ETV Bharat / sports

ಸಂದೀಪ್​ ಶರ್ಮಾ ಮಿಂಚು: ಮುಂಬೈ ತಂಡವನ್ನು 149 ರನ್​ಗಳಿಗೆ ನಿಯಂತ್ರಿಸಿದ ಹೈದರಾಬಾದ್​

ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಹೈದರಾಬಾದ್​ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿ 149 ರನ್​ಗಳಿಗೆ ನಿಯಂತ್ರಿಸಿದೆ

ಮುಂಬೈ ತಂಡವನ್ನು 149 ರನ್​ಗಳಿಗೆ ನಿಯಂತ್ರಿಸಿದ ಹೈದರಾಬಾದ್​

author img

By

Published : Nov 3, 2020, 9:36 PM IST

ಶಾರ್ಜಾ : ಸಂದೀಪ್ ಶರ್ಮಾ ಹಾಗೂ ಶಹ್ಬಾಜ್ ನದೀಮ್​ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಹೈದರಾಬಾದ್​ ತಂಡ 149 ರನ್​ಗಳಿಗೆ ನಿಯಂತ್ರಿಸಲು ಯಶಸ್ವಿಯಾಗಿದೆ.

ನಿರ್ಣಾಯಕ ಪಂದ್ಯದಲ್ಲಿ ಟಾಸ್​ ಗೆದ್ದು ಮುಂಬೈ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದ ಹೈದರಾಬಾದ್​ ಆರಂಭದಿಂದಲೇ ಪ್ರಾಬಲ್ಯ ಸಾಧಿಸಿತು. ಆರಂಭಿಕರಾದ ರೋಹಿತ್ ಶರ್ಮಾ(4) ಮತ್ತು ಕ್ವಿಂಟನ್ ಡಿಕಾಕ್​(25) ರನ್ನು ಪವರ್​ ಪ್ಲೇನಲ್ಲೇ ಔಟ್ ಮಾಡುವ ಮೂಲಕ ಸಂದೀಪ್​ ಶರ್ಮಾ ಹೈದರಾಬಾದ್​ಗೆ ಭರ್ಜರಿ ಮುನ್ನಡೆ ದೊರೆಕಿಸಿಕೊಟ್ಟರು. ನಂತರ ಬಂದ ಸೂರ್ಯಕುಮಾರ್​ ಯಾದವ್​ 33, ಹಾಗೂ ಇಶಾನ್ ಕಿಶನ್​ 36 ರನ್​ಗಳಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಆದರೆ ಮತ್ತೆ ಬೌಲಿಂಗ್​ನಲ್ಲಿ ಪ್ರಾಬಲ್ಯ ಮೆರೆದ ಎಸ್​ಆರ್​ಹೆಚ್​ ಬೌಲರ್​ಗಳು ಕೃನಾಲ್​ ಪಾಂಡ್ಯ (0)ಹಾಗೂ ಸೌರಭ್ ತಿವಾರಿ(1), ಕೌಲ್ಟರ್ ನೈಲ್ (1) ವಿಕೆಟ್ ಪಡೆದು ಮತ್ತೆ ಮುಂಬೈಗೆ ಆಘಾತ ನೀಡಿದರು.

ಆದರೆ ಕೊನೆಯಲ್ಲಿ ಅಬ್ಬರಿಸಿದ ಪೊಲಾರ್ಡ್​ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 41 ರನ್​ಗಳಿಸಿ ಮುಂಬೈ ತಂಡ 149 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ಹೈದರಾಬಾದ್ ಪರ ಸಂದೀಪ್ ಶರ್ಮಾ 34ಕ್ಕೆ 3, ಜೇಸನ್ ಹೋಲ್ಡರ್​ 25ಕ್ಕೆ 2, ಶಹ್ಬಾಜ್ ನದೀಮ್ 19ಕ್ಕೆ2 ಹಾಗೂ ರಶೀದ್​ ಖಾನ್​ 32ಕ್ಕೆ 1 ವಿಕೆಟ್​ ಪಡೆದು ಮುಂಬೈ ತಂಡವನ್ನು 150ರೊಳಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.