ETV Bharat / sports

ಟಿ-20ಯಲ್ಲಿ ಮತ್ತೊಂದು ದಾಖಲೆ: ಮಾರ್ಟಿನ್​ ಗಪ್ಟಿಲ್​ ರೆಕಾರ್ಡ್​​ ಬ್ರೇಕ್​ ಮಾಡಿದ ಹಿಟ್ ​ಮ್ಯಾನ್​!

author img

By

Published : Mar 20, 2021, 8:48 PM IST

ಟೀಂ ಇಂಡಿಯಾ ಉಪನಾಯಕ ರೋಹಿತ್​ ಶರ್ಮಾ ಟಿ-20 ಕ್ರಿಕೆಟ್​ನಲ್ಲಿ ಮತ್ತೊಂದು ರೆಕಾರ್ಡ್​ ನಿರ್ಮಾಣ ಮಾಡಿದ್ದು, ನ್ಯೂಜಿಲ್ಯಾಂಡ್​ನ ಮಾರ್ಟಿನ್ ಗಪ್ಟಿಲ್​ ದಾಖಲೆ ಬ್ರೇಕ್ ಮಾಡಿದ್ದಾರೆ.

Rohit Sharma
Rohit Sharma

ಅಹಮದಾಬಾದ್​: ಹಿಟ್ ​ಮ್ಯಾನ್​ ಖ್ಯಾತಿಯ ರೋಹಿತ್​ ಶರ್ಮಾ ಇಂಗ್ಲೆಂಡ್​ ವಿರುದ್ಧದ ಫೈನಲ್​ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಾಣ ಮಾಡಿದ್ದು, ಈ ಮೂಲಕ ನ್ಯೂಜಿಲ್ಯಾಂಡ್ ಪ್ಲೇಯರ್​ ಗಪ್ಟಿಲ್​ ರೆಕಾರ್ಡ್​ ಬ್ರೇಕ್​ ಮಾಡಿದ್ದಾರೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಕೇವಲ 34 ಎಸೆತಗಳಲ್ಲಿ 64 ರನ್​ ಗಳಿಸಿರುವ ರೋಹಿತ್ ಶರ್ಮಾ ಟಿ-20 ಕ್ರಿಕೆಟ್​ನಲ್ಲಿ ಮಾರ್ಟಿನ್​ ಗಪ್ಟಿಲ್​ ರೆಕಾರ್ಡ್​ ಬ್ರೇಕ್​ ಮಾಡಿದ್ದು, ಇದೀಗ ಚುಟುಕು ಕ್ರಿಕೆಟ್​ನಲ್ಲಿ ಅತಿ ಹೆಚ್ಚು ರನ್​ ಗಳಿಸಿರುವ ಎರಡನೇ ಪ್ಲೇಯರ್​​ ಆಗಿದ್ದಾರೆ.

ಟಿ-20 ಕ್ರಿಕೆಟ್​ನಲ್ಲಿ ರೋಹಿತ್​ ಶರ್ಮಾ 26ನೇ ಅರ್ಧಶತಕ ಸಿಡಿಸಿದ್ದು, ಜತೆಗೆ 111 ಪಂದ್ಯಗಳಿಂದ 2,864 ರನ್ ​ಗಳಿಸಿದ್ದಾರೆ. ಈಗಾಗಲೇ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಟಿ-20 ಕ್ರಿಕೆಟ್​ನಲ್ಲಿ 3 ಸಾವಿರಕ್ಕಿಂತಲೂ ಅಧಿಕ ರನ್ ​ಗಳಿಸಿ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಟಿ20 ಕ್ರಿಕೆಟ್​ನಲ್ಲಿ 9 ಸಾವಿರ ರನ್​ ಪೂರೈಸಿದ ರೋಹಿತ್ ಶರ್ಮಾ

ಉಳಿದಂತೆ ಗಪ್ಟಿಲ್​​ 2,839 ರನ್ ​ಗಳಿಸಿ ಮೂರನೇ ಸ್ಥಾನ ಹಾಗೂ ಫಿಂಚ್​ 2,346 ರನ್ ​ಗಳಿಸಿ 4ನೇ ಸ್ಥಾನದಲ್ಲಿದ್ದಾರೆ. ಇದರ ಜತೆಗೆ ರೋಹಿತ್ ಶರ್ಮಾ ಟಿ-20 ಕ್ರಿಕೆಟ್​ನಲ್ಲಿ 9000+ ರನ್​ ಪೂರೈಸಿದ ಭಾರತದ 2ನೇ ಹಾಗೂ ವಿಶ್ವದ 9ನೇ ಬ್ಯಾಟ್ಸ್​ಮನ್ ಎನಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.