ಲಿಂಕನ್: ಫಿಟ್ನೆಸ್ ಸಾಬೀತುಪಡಿಸಿ ಏಕಾಂಗಿಯಾಗಿ ಕಿವೀಸ್ ಪ್ರವಾಸಕ್ಕೆ ತೆರಳಿದ್ದ ಪೃಥ್ವಿ ಶಾ ನ್ಯೂಜಿಲ್ಯಾಂಡ್ ಎ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಭರ್ಜರಿ 150 ರನ್ಗಳಿಸಿ ಮಿಂಚಿದ್ದಾರೆ.
3 ಅನಧಿಕೃತ ಏಕದಿನ ಪಂದ್ಯ, 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನಾಡಲು ಭಾರತ ಎ ತಂಡ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದೆ. ಈ ಸರಣಿಗಾಗಿ ನಡೆದ ಅಭ್ಯಾಸ ಪಂದ್ಯದಲ್ಲಿ ಯುವ ಆಟಗಾರ ಕಿವೀಸ್ ಬೌಲರ್ಗಳನ್ನು ಚೆಂಡಾಡಿದ್ದಾರೆ. ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶುಬ್ಮನ್ ಗಿಲ್ ಪಡೆ 49.2 ಓವರ್ಗಳಲ್ಲಿ 372 ರನ್ಗಳಿಸಿ ಆಲೌಟ್ ಆದರೆ ಇದಕ್ಕುತ್ತರವಾಗಿ ನ್ಯೂಜಿಲ್ಯಾಂಡ್ ಎ ತಂಡ 50 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 360 ರನ್ಗಳಿಸಿ 12 ರನ್ಗಳ ಸೋಲನುಭವಿಸಿತು.
-
India A win by 12 runs!
— ICC (@ICC) January 19, 2020 " class="align-text-top noRightClick twitterSection" data="
Jack Boyle's 130 and Finn Allen's 87 failed to help New Zealand XI chase down 373 in the second 50-over game. pic.twitter.com/JLZBvTwkog
">India A win by 12 runs!
— ICC (@ICC) January 19, 2020
Jack Boyle's 130 and Finn Allen's 87 failed to help New Zealand XI chase down 373 in the second 50-over game. pic.twitter.com/JLZBvTwkogIndia A win by 12 runs!
— ICC (@ICC) January 19, 2020
Jack Boyle's 130 and Finn Allen's 87 failed to help New Zealand XI chase down 373 in the second 50-over game. pic.twitter.com/JLZBvTwkog
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಯುವ ಬ್ಯಾಟ್ಸ್ಮನ್ ಪೃಥ್ವಿ ಶಾ 100 ಎಸೆತಗಳಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 150 ರನ್ಗಳಿಸಿದರೆ, ವಿಜಯ್ ಶಂಕರ್ 58, ಮಯಾಂಕ್ ಅಗರ್ವಾಲ್ 32, ಶುಬ್ಮನ್ ಗಿಲ್ 24, ಸೂರ್ಯಕುಮಾರ್ ಯಾದವ್ 26, ಕೃನಾಲ್ ಪಾಂಡ್ಯ 32 ರನ್ಗಳಿಸಿದರು.
373 ರನ್ಗಳ ಗುರಿ ಪಡೆದಿದ್ದ ನ್ಯೂಜಿಲ್ಯಾಂಡ್ ಎ ತಂಡದ ಪರ ಜಾಕ್ ಬಾಯ್ಲ್ 130, ಫಿನ್ ಅಲೆನ್ 87, ಡೆರಿಲ್ ಮಿಚೆಲ್ 41, ಡೇನ್ ಕ್ಲೆವರ್ ಔಟಾಗದೆ 44 ರನ್ಗಳಿಸಿ ಗೆಲುವಿಗಾಗಿ ಪೈಪೋಟಿ ನೀಡಿದರಾದರೂ 50 ಓವರ್ಗಳಲ್ಲಿ 360 ರನ್ಗಳಿಸಷ್ಟೇ ಶಕ್ತರಾಗಿ 12 ರನ್ಗಳ ಸೋಲು ಕಂಡರು.
ಈಶಾನ್ ಪೊರೆಲ್ 2 ವಿಕೆಟ್, ಕೃನಾಲ್ ಪಾಂಡ್ಯ 2 , ಸಿರಾಜ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಭಾರತ ಮೊದಲ ಅಭ್ಯಾಸ ಪಂದ್ಯದಲ್ಲೂ 92 ರನ್ಗಳ ಜಯ ಸಾಧಿಸಿತ್ತು.
ಎರಡು ತಂಡಗಳ ಏಕದಿನ ಸರಣಿ ಜನವರಿ 22 ರಿಂದ ಆರಂಭವಾಗಲಿದೆ.