ನವದೆಹಲಿ: ಸ್ಫೋಟಕ ಬ್ಯಾಟ್ಸ್ಮನ್ ಕ್ರಿಸ್ ಗೇಲ್ ಹಾಗೂ ಟಿ-20 ಕ್ರಿಕೆಟ್ನ ಶ್ರೇಷ್ಠ ಬೌಲರ್ ಲಸಿತ್ ಮಾಲಿಂಗ್ ಅವರನ್ನು ತಂಡದಿಂದ ಹೊರಗಿಟ್ಟರುವ ಆಸ್ಟ್ರೇಲಿಯಾದ ಲೆಜೆಂಡ್ ಮೈಕ್ ಹಸ್ಸಿ ಬಲಿಷ್ಠ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ.
ಆಸ್ಟ್ರೇಲಿಯಾದ ಮಿಸ್ಟರ್ ಕ್ರಿಕೆಟ್ ಎಂದೇ ಖ್ಯಾತಿ ಪಡೆದಿರುವ ಮೈಕ್ ಹಸ್ಸಿ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನ ಬ್ಯಾಟಿಂಗ್ ಕೋಚ್ ಆಗಿದ್ದಾರೆ. ಐಪಿಎಲ್ನಲ್ಲಿ ಕಳೆದೊಂದು ದಶಕದಿಂದ ಸಕ್ರಿಯರಾಗಿರುವ ಹಸ್ಸಿ ತಮ್ಮ ಅನುಭವದ ಆದಾರದ ಮೇಲೆ ಚೇತನ್ ನರುಲಾರ ಯೂಟ್ಯೂಬ್ ಸಂದರ್ಶನದಲ್ಲಿ ತಮ್ಮ ನೆಚ್ಚಿನ ಐಪಿಎಲ್ ತಂಡವನ್ನು ಪ್ರಕಟಿಸಿದ್ದಾರೆ. ಆ ತಂಡಕ್ಕೆ ನಾಯಕನಾಗಿ ಭಾರತಯ ತಂಡದ ಮಾಜಿ ನಾಯಕ ಹಾಗೂ ಸಿಎಸ್ಕೆ ತಂಡದ ನಾಯಕ ಧೋನಿಯನ್ನು ನೇಮಕ ಮಾಡಿದ್ದಾರೆ.
ಆಶ್ಚರ್ಯವೆಂದರೆ ಹಸ್ಸಿ ತಮ್ಮ ಈ ತಂಡಲ್ಲಿ ಐಪಿಎಲ್ನಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಲಸಿತ್ ಮಾಲಿಂಗ್ ಹಾಗೂ ಹೆಚ್ಚು ಸಿಕ್ಸರ್ ಹಾಗೂ ಹೆಚ್ಚು ಶತಕ ಸಿಡಿಸಿರುವ ವಿಂಡೀಸ್ ದಿಗ್ಗಜ ಕ್ರಿಸ್ ಗೇಲ್ಗೆ ಅವಕಾಶ ನೀಡಿಲ್ಲ. ಕನ್ನಡಿಗ ಕೆಎಲ್ ರಾಹುಲ್ರನ್ನು 12 ನೇ ಆಟಗಾರನಾಗಿ ಆಯ್ಕೆ ಮಾಡಿದ್ದಾರೆ.
ಹಸ್ಸಿ ಘೋಷಿಸಿದ ಐಪಿಎಲ್ ಇಲೆವೆನ್:
ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್ ಧೋನಿ (ನಾಯಕ ), ಹಾರ್ದಿಕ್ ಪಾಂಡ್ಯ, ಆ್ಯಂಡ್ರೆ ರಸೆಲ್, ರಶೀದ್ ಖಾನ್, ಯಜುವೇಂದ್ರ ಚಹಲ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ. (ಕೆ.ಎಲ್. ರಾಹುಲ್12ನೇ ಆಟಗಾರ).