ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮೂರು ಮಾದರಿಯಿಂದ ಹಲವಾರು ಸ್ಫೋಟಕ ಬ್ಯಾಟ್ಸ್ಮನ್ಗಳು ಬಂದು ಹೋಗಿದ್ದರೂ ಇಲ್ಲಿಯವರಗೆ ಯಾರ ಕೈಯಲ್ಲಾಗದ ದಾಖಲೆಯೊಂದನ್ನು ರೋಹಿತ್ ಶರ್ಮಾ ಮಾಡಿ ತೋರಿಸಿದ್ದಾರೆ.
ಎಲ್ಲಾ ಮಾದರಿಯ ಕ್ರಿಕೆಟ್ನಲ್ಲಿ ಸಿಕ್ಸರ್ಗಳನ್ನು ಯಾವುದೇ ಬೌಲರ್ಗೂ ಬಿಡದೆ ದಂಡಿಸುವ ರೋಹಿತ್ ಸತತ ಎರಡು ವರ್ಷಗಳಲ್ಲಿ 70ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಇವರನ್ನು ಹೊರತುಪಡಿಸಿದರೆ ವಿಶ್ವದ ಯಾವೊಬ್ಬ ಬ್ಯಾಟ್ಸ್ಮನ್ 70ರ ಸನಿಹವೂ ಬಂದಿಲ್ಲ ಎಂಬುದೇ ಆಶ್ಚರ್ಯಕರ ಸಂಗತಿ.
ಕ್ರಿಕೆಟ್ನಲ್ಲಿ ಕ್ರಿಸ್ ಗೇಲ್, ಅಫ್ರಿದಿ, ಎಂ.ಎಸ್.ಧೋನಿ, ವಿಲಿಯರ್ಸ್, ಯುವರಾಜ್ ಸಿಂಗ್ ಅಂತಹ ಸ್ಫೋಟಕ ಬ್ಯಾಟ್ಸ್ಮನ್ಗಳನ್ನು ಕಂಡಿದೆ. ಆದರೆ ವಿಲಿಯರ್ಸ್ ಬಿಟ್ಟರೆ ಯಾರೊಬ್ಬರು 60ರ ಗಡಿ ದಾಟಿಲ್ಲ, ವಿಲಿಯರ್ಸ್ ಮಾತ್ರ 2016ರಲ್ಲಿ 63 ಸಿಕ್ಸರ್ ಬಾರಿಸಿದ್ದರು.
ರೋಹಿತ್ ಶರ್ಮಾ 2017ರಲ್ಲಿ 66, 2018ರಲ್ಲಿ 74 ಹಾಗೂ 2019ರಲ್ಲಿ 72 ಸಿಕ್ಸರ್ ಸಿಡಿಸಿ ಮೂರು ವರ್ಷಗಳಲ್ಲೂ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಕಾಯ್ದುಕೊಂಡು ಬರುತ್ತಿದ್ದಾರೆ. ಅದರಲ್ಲೂ ಸತತ ಎರಡನೇ ಬಾರಿ 70ರ ಗಡಿ ದಾಟಿದ ಏಕೈಕ ಬ್ಯಾಟ್ಸ್ಮನ್ ಎಂಬ ಶ್ರೇಯಕ್ಕೂ ರೋಹಿತ್ ಪಾತ್ರರಾಗಿದ್ದಾರೆ.