ಆಲೂರು:ಗೋವಾ ವಿರುದ್ಧದ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಸಿಡಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ಅತಿ ಹೆಚ್ಚುರನ್ಗಳಿಸಿದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆಗೆ ಪಾತ್ರರಾದರು.
ಕೇವಲ 125 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಸಂಜು ಸ್ಯಾಮನ್ಸ್ ಭಾರತದ ಪರ ವೇಗವಾಗಿ ಈ ಸಾಧನೆ ಮಾಡಿದ್ದರು. ಏಕದಿನ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಆಗಿ ಲಿಸ್ಟ್ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಮೂರನೇ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಹಾಗೂ ಅತಿ ಹೆಚ್ಚು ರನ್ಗಳಿಸಿದ ವಿಕೆಟ್ ಕೀಪರ್ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ. ಸ್ಯಾಮ್ಸನ್ 129 ಎಸೆತಗಳಲ್ಲಿ 21 ಬೌಂಡರಿ ಹಾಗೂ 10 ಸಿಕ್ಸರ್ ಸೇರಿದಂತೆ 212 ರನ್ ಗಳಿಸಿದ್ದರು.
ಸಂಜುರನ್ನು ಬಿಟ್ಟರೆ ಪಾಕಿಸ್ತಾನದ ಅಬೀದ್ ಅಲಿ 209 ರನ್ಗಳಿಸಿ ಅತಿ ಹೆಚ್ಚುರನ್ಗಳಿಸಿದ ವಿಶ್ವದ ಎರಡನೇ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಕಮ್ರನ್ ಅಕ್ಮಲ್ 200 ರನ್ಗಳಿಸಿ 3ನೇ ಸ್ಥಾನದಲ್ಲಿದ್ದರೆ, ಭಾರತದ ಮಾಜಿ ನಾಯಕ ಎಂಎಸ್ ಧೋನಿ 183 ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ಗಳಿಸಿರುವ ವಿಕೆಟ್ ಕೀಪರ್ ಆಗಿದ್ದಾರೆ. 178 ರನ್ಗಳಿಸಿರುವ ಡಿಕಾಕ್ 2ನೇ ಸ್ಥಾನದಲ್ಲಿದ್ದಾರೆ.