ಡುನೆಡಿನ್: ಗಪ್ಟಿಲ್(97) ಮತ್ತು ವಿಲಿಯಮ್ಸನ್(53) ಅವರ ಭರ್ಜರಿ ಅರ್ಧಶತಕ ಹಾಗೂ ಬೌಲರ್ಗಳು ತೋರಿದ ಅದ್ಭುತ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 2ನೇ ಟಿ-20 ಪಂದ್ಯದಲ್ಲೂ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 219 ರನ್ಗಳ ಬೃಹತ್ ಮೊತ್ತ ಕಲೆಯಾಕಿತ್ತು. ಆರಂಭಿಕರಾದ ಮಾರ್ಟಿನ್ ಗಪ್ಟಿಲ್ 50 ಎಸೆತಗಳಲ್ಲಿ 6 ಬೌಂಡರಿ ಮತ್ತು 8 ಸಿಕ್ಸರ್ಗಳ ನೆರವಿನಿಂದ 97 ರನ್ ಗಳಿಸಿದರೆ, ನಾಯಕ ವಿಲಿಯಮ್ಸನ್ 35 ಎಸೆತಗಳಲ್ಲಿ 2 ಬೌಂಡರಿ ಮತ್ತು 3 ಸಿಕ್ಸರ್ ಸಹಿತ 53 ರನ್ ಹಾಗೂ ಕೊನೆಯಲ್ಲಿ ಅಬ್ಬರಿಸಿದ ಆಲ್ರೌಂಡರ್ ಜಿಮ್ಮಿ ನೀಶಮ್ 16 ಎಸೆತಗಳಲ್ಲಿ 1 ಬೌಂಡರಿ 6 ಸಿಕ್ಸರ್ಗಳ ಸಹಿತ 45 ರನ್ ಗಳಿಸಿ ಬೃಹತ್ ಮೊತ್ತ ದಾಖಲಿಸಲು ನೆರವಾದರು.
-
Marcus Stoinis is lifting off for Australia 🚀#NZvAUSpic.twitter.com/V3MTb3av78
— ICC (@ICC) February 25, 2021 " class="align-text-top noRightClick twitterSection" data="
">Marcus Stoinis is lifting off for Australia 🚀#NZvAUSpic.twitter.com/V3MTb3av78
— ICC (@ICC) February 25, 2021Marcus Stoinis is lifting off for Australia 🚀#NZvAUSpic.twitter.com/V3MTb3av78
— ICC (@ICC) February 25, 2021
ಆಸ್ಟ್ರೇಲಿಯಾ ಪರ ಕೇನ್ ರಿಚರ್ಡ್ಸನ್ 43ಕ್ಕೆ 3 ವಿಕೆಟ್ ಪಡದರೆ, ಡೇನಿಯಲ್ ಸ್ಯಾಮ್ಸ್ 46ಕ್ಕೆ 1, ಜಂಪಾ 43ಕ್ಕೆ 1, ಜೇ ರಿಚರ್ಡ್ಸನ್ 39ಕ್ಕೆ 1 ವಿಕೆಟ್ ಪಡೆದರು.
220 ರನ್ಗಳ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 215 ರನ್ ಗಳಿಸಲಷ್ಟೇ ಶಕ್ತವಾಗಿ 4 ರನ್ಗಳ ರೋಚಕ ಸೋಲು ಕಂಡಿತು. ಆರಂಭಿಕರಾದ ಆ್ಯರೋನ್ ಫಿಂಚ್ (12), ಮ್ಯಾಕ್ಸ್ವೆಲ್(3), ಮಿಚೆಲ್ ಮಾರ್ಷ್ ಶೂನ್ಯಕ್ಕೆ ಔಟಾಗಿದ್ದು ಆಸ್ಟ್ರೇಲಿಯಾದ ಸೋಲಿಗೆ ಕಾರಣವಾಯಿತು.
ಜೋಶ್ ಫಿಲಿಪ್ಪೆ 32 ಎಸೆತಗಳಲ್ಲಿ 35, ಮಾರ್ಕಸ್ ಸ್ಟೋಯ್ನಿಸ್ 37 ಎಸೆತಗಳಲ್ಲಿ 7 ಬೌಂಡರಿ 5 ಸಿಕ್ಸರ್ ಸಹಿತ 78 ಮತ್ತು ಡೇನಿಯಲ್ ಸ್ಯಾಮ್ಸ್ ಕೇವಲ 15 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್ಗಳ ಸಹಿತ 42 ರನ್ ಗಳಿಸಿದರು.
ಕೊನೆಯ ಓವರ್ನಲ್ಲಿ ಗೆಲ್ಲಲು ಆಸ್ಟ್ರೇಲಿಯಾ ತಂಡಕ್ಕೆ 15 ರನ್ಗಳ ಅವಶ್ಯಕತೆಯಿತ್ತು. ಸ್ಟೋಯ್ನಿಸ್ ಮತ್ತು ಸ್ಯಾಮ್ಸ್ ಇಬ್ಬರ ವಿಕೆಟ್ ಕಳೆದುಕೊಂಡ ಆಸ್ಟ್ರೇಲಿಯಾ 10 ರನ್ ಗಳಿಸಿತು.
ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್ 31ಕ್ಕೆ 4, ಜಿಮ್ಮಿ ನೀಶಮ್ 10ಕ್ಕೆ 2 ವಿಕೆಟ್ ಪಡೆದರೆ, ಟಿಮ್ ಸೌಥಿ 47ಕ್ಕೆ 1 ಹಾಗೂ ಇಶ್ ಸೋಧಿ 41ಕ್ಕೆ 1 ವಿಕೆಟ್ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನು ಓದಿ:ವಿಜಯ್ ಹಜಾರೆ ಟ್ರೋಫಿ: ಅಮೋಘ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ ಪೃಥ್ವಿ ಶಾ!