ETV Bharat / sports

ಅವರು ಆಟ ಆಡಲು ಅರ್ಹರು... ಬದಲಾವಣೆಯ ಸುಳಿವು ಬಿಚ್ಚಿಟ್ಟ ಕ್ಯಾಪ್ಟನ್​ ಕೊಹ್ಲಿ! - ಟೀಂ ಇಂಡಿಯಾ

ನ್ಯೂಜಿಲೆಂಡ್​ ವಿರುದ್ಧದ ಮುಂದಿನ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಕೆಲವೊಂದು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಎಲ್ಲ ಲಕ್ಷಣ ಗೋಚರವಾಗುತ್ತಿವೆ.

New Zealand vs India
ಟೀಂ ಇಂಡಿಯಾ
author img

By

Published : Jan 30, 2020, 6:03 PM IST

ಹ್ಯಾಮಿಲ್ಟನ್​​​​: ಆತಿಥೇಯ ಕಿವೀಸ್​ ವಿರುದ್ಧದ ಐದು ಟಿ-20 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 3-0 ಅಂತರದ ಗೆಲುವು ದಾಖಲು ಮಾಡಿ, ಈಗಾಗಲೇ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದೆ.

ಇದೀಗ ಮುಂದಿನ ಎರಡು ಪಂದ್ಯಗಳು ಟೀಂ ಇಂಡಿಯಾ ಪಾಲಿಗೆ ಅನೌಪಚಾರಿಕವಾಗಿರುವ ಕಾರಣ ತಂಡ ಆಡುವ 11ರ ಬಳಗದಲ್ಲಿ ಕೆಲವೊಂದು ಮಹತ್ವದ ಬದಲಾವಣೆ ಮಾಡುವ ಎಲ್ಲ ಲಕ್ಷಣ ಗೋಚರವಾಗ್ತಿವೆ. ಟೀಂ ಇಂಡಿಯಾದ ಬೆಂಚ್​ ಕಾಯುತ್ತಿರುವ ಆಟಗಾರರಿಗೆ ಮುಂದಿನ ಎರಡು ಪಂದ್ಯಗಳಲ್ಲಿ ಚಾನ್ಸ್​ ನೀಡಿ ಅವರ ಸಾಮರ್ಥ್ಯ ಪರೀಕ್ಷೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಟೀಂ ಇಂಡಿಯಾ ಕ್ಯಾಪ್ಟನ್​ ಕೊಹ್ಲಿ ಸುಳಿವು ನೀಡಿದ್ದಾರೆ.

New Zealand vs India
ಟೀಂ ಇಂಡಿಯಾ

5-0 ಅಂತರದಲ್ಲಿ ಸರಣಿ ಗೆಲುವು ಸಾಧಿಸುವುದು ನಮ್ಮ ಗುರಿ ಎಂದಿರುವ ಕೊಹ್ಲಿ, ವಾಷಿಂಗ್ಟನ್​ ಸುಂದರ್​, ನವದೀಪ್​ ಸೈನಿ ಅಂತಹ ಆಟಗಾರರಿಗೆ ಅವಕಾಶ ನೀಡಬೇಕಿದೆ ಎಂದು ತಿಳಿಸಿದ್ದಾರೆ. ಇದರ ಜತೆಗೆ ರಿಷಭ್​ ಪಂತ್​,ಸಂಜು ಸ್ಯಾಮ್ಸನ್​ಗೂ ಅವಕಾಶ ನೀಡಿ, ಅವರ ಬ್ಯಾಟಿಂಗ್​ ಸಾಮರ್ಥ್ಯ ತಿಳಿದುಕೊಳ್ಳುವ ಅವಶ್ಯಕತೆ ಸಹ ಇದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.