ನವದೆಹಲಿ : ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ್ ಸಂಗಕ್ಕಾರ ಅವರನ್ನು ಇಂಡಿಯನ್ ಪ್ರೀಮಿಯರ್ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್ ಮುಂಬರುವ ಐಪಿಎಲ್ ಆವೃತ್ತಿಗಾಗಿ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ನೇಮಕ ಮಾಡಿದೆ.
ಸಂಗಾಕ್ಕರ ಪ್ರಸ್ತುತ ಮೇರಿಲೆಬೋನ್ ಕ್ರಿಕೆಟ್ ಕ್ಲಬ್ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋಚಿಂಗ್ ರಚನೆ, ಹರಾಜು ಯೋಜನೆಗಳು ಮತ್ತು ಕಾರ್ಯತಂತ್ರ, ಪ್ರತಿಭೆಗಳ ಅನ್ವೇಷಣೆ ಹಾಗೂ ನಾಗ್ಪುರದಲ್ಲಿರುವ ರಾಯಲ್ಸ್ ಆಕಾಡೆಮಿಯ ಅಭಿವೃದ್ಧಿ ಸೇರಿದಂತೆ ಪ್ರಾಂಚೈಸ್ನ ಸಂಪೂರ್ಣ ಕ್ರಿಕೆಟ್ಗೆ ಸೇರಿದ ವ್ಯವಸ್ಥೆಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ರಾಜಸ್ಥಾನ್ ರಾಯಲ್ಸ್ ಲೆಜೆಂಡರಿ ಬ್ಯಾಟ್ಸ್ಮನ್ಗೆ ವಹಿಸಿಕೊಡುತ್ತಿದೆ.
-
Adding some 𝗹𝗲𝗴𝗲𝗻𝗱𝗮𝗿𝘆 to the #RoyalsFamily. 💗#WelcomeSanga | #HallaBol | @KumarSanga2 pic.twitter.com/4zREps1PlW
— Rajasthan Royals (@rajasthanroyals) January 24, 2021 " class="align-text-top noRightClick twitterSection" data="
">Adding some 𝗹𝗲𝗴𝗲𝗻𝗱𝗮𝗿𝘆 to the #RoyalsFamily. 💗#WelcomeSanga | #HallaBol | @KumarSanga2 pic.twitter.com/4zREps1PlW
— Rajasthan Royals (@rajasthanroyals) January 24, 2021Adding some 𝗹𝗲𝗴𝗲𝗻𝗱𝗮𝗿𝘆 to the #RoyalsFamily. 💗#WelcomeSanga | #HallaBol | @KumarSanga2 pic.twitter.com/4zREps1PlW
— Rajasthan Royals (@rajasthanroyals) January 24, 2021
"ವಿಶ್ವದ ಪ್ರಮುಖ ಕ್ರಿಕೆಟ್ ಸ್ಪರ್ಧೆಯಲ್ಲಿ ಫ್ರ್ಯಾಂಚೈಸಿಯ ಕ್ರಿಕೆಟ್ ಕಾರ್ಯತಂತ್ರದ ಮೇಲ್ವಿಚಾರಣೆ ಮಾಡುವುದು, ಜೊತೆಗೆ ಐಪಿಎಲ್ ತಂಡದ ಆನ್-ಫೀಲ್ಡ್ ಯಶಸ್ಸಿನ ಭವಿಷ್ಯಕ್ಕೆ ಅಡಿಪಾಯವನ್ನು ಒದಗಿಸುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಿರ್ಮಿಸಿಕೊಡುವುದು. ಹಾಗೂ ಕ್ರಿಕೆಟಿಂಗ್ ಮೂಲಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲು ನನಗೆ ಅದ್ಭುತ ಅವಕಾಶ ಸಿಕ್ಕಿದೆ" ಎಂದು ಸಂಗಕ್ಕಾರ ಅವರ ಹೇಳಿಕೆಯನ್ನು ಆರ್ಆರ್ ಬಿಡುಗಡೆ ಮಾಡಿರುವ ಮಾಧ್ಯಮ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ವಿಶ್ವ ಕ್ರಿಕೆಟ್ನಲ್ಲಿ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಸಂಗಕ್ಕಾರ, ಶ್ರೀಲಂಕಾ ಪರ 16 ವರ್ಷಗಳ ಕಾಲ ಮೂರು ಮಾದರಿಯ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಆಡಿದ್ದು, 28,000ಕ್ಕೂ ಹೆಚ್ಚು ರನ್ಗಳಿಸಿದ್ದಾರೆ.
ಇದನ್ನು ಓದಿ:ಟೆಸ್ಟ್ ಕ್ರಿಕೆಟ್ನಲ್ಲಿ ಆರಂಭಿಕನಾದ್ರೆ ಅದು ನನಗೆ ಸಿಕ್ಕ ವರ ಎಂದು ಭಾವಿಸುವೆ: ವಾಷಿಂಗ್ಟನ್ ಸುಂದರ್