ಮುಂಬೈ: ಎಲ್ಲ ಕ್ರಿಕೆಟ್ ತಂಡಗಳಿಗೆ ಹೋಲಿಕೆ ಮಾಡಿದಾಗ ಟೀಂ ಇಂಡಿಯಾ ಎಲ್ಲ ವಿಭಾಗದಲ್ಲೂ ಸದ್ಯ ಬಲಿಷ್ಠವಾಗಿದ್ದು, ಯಾವುದೇ ಕ್ರಿಕೆಟ್ ಸರಣಿಗಳಲ್ಲಿ ಅಮೋಘ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದೆ.
ಆದರೆ ಭವಿಷ್ಯದ ದೃಷ್ಠಿಯಿಂದ ಆಯ್ಕೆ ಸಮಿತಿ ಕೆಲ ಯಂಗ್ ಪ್ಲೇಯರ್ಸ್ಗಳ ಮೇಲೆ ಕಣ್ಣು ಹಾಕಿದ್ದು, ಅವರನ್ನ ತಂಡದ ಬ್ಯಾಕಪ್ ಟೀಂ ಆಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಿದ್ದು, ಅವರಿಗೆ ಹೆಚ್ಚಿನ ಅವಕಾಶ ನೀಡಲು ನಿರ್ಧರಿಸಿದೆ. ಭವಿಷ್ಯದಲ್ಲಿ ಉತ್ತಮ ಟೀಂ ಇಂಡಿಯಾ ಕಟ್ಟುವ ನಿರ್ಧಾರದಿಂದಾಗಿ ನಾಲ್ವರು ಬ್ಯಾಟ್ಸ್ಮನ್ ಹಾಗೂ ಆರು ಮಂದಿ ಬೌಲರ್ಸ್ಗಳನ್ನ ಬಳಕೆ ಮಾಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ.
![Team india](https://etvbharatimages.akamaized.net/etvbharat/prod-images/5582213_tesdfdfdfd.jpg)
ಬೌಲಿಂಗ್ ವಿಭಾಗದಲ್ಲಿ ನವದೀಪ್ ಸೈನಿ, ಅವಿಶ್ ಖನ್ನಾ, ಬಾಸಿಲ್ ತಂಪಿ, ಸಂದೀಪ್ ವಾರಿರ್, ಇಶಾಂತ್ ಪೂರಲ್ ಹಾಗೂ ಮೊಹಮ್ಮದ್ ಸಿರಾಜ್ಗೆ ಅವಕಾಶ ನೀಡಲು ಎಂಎಸ್ಕೆ ಪ್ರಸಾದ್ ಸಮಿತಿ ತೀರ್ಮಾನಿಸಿದೆ.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಅಭಿಮನ್ಯು ಈಶ್ವರನ್, ಪ್ರಿಯಾಂಕಾ ಪಾಂಚಾಲ್, ಪೃಥ್ವಿ ಶಾ ಹಾಗೂ ಕನ್ನಡಿಗ ಕೆಎಲ್ ರಾಹುಲ್ಗೆ ಬ್ಯಾಟಿಂಗ್ ಶಕ್ತಿಯಾಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಈಗಾಗಲೇ ಶಿಖರ್ ಧವನ್ ಅಥವಾ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಆರಂಭಿಕರಾಗಿ ಕಣಕ್ಕಿಳಿಯುತ್ತಿರುವ ಕೆಎಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ರಣಜಿಯಲ್ಲಿ ಪೃಥ್ವಿ ಶಾ ಸಹ ಅಬ್ಬರಿಸಿದ್ದಾರೆ. ಇದರ ಜತೆಗೆ ಬೆಂಗಾಲ್ ಹಾಗೂ ಗುಜರಾತ್ ತಂಡದ ಆರಂಭಿಕರಾಗಿರುವ ಅಭಿಮನ್ಯು ಹಾಗೂ ಪ್ರಿಯಾಂಕಾ ಉತ್ತಮ ಪ್ರದರ್ಶನ ನೀಡಿದ್ದು, ಅವರನ್ನ ಟೀಂ ಇಂಡಿಯಾ ಬೆಂಚ್ ಶಕ್ತಿಯಾಗಿ ಬಳಕೆ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ.
![Team india](https://etvbharatimages.akamaized.net/etvbharat/prod-images/5582213_tesfdfdfdf.jpg)
ಈಗಾಗಲೇ ಜಸ್ಪ್ರೀತ್ ಬುಮ್ರಾ,ಮೊಹಮ್ಮದ್ ಶಮಿ,ಇಶಾಂತ್ ಶರ್ಮಾ, ಉಮೇಶ್ ಯಾದವ್ರಂತಹ ಬೌಲರ್ ಟೀಂ ಇಂಡಿಯಾದ ಆಧಾರಸ್ತಂಭಗಳಾಗಿದ್ದು, ಮುಂದಿನ ದಿನಗಳಲ್ಲೂ ಉತ್ತಮ ತಂಡ ಕಟ್ಟುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.