಾಡಿಕೊಳ್ಳಲಾಗಿದೆ.
-
We will miss you dearly, @ShreyasIyer15 🥺
— Delhi Capitals (@DelhiCapitals) April 10, 2021 " class="align-text-top noRightClick twitterSection" data="
For you and for all our fans, the DC family will give it their absolute all in #IPL2021 🙌🏼#YehHaiNayiDilli #CSKvDC pic.twitter.com/yPVacPJ7VH
">We will miss you dearly, @ShreyasIyer15 🥺
— Delhi Capitals (@DelhiCapitals) April 10, 2021
For you and for all our fans, the DC family will give it their absolute all in #IPL2021 🙌🏼#YehHaiNayiDilli #CSKvDC pic.twitter.com/yPVacPJ7VHWe will miss you dearly, @ShreyasIyer15 🥺
— Delhi Capitals (@DelhiCapitals) April 10, 2021
For you and for all our fans, the DC family will give it their absolute all in #IPL2021 🙌🏼#YehHaiNayiDilli #CSKvDC pic.twitter.com/yPVacPJ7VH
"ಪ್ರೀತಿಯ ಡೆಲ್ಲಿ, ನಾವೆಲ್ಲಾ ಪ್ರೀತಿಸುವ ತಂಡದ ಒಬ್ಬ ಅಭಿಮಾನಿಯಾಗಿ ನಾನು ಇಂದು ಮಾತನಾಡುತ್ತಿದ್ದೇನೆ. ನಾವು ಯಾವಾಗಲೂ ತೋರುವ ಹೋರಾಟವನ್ನು ಈ ಬಾರಿಯೂ ತೋರಬೇಕಿದೆ. ಅದು ಸುಲಭವಲ್ಲ ಎಂದು ನಮಗೆ ತಿಳಿದಿದೆ. ಆದರೆ ಕಪ್ ಎತ್ತಿ ಹಿಡಿಯಲು ಏನು ಬೇಕಾಗುತ್ತದೆ ಎಂದು ನಮಗೆಲ್ಲಾ ತಿಳಿದಿದೆ. ನಾವು ಮೊದಲಿಗಿಂತ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ನಾವು ಮೈದಾನದಲ್ಲೂ ಹಿಂದಿಗಿಂತ ಕಠಿಣ ಪ್ರಯತ್ನವನ್ನು ಇರಿಸಿದ್ದೇವೆ ಮತ್ತು ಪ್ರಮುಖ ಭಾಗವೆಂದರೆ ನಾವು ಕೇವಲ ತಂಡವಾಗಿರದೆ ಅದನ್ನು ಮೀರಿ ಹೋಗಬೇಕಿದೆ. ಅದರ ಬಗ್ಗೆ ಯಾವುದೇ ತಪ್ಪನ್ನು ಮಾಡಬೇಡಿ" ಎಂದು ಶ್ರೇಯಸ್ ಹೇಳಿದ್ದಾರೆ.
"ನಿಮ್ಮ ಪ್ರತಿಯೊಂದು ಪಂದ್ಯದಲ್ಲೂ ಯಾವುದೋ ಒಂದು ಮೂಲೆಯಲ್ಲಿ ನಾನಿರುತ್ತೇನೆ. ಹರ್ಷೋದ್ಘಾರದೊಂದಿಗೆ ನಿಮ್ಮ ದೊಡ್ಡ ಬೆಂಬಲಿಗ. ಯಾವಾಗಲೂ ಪ್ರೀತಿಸುವ ನಿಮ್ಮ ಶ್ರೇಯಸ್.. ಕಮ್ ಆನ್ ಡೆಲ್ಲಿ. " ಎಂದು ಡೆಲ್ಲಿ ತಂಡಕ್ಕೆ ಶುಭ ಕೋರಿದ್ದಾರೆ.
ಅಯ್ಯರ್ ಕಳೆದ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಫೀಲ್ಡಿಂಗ್ ವೇಳೆ ಬಿದ್ದು ಭುಜದ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಏಪ್ರಿಲ್ 7ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮುಂದಿನ 3ರಿಂದ 4 ತಿಂಗಳು ವಿಶ್ರಾಂತಿಯಲ್ಲಿರಬೇಕಿದೆ.
ಇದನ್ನು ಓದಿ: ಡೆಲ್ಲಿ vs ಚೆನ್ನೈ: ಧೋನಿಯಿಂದ ಕಲಿತ ಪಾಠವನ್ನು ಸಿಎಸ್ಕೆ ವಿರುದ್ಧ ಪರೀಕ್ಷಿಸಲು ಪಂತ್ ಕಾತರ