ETV Bharat / sports

ಇಂಗ್ಲೆಂಡ್​ ತಂಡಕ್ಕೆ ಮರಳಿದ ರೂಟ್​, ಸರಣಿ ಸಮಬಲದತ್ತ ಇಂಗ್ಲೆಂಡ್​ ಚಿತ್ತ

ಮ್ಯಾಂಚೆಸ್ಟರ್‌ನಲ್ಲಿ 'ರೈಸ್​ ದ ಬ್ಯಾಟ್‘​ (ವಿಸ್ಡನ್​) ಸರಣಿಯ ಎರಡನೇ ಪಂದ್ಯ ನಡೆಯಲಿದ್ದು, ಎರಡೂ ತಂಡಗಳು ಗೆಲುವಿನ ನಿರೀಕ್ಷೆಯಲ್ಲಿವೆ. ಇಂಗ್ಲೆಂಡ್​​ಗೆ ಸರಣಿ ಉಳಿಸಿಕೊಳ್ಳುವ ಚಿಂತೆಯಾದರೆ, ವಿಂಡೀಸ್​ ಪಂದ್ಯ ಗೆದ್ದು ಇತಿಹಾಸ ಬರೆಯಲು ಸಜ್ಜಾಗಿದೆ. 1988ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್​ ನೆಲದಲ್ಲಿ ವಿಂಡೀಸ್​ ಟೆಸ್ಟ್​ ಸರಣಿ ಗೆದ್ದಿತ್ತು.

Root returns to England team
ತಂಡಕ್ಕೆ ಮರಳಿದ ಜೋ ರೂಟ್​
author img

By

Published : Jul 15, 2020, 4:17 PM IST

ಮ್ಯಾಂಚೆಸ್ಟರ್​: ಮೊದಲ ಟೆಸ್ಟ್​ ಪಂದ್ಯದಲ್ಲಿ 4 ವಿಕೆಟ್‌ಗಳ​ ರೋಚಕ ಸೋಲುಕಂಡು ಸರಣಿಯಲ್ಲಿ ಹಿನ್ನೆಡೆ ಸಾಧಿಸಿರುವ ಆತಿಥೇಯ ಇಂಗ್ಲೆಂಡ್​ ತಂಡಕ್ಕೆ ನಾಯಕ ಜೋ ರೂಟ್​ ಆಗಮನ ಹೆಚ್ಚು ಆತ್ಮವಿಶ್ವಾಸವನ್ನು ತುಂಬಿದೆ. ಗುರುವಾರದಿಂದ ಆರಂಭವಾಗಲಿರುವ ಎರಡನೇ ಟೆಸ್ಟ್​ ಗೆದ್ದು ಸರಣಿ ಸಮಬಲ ಸಾಧಿಸುವ ಆಲೋಚನೆಯಲ್ಲಿದೆ ಆಂಗ್ಲರ ತಂಡವಿದೆ.

ತಮ್ಮ ಪತ್ನಿ ಎರಡನೇ ಮಗುವಿಗೆ ಜನ್ಮ ನೀಡಿದ್ದರಿಂದ ರೂಟ್​ ಮೊದಲ ಟೆಸ್ಟ್​ನಿಂದ ಹೊರಗುಳಿದು ಪತ್ನಿಯ ಜೊತೆಯಲ್ಲಿದ್ದರು. ಇದೀಗ ಮರಳಿ ತಂಡ ಸೇರಿಕೊಂಡಿದ್ದಾರೆ. ಅವರು ಮೊದಲ ಪಂದ್ಯದಲ್ಲಿ ಗಮನ ಸೆಳೆಯುವಲ್ಲಿ ವಿಫಲರಾಗಿರುವ ಜೋ, ಡೆನ್ಲಿ ಬದಲಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಜಾಕ್ ಕ್ರಾವ್ಲೀ ಎರಡನೇ ಇನ್ನಿಂಗ್ಸ್​ನಲ್ಲಿ 76 ರನ್​ಗಳಿಸಿರುವುದರಿಂದ ಅವರ ಸ್ಥಾನ ಭದ್ರವಾಗಿರಲಿದ್ದು ಡೆನ್ಲಿಯೇ ರೂಟ್​ಗೆ ಜಾಗ ಮಾಡಿಕೊಡಬೇಕಾಗಿದೆ.

ಅನುಭವಿ ವಿಕೆಟ್‌ ಕೀಪರ್‌ ಬಟ್ಲರ್‌ ಹಿಂದಿನ 15 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಒಂದೂ ಅರ್ಧಶತಕ ದಾಖಲಿಸಿಲ್ಲ. ಅಲ್ಲದೆ ವಿಂಡೀಸ್‌ ಎದುರಿನ ಪಂದ್ಯದಲ್ಲಿ ಅವರು ಜರ್ಮೈನ್‌ ಬ್ಲ್ಯಾಕ್‌ವುಡ್‌ ಅವರ ಕ್ಯಾಚ್‌ ಕೂಡ ಕೈಚೆಲ್ಲಿದ್ದರು. ಈ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡಿದ್ದ ಬ್ಲ್ಯಾಕ್‌ವುಡ್‌ 95 ರನ್‌ ಕಲೆಹಾಕಿ ಕೆರಿಬಿಯನ್‌ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇನ್ನೆರಡು ಪಂದ್ಯಗಳಲ್ಲಿ ಮಿಂಚದೇ ಹೋದರೆ ಬಟ್ಲರ್‌ ಅವರ ಸ್ಥಾನಕ್ಕೆ ಕುತ್ತು ಎದುರಾಗಲಿದೆ ಎಂಬ ಮಾತನ್ನು ಕೋಚ್​ ಸಿಲ್ವರ್​ವುಡ್​ ಅಲ್ಲಗಳೆದಿದ್ದಾರೆ.

ಜೇಸನ್​ ಹೋಲ್ಡರ್​
ಜೇಸನ್​ ಹೋಲ್ಡರ್​

ಬಟ್ಲರ್‌ ಅವರ ಸಾಮರ್ಥ್ಯವನ್ನು ಪ್ರಶ್ನಿಸುವ ಮೂಲಕ ಅವರನ್ನು ಇನ್ನಷ್ಟು ಒತ್ತಡಕ್ಕೆ ಸಿಲುಕಿಸುವ ಕೆಲಸವನ್ನು ನಾನು ಮಾಡುವುದಿಲ್ಲ. ಲಯ ಕಂಡುಕೊಳ್ಳಲು ಅವರಿಗೆ ಇನ್ನಷ್ಟು ಅವಕಾಶ ನೀಡುತ್ತೇವೆ. ಬೆನ್​ ಫೋಕ್ಸ್​ ಕೂಡ ಉತ್ತಮ ವಿಕೆಟ್​ ಕೀಪರ್​, ಅವರು ನಮ್ಮ ಬ್ಯಾಕಪ್​ ಲಿಸ್ಟ್​ನಲ್ಲಿರಲಿದ್ದಾರೆ ಎಂದು ಸಿಲ್ವರ್‌ವುಡ್‌ ತಿಳಿಸಿದ್ದಾರೆ.

ಕಳೆದ ಪಂದ್ಯದಲ್ಲಿ ಹೊರಗುಳಿದಿದ್ದ ಸ್ಟುವರ್ಟ್​ ಬ್ರಾಡ್​ ಎರಡನೇ ಪಂದ್ಯದಲ್ಲಿ ಅವಕಾಶ ಪಡೆಯುವರೇ ಎಂಬುದು ಇನ್ನು ಖಚಿತವಾಗಿಲ್ಲ. ಆದರೆ ಈಗಾಗಲೆ ಬ್ರಾಡ್​ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಈಗಾಗಲೆ ಮಾಜಿ ಕ್ರಿಕೆಟಿಗರಿಂದ ಟೀಕೆ ಕೇಳಿ ಬರುತ್ತಿದೆ. ಹಿರಿಯ ಬೌಲರ್​ಗೆ ಅವಕಾಶ ದೊರೆತರೆ ಎರಡನೇ ಪಂದ್ಯದಿಂದ ಆರ್ಚರ್​ ಅಥವಾ ಮಾರ್ಕ್​ವುಡ್​ ಹೊರಗುಳಿಯಬೇಕಾಗುತ್ತದೆ. ಇತ್ತ ವೆಸ್ಟ್​ ಇಂಡೀಸ್​ ಮೊದಲ ಪಂದ್ಯದಲ್ಲಿ ಗೆದ್ದ ತಂಡವನ್ನೇ ಎರಡನೇ ಟೆಸ್ಟ್​ನಲ್ಲಿ ಕಣಕ್ಕಿಳಿಸುವ ಸಾಧ್ಯತೆಯಿದೆ.

ಇಂಗ್ಲೆಂಡ್​ ತಂಡ

ಜೋ ರೂಟ್​,ಬೆನ್​ಸ್ಟೋಕ್ಸ್​(ಉಪ ನಾಯಕ), ಜೇಮ್ಸ್​ ಆ್ಯಂಡರ್ಸನ್​, ಜೋರ್ಫರಾ ಆರ್ಚರ್​, ಡೊಮೆನಿಕ್​ ಬೆಸ್​, ಸ್ಟುವರ್ಟ್​ ಬ್ರಾಡ್​, ರೋನಿ ಬರ್ನ್ಸ್​, ಜೋಸ್​ ಬಟ್ಲರ್​, ಜಾಕ್​ ಕ್ರೇವ್ಲೀ, ಜೋ ಡೆನ್ಲಿ, ಒಲ್ಲಿ ಪೋಪ್​, ಡಾಮ್​ ಸಿಬ್ಲಿ, ಕ್ರಿಸ್​ ವೋಕ್ಸ್​, ಮಾರ್ಕ್​ ವುಡ್​/ ಸ್ಟುವರ್ಟ್​ ಬ್ರಾಡ್​.

ವೆಸ್ಟ್​ ಇಂಡೀಸ್ ತಂಡ

ಕ್ರೇಗ್‌ ಬ್ರಾತ್‌ವೇಟ್‌, ಜಾನ್‌ ಕ್ಯಾಂಪ್‌ಬೆಲ್‌, ಶಾಯ್​ ಹೋಪ್‌, ಶಮರ್​ ಬ್ರೂಕ್ಸ್‌, ರಾಸ್ಟನ್‌ ಚೇಸ್‌, ಜೇಸನ್‌ ಹೋಲ್ಡರ್(ನಾಯಕ) ಜೆರ್ಮೈನ್‌ ಬ್ಲ್ಯಾಕ್‌ವುಡ್‌, ಶೇನ್‌ ಡೊರಿಚ್ (ವಿಕೀ ‌), ‌ ಅಲ್ಜಾರಿ ಜೋಶೆಫ್​‌, ಕೆಮರ್‌ ರೋಚ್, ಶನಾನ್‌ ಗೇಬ್ರಿಯೆಲ್.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.