ಆಕ್ಲೆಂಡ್: ಕಿವಿಸ್ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟಿ-20 ಸರಣಿಯನ್ನು ಕ್ಲೀನ್ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಏಕದಿನ ಸರಣಿಯಲ್ಲಿ ಮಂಕಾಗಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಹಿನ್ನೆಡೆ ಅನುಭವಿಸಿದೆ.
-
Tough day at the office but great character shown by #TeamIndia. #NZvIND pic.twitter.com/jgyz9YyhYt
— BCCI (@BCCI) February 8, 2020 " class="align-text-top noRightClick twitterSection" data="
">Tough day at the office but great character shown by #TeamIndia. #NZvIND pic.twitter.com/jgyz9YyhYt
— BCCI (@BCCI) February 8, 2020Tough day at the office but great character shown by #TeamIndia. #NZvIND pic.twitter.com/jgyz9YyhYt
— BCCI (@BCCI) February 8, 2020
ನಿರ್ಣಾಯಕ ದ್ವಿತೀಯ ಏಕದಿನ ಪಂದ್ಯಲ್ಲಿ 22 ರನ್ಗಳ ಅಂತರದಲ್ಲಿ ಸೋಲು ಕಂಡ ಭಾರತ ತಂಡ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ. ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್ ಪಸಕ್ತ 2020ರಲ್ಲಿ ಟಿ-20 ಮತ್ತು ಟೆಸ್ಟ್ ಪಂದ್ಯಗಳಷ್ಟು ಮುಖ್ಯವಲ್ಲ ಎಂದಿದ್ದಾರೆ.
ಪಂದ್ಯ ಮುಗಿದ ಬಳಿಕ ಮಾತನಾಡಿರುವ ಕೊಹ್ಲಿ, ಕ್ರಿಕೆಟ್ ಅಭಿಮಾನಿಗಳಿಗೆ ಈ ಎರಡು ಪಂದ್ಯಗಳು ಅದ್ಭುತವಾಗಿದ್ದವು. ನಾವು ಪಂದ್ಯವನ್ನ ಹೇಗೆ ಮುಗಿಸಿದ್ದೇವೆ ಎಂಬುದರ ಬಗ್ಗೆ ನಾನು ವಿಶೇಷವಾಗಿ ಪ್ರಭಾವಿತನಾಗಿದ್ದೇನೆ. ಮೊದಲಾರ್ಧದಲ್ಲಿ ಪಂದ್ಯವು ನಮ್ಮಿಂದ ಸಂಪೂರ್ಣವಾಗಿ ಕೈಜಾರಿ ಹೋಗಿತ್ತು. ನಂತರ ಸೈನಿ ಮತ್ತು ಜಡೇಜಾ ಉತ್ತಮ ಪ್ರದರ್ಶನ ತೋರಿದ್ದಾರೆ. 2020ರ ಕ್ಯಾಲೆಂಡರ್ ವರ್ಷದಲ್ಲಿ ಏಕದಿನ ಕ್ರಿಕೆಟ್, ಟಿ-20 ಮತ್ತು ಟೆಸ್ಟ್ಗಳಂತೆ ಪ್ರಸ್ತುತವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಪಂದ್ಯವನ್ನು ಬಂಡವಾಳವಾಗಿಟ್ಟುಕೊಂಡು ನಾವು ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಬಹುದು. ಸೈನಿ ಇಷ್ಟೊಂದು ಉತ್ತಮವಾಗಿ ಬ್ಯಾಟ್ ಬೀಸಬಲ್ಲರು ಎಂದು ನಮಗೆ ಗೊತ್ತಿರಲಿಲ್ಲ. ಆಟಗಾರರು ಸ್ವತಃ ತಾವೇ ಸಂದರ್ಭಗಳನ್ನು ಅರಿತು ಉತ್ತಮ ಪ್ರದರ್ಶನ ನೀಡಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದಾರೆ.