ETV Bharat / sports

ಕೊನೆಯ 2 ಟೆಸ್ಟ್​ ಪಂದ್ಯಗಳಿಂದಲೂ ಹೊರಬಿದ್ದ ರವೀಂದ್ರ ಜಡೇಜಾ

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ ವೇಳೆ ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಎಡಗೈ ಹೆಬ್ಬರಳಿಗೆ ಬಿದ್ದು ಮುರಿದಿತ್ತು. ನಂತರ ಆಸ್ಟ್ರೇಲಿಯಾದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಡೇಜಾ 6 ವಾರಗಳ ವಿಶ್ರಾಂತಿಗೆ ಒಳಗಾಗಿದ್ದರು. ಈ ಕಾರಣದಿಂದ ಇಂಗ್ಲೆಂಡ್​ ವಿರುದ್ಧ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ
author img

By

Published : Feb 11, 2021, 1:47 PM IST

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಗಾಯಕ್ಕೊಳಗಾಗಿದ್ದ ಭಾರತೀಯ ಆಲ್​ರೌಂಡರ್​ ರವೀಂದ್ರ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಪ್ರಸ್ತುತ ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ 4 ಪಂದ್ಯಗಳ ಟೆಸ್ಟ್​ ಸರಣಿಯಿಂದಲೂ ಹೊರಬಿದ್ದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ 2ನೇ ಟೆಸ್ಟ್​ ವೇಳೆ ಪ್ಯಾಟ್​ ಕಮ್ಮಿನ್ಸ್​ ಬೌಲಿಂಗ್​ನಲ್ಲಿ ಚೆಂಡು ಎಡಗೈ ಹೆಬ್ಬರಳಿಗೆ ಬಿದ್ದು ಮುರಿದಿತ್ತು. ನಂತರ ಆಸ್ಟ್ರೇಲಿಯಾದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಜಡೇಜಾ 6 ವಾರಗಳ ವಿಶ್ರಾಂತಿಗೆ ಒಳಗಾಗಿದ್ದರು. ಈ ಕಾರಣದಿಂದ ಇಂಗ್ಲೆಂಡ್​ ವಿರುದ್ಧ ಮೊದಲೆರಡು ಟೆಸ್ಟ್​ ಪಂದ್ಯಗಳಿಗೆ ಅವರನ್ನು ಆಯ್ಕೆ ಮಾಡಿರಲಿಲ್ಲ.

ಜಡೇಜಾ ಚೇತರಿಕೆಗೆ ಮತ್ತಷ್ಟು ಸಮಯದ ಅವಶ್ಯಕತೆಯಿರುವುದರಿಂದ ಅಹ್ಮದಾಬಾದ್‌ನಲ್ಲಿ ನಡೆಯಲಿರುವ ಕೊನೆಯ ಎರಡು ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿಯಲಿದ್ದಾರೆ. ವರದಿಗಳ ಪ್ರಕಾರ ಟೆಸ್ಟ್​ ಸರಣಿಗೆ ಮಾತ್ರವಲ್ಲದೇ ಆಂಗ್ಲರ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಅನುಮಾನ ವ್ಯಕ್ತವಾಗುತ್ತಿದೆ.

ಇದನ್ನು:ಇಂಗ್ಲೆಂಡ್ ವಿರುದ್ಧ ಮತ್ತೊಂದು ಪಂದ್ಯದಲ್ಲಿ ಸೋತರೆ ಕೊಹ್ಲಿ ನಾಯಕತ್ವ ತ್ಯಜಿಸುತ್ತಾರೆ: ಇಂಗ್ಲೆಂಡ್ ಮಾಜಿ​ ಸ್ಪಿನ್ನರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.