ಮುಂಬೈ: ಮಹಿಳಾ ಕ್ರಿಕೆಟ್ನ ಸಚಿನ್ ಎಂದೇ ಖ್ಯಾತರಾದ ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಆಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿ 20 ವರ್ಷಗಳು ಕಳೆದಿವೆ.
ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರ್ತಿಯಾದ ಮಿಥಾಲಿ ರಾಜ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2 ದಶಕ ಪೂರೈಸಿ ಇನ್ನೂ ಕ್ರಿಕೆಟ್ನಲ್ಲಿ ಯಶಸ್ವಿ ಬ್ಯಾಟ್ಸಮನ್ ಆಗಿ ಮುಂದುವರಿಯುತ್ತಿದ್ದಾರೆ.
ಜೂನ್ 25 1999 ರಂದು ಅಮತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಮಿಥಾಲಿ 203 ಏಕದಿನ, 10 ಟೆಸ್ಟ್ ಹಾಗೂ 89 ಟಿ-20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಏದದಿನ ಕ್ರಿಕೆಟ್ನಲ್ಲಿ 7 ಶತಕ ಹಾಗೂ 52 ಅರ್ಧಶತಕಗಳ ಸಹಿತ 6720 ರನ್ ಗಳಿಸಿದ್ದಾರೆ. 89 ಟಿ-20 ಪಂದ್ಯಗಳಲ್ಲಿ 17 ಅರ್ಧಶತಕ ಸಹಿತ 2364 ರನ್ ಗಳಿಸಿದ್ದಾರೆ.
-
#OnThisDay 20 years ago, India’s ODI captain @M_Raj03 made her International debut.#20YearsOfMithaliRaj pic.twitter.com/tBtz7Fuakr
— Women's CricZone (@WomensCricZone) June 26, 2019 " class="align-text-top noRightClick twitterSection" data="
">#OnThisDay 20 years ago, India’s ODI captain @M_Raj03 made her International debut.#20YearsOfMithaliRaj pic.twitter.com/tBtz7Fuakr
— Women's CricZone (@WomensCricZone) June 26, 2019#OnThisDay 20 years ago, India’s ODI captain @M_Raj03 made her International debut.#20YearsOfMithaliRaj pic.twitter.com/tBtz7Fuakr
— Women's CricZone (@WomensCricZone) June 26, 2019
ಮಿಥಾಲಿ ರಾಜ್ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್, ಅತಿ ಹೆಚ್ಚು ಅರ್ಧಶತಕ, ಅತಿ ಹೆಚ್ಚು ಏಕದಿನ ಪಂದ್ಯ ಹಾಗೂ ಅತಿ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡಿದ ಮೊದಲ ಮಹಿಳೆ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಸಚಿನ್, ಜಯಸೂರ್ಯ, ಮಿಯಾಂದಾದ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ವರ್ಷ ಪೂರೈಸಿದ 4 ನೇ ಪ್ಲೇಯರ್ ಎಂಬ ಸಾಧನೆಗೂ ಕೂಡ ಮಿಥಾಲಿ ಪಾತ್ರರಾಗಿದ್ದಾರೆ.