ಸೌತಾಂಪ್ಟನ್: ಪಾಕಿಸ್ತಾನ ಟೆಸ್ಟ್ ತಂಡದ ನಾಯಕ ಅಜರ್ ಅಲಿ ಟೆಸ್ಟ್ ಕ್ರಿಕೆಟ್ನಲ್ಲಿ ಮಹತ್ವದ ಮೈಲುಗಲ್ಲನ್ನು ಸ್ಥಾಪಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ನಲ್ಲಿ ಆಕರ್ಷಕ ಶತಕ ದಾಖಲಿಸಿದ್ದ ಅವರು ರೆಡ್ಬಾಲ್ ಕ್ರಿಕೆಟ್ನಲ್ಲಿ 6 ಸಾವಿರ ರನ್ ಪೂರೈಸಿದ ಪಾಕಿಸ್ತಾನದ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಸೌತಾಂಪ್ಟನ್ನಲ್ಲಿ ನಡೆಯುತ್ತಿರುವ ಅಂತಿಮ ಟೆಸ್ಟ್ನಲ್ಲಿ ಏಕಾಂಗಿ ಹೋರಾಟ ನಡೆಸಿದ ಅಜರ್ ಔಟಾಗದೆ 141 ರನ್ಗಳಿಸಿದ್ದರು. ಆದರೆ ಬೇರೆ ಬ್ಯಾಟ್ಸ್ಮನ್ಗಳು ವಿಫಲವಾಗಿದ್ದರಿಂದ 273 ರನ್ಗಳಿಗೆ ಆಲೌಟ್ ಆಗಿ ಇನ್ನು 2 ದಿನಗಳ ಆಟ ಬಾಕಿ ಉಳಿದಿರುವಂತೆ ಫಾಲೋ ಆನ್ಗೆ ಗುರಿಯಾಗಿದೆ.
-
6️⃣0️⃣0️⃣0️⃣ Test runs for Azhar Ali 🎉 👏
— ICC (@ICC) August 23, 2020 " class="align-text-top noRightClick twitterSection" data="
He is just the fifth batsman to reach the mark for Pakistan 🇵🇰 #ENGvPAK pic.twitter.com/esWYWtny1j
">6️⃣0️⃣0️⃣0️⃣ Test runs for Azhar Ali 🎉 👏
— ICC (@ICC) August 23, 2020
He is just the fifth batsman to reach the mark for Pakistan 🇵🇰 #ENGvPAK pic.twitter.com/esWYWtny1j6️⃣0️⃣0️⃣0️⃣ Test runs for Azhar Ali 🎉 👏
— ICC (@ICC) August 23, 2020
He is just the fifth batsman to reach the mark for Pakistan 🇵🇰 #ENGvPAK pic.twitter.com/esWYWtny1j
ಅಜರ್ ಅಲಿ ಭಾನುವಾರ 43 ರನ್ಗಳಿಸುತ್ತಿದ್ದಂತೆ ಟೆಸ್ಟ್ ಕ್ರಿಕೆಟ್ನಲ್ಲಿ 6000 ರನ್ ಪೂರೈಸಿದರು. ಈ ಮೂಲಕ ಈ ಸಾಧನೆ ಮಾಡಿದ ಪಾಕಿಸ್ತಾನ 5ನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಅಜರ್ 81 ಟೆಸ್ಟ್ ಪಂದ್ಯಗಳಿಂದ 6098 ರನ್ಗಳಿಸಿದ್ದಾರೆ. ಇದರಲ್ಲಿ 17 ಶತಕ ಮತ್ತು 31 ಅರ್ಧಶಕ ಸೇರಿದೆ. 302 ರನ್ ಇವರ ಗರಿಷ್ಠ ಸ್ಕೋರ್ ಆಗಿದೆ.
ಪಾಕಿಸ್ತಾನ ಪರ 6000 ರನ್ಗಳಿಸಿದವರು
- ಯೂನಿಸ್ ಖಾನ್-10099
- ಜಾವೇದ್ ಮಿಯಂದಾದ್- 8832
- ಇಂಜಮಾಮ್ ಉಲ್ ಹಕ್- 8829
- ಮೊಹಮ್ಮದ್ ಯೂಸುಫ್- 7530
- ಅಜರ್ ಅಲಿ - 6098