ಕಿಂಗ್ಸ್ಟನ್: ವಿಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪ್ರಸ್ತುತ ಎರಡನೇ ಟೆಸ್ಟ್ ಸಹ ಗೆಲ್ಲುವ ಉತ್ಸಾಹದಲ್ಲಿದ್ದು, ಪರಿಣಾಮ ಪಂದ್ಯ ಏಕಮುಖವಾಗಿ ಸಾಗುತ್ತಿದೆ. ಆತಿಥೇಯರ ನೀರಸ ಪ್ರದರ್ಶನದಿಂದ ಕ್ರೀಡಾಂಗಣಕ್ಕೆ ಆಗಮಿಸುವ ಕ್ರಿಕೆಟ್ ಪ್ರೇಮಿಗಳ ಸಂಖ್ಯೆ ಭಾರಿ ಇಳಿಕೆಯಾಗಿದೆ.
ಯುವ ಆಟಗಾರ ಹನುಮ ವಿಹಾರಿ ಶತಕ, ಜಸ್ಪೀತ್ ಬುಮ್ರಾ ಚೊಚ್ಚಲ ಟೆಸ್ಟ್ ಹ್ಯಾಟ್ರಿಕ್ ಹಾಗೂ ವಿಂಡೀಸ್ ನಾಯಕ ಜೇಸನ್ ಹೋಲ್ಡರ್ ಐದು ವಿಕೆಟ್ ಪಡೆದ ವಿಶೇಷ ಕ್ಷಣಗಳಿಗೆ ಜಮೈಕಾದ ಸಬೀನಾ ಪಾರ್ಕ್ ಮೈದಾನ ಸಾಕ್ಷಿಯಾದರೂ ಸಹ ನೋಡುಗರ ಸಂಖ್ಯೆ ಐವತ್ತೂ ಇರಲಿಲ್ಲ ಎನ್ನುವುದು ಶೋಚನೀಯ.
ಇಂಡಿಯಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ರಾಜೀವ್ ಶುಕ್ಲಾ, ಎರಡನೇ ಟೆಸ್ಟ್ನಲ್ಲಿ ನೋಡುಗರ ಸಂಖ್ಯೆ ಇಳಿಕೆಯಾದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕೆರಬಿಯನ್ನರ ನಾಡಿನಲ್ಲಿ ಟೆಸ್ಟ್ ಕ್ರಿಕೆಟ್ ತನ್ನ ಜನಪ್ರಿಯತೆ ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿರುವ ರಾಜೀವ್ ಶುಕ್ಲಾ, ಈ ನಿಟ್ಟಿನಲ್ಲಿ ಐಸಿಸಿ ಕಾರ್ಯೋನ್ಮುಖವಾಗಬೇಕು ಎಂದು ಮನವಿ ಮಾಡಿದ್ದಾರೆ.
ವಿವಿಧ ದೇಶಗಳ ಟಿ-20 ಲೀಗ್ಗಳು ಭಾರಿ ಜನಪ್ರಿಯತೆ ಪಡೆಯುತ್ತಿರುವ ವೇಳೆಯಲ್ಲೇ ಟೆಸ್ಟ್ ಕ್ರಿಕೆಟ್ ಜನಪ್ರಿಯತೆ ಕುಸಿತದ ಹಾದಿ ಹಿಡಿದಿತ್ತು. ಈ ಬೆಳವಣಿಗೆಯನ್ನು ಗಮನಿಸಿ ಹಾಗೂ ಟೆಸ್ಟ್ ಕ್ರಿಕೆಟ್ ಉತ್ತೇಜನಕ್ಕಾಗಿ ಐಸಿಸಿ ಈ ವರ್ಷದ ಆಗಸ್ಟ್ನಲ್ಲಿ ಟೆಸ್ಟ್ ಚಾಂಪಿಯನ್ಶಿಪ್ಗೆ ಚಾಲನೆ ನೀಡಿತ್ತು. ಪ್ರಸ್ತುತ ಭಾರತ-ವಿಂಡೀಸ್ ನಡುವಿನ ಟೆಸ್ಟ್ ಸರಣಿ ಸಹ ಇದೇ ಚಾಂಪಿಯನ್ಶಿಪ್ಗೆ ಒಳಪಟ್ಟಿದೆ.
-
I am shocked to see that not even 50 people are watching india-West indies test match while these areas are full of migrated Indians @ICC must do something Looks cricket is dying in Caribbean islands @windiescricket should pull-up the socks @BCCI
— Rajeev Shukla (@ShuklaRajiv) 1 September 2019 " class="align-text-top noRightClick twitterSection" data="
">I am shocked to see that not even 50 people are watching india-West indies test match while these areas are full of migrated Indians @ICC must do something Looks cricket is dying in Caribbean islands @windiescricket should pull-up the socks @BCCI
— Rajeev Shukla (@ShuklaRajiv) 1 September 2019I am shocked to see that not even 50 people are watching india-West indies test match while these areas are full of migrated Indians @ICC must do something Looks cricket is dying in Caribbean islands @windiescricket should pull-up the socks @BCCI
— Rajeev Shukla (@ShuklaRajiv) 1 September 2019