ETV Bharat / sports

ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್​ಗೆ ಆಯ್ಕೆಯಾದ ಇಬ್ಬರು ಭಾರತೀಯ ಕ್ರಿಕೆಟಿಗರು - ಕೊಲೊಂಬೊ ಕಿಂಗ್ಸ್

ಮನ್ವಿಂದರ್​ ಸಿಂಗ್​ ಬಲಗೈ ಮಧ್ಯಮ ವೇಗಿಯಾಗಿದ್ದು ಭಾರತದ ಪರ 2 ಏಕದಿನ ಪಂದ್ಯವನ್ನಾಡಿದ್ದಾರೆ. 36 ವರ್ಷದ ಗೋನಿ ಐಪಿಎಲ್​ನಲ್ಲಿ 44 ಪಂದ್ಯಗಳನ್ನು ಹಾಗೂ ವಿಕೆಟ್ ಕೀಪರ್​ ಮನ್ವಿಂದರ್​ ಬಿಸ್ಲಾ 35 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

ಲಂಕಾ ಪ್ರೀಮಿಯರ್ ಲೀಗ್
ಮನ್​ಪ್ರೀತ್ ಗೋನಿ
author img

By

Published : Oct 20, 2020, 4:52 PM IST

ಕೊಲೊಂಬೊ: ಭಾರತದ ಕ್ರಿಕೆಟಿಗರಾದ ಮನ್​ಪ್ರೀತ್ ಗೋನಿ ಹಾಗೂ ಮನ್ವಿಂದರ್​ ಬಿಸ್ಲಾ ಚೊಚ್ಚಲ ಲಂಕಾ ಪ್ರೀಮಿಯರ್​ ಲೀಗ್​ನಲ್ಲಿ ಆಡುವ ಅವಕಾಶ ಪಡೆದಿದ್ದಾರೆ.

ಮುಂದಿನ ತಿಂಗಳು ನಡೆಯುವ ಟೂರ್ನಿಗಾಗಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗೋನಿ ಮತ್ತು ಮನ್ವಿಂದರ್​ರನ್ನು ಕೊಲೊಂಬೊ ಕಿಂಗ್ಸ್​ ಫ್ರಾಂಚೈಸಿ ಆಯ್ಕೆ ಮಾಡಿಕೊಂಡಿದೆ.

ಮನ್ವಿಂದರ್​ ಸಿಂಗ್​ ಬಲಗೈ ಮಧ್ಯಮ ವೇಗಿಯಾಗಿದ್ದು ಭಾರತದ ಪರ 2 ಏಕದಿನ ಪಂದ್ಯವನ್ನಾಡಿದ್ದಾರೆ. 36 ವರ್ಷದ ಗೋನಿ ಐಪಿಎಲ್​ನಲ್ಲಿ 44 ಪಂದ್ಯಗಳನ್ನು ಹಾಗೂ ವಿಕೆಟ್ ಕೀಪರ್​ ಮನ್ವಿಂದರ್​ ಬಿಸ್ಲಾ 35 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

ಆನ್​ಲೈನ್​ನಲ್ಲಿ ನಡೆದ ಪ್ಲೇಯರ್​ ಆಟಗಾರರ ಆಯ್ಕೆಪ್ರಕ್ರಿಯೆಯಲ್ಲಿ 41 ವರ್ಷದ ಕ್ರಿಸ್ ಗೇಲ್ ಅವರನ್ನು ಕ್ಯಾಂಡಿ ಟಸ್ಕರ್ಸ್​ ಆಯ್ಕೆ ಮಾಡಿಕೊಂಡಿದೆ.

ಕೊಲೊಂಬೊ ಕಿಂಗ್ಸ್​ಗೆ​ ಏಂಜೆಲೋ ಮ್ಯಾಥ್ಯೂಸ್ ಸ್ಥಳೀಯ ಐಕಾನ್ ಆದರೆ, ಫಾಫ್ ಡು ಪ್ಲೆಸಿಸ್​ ಹಾಗೂ ಆ್ಯಂಡ್ರೆ ರಸೆಲ್ ವಿದೇಶಿ ಐಕಾನ್ ಆಟಗಾರರಾಗಿದ್ದಾರೆ. ಡೇವ್ ವಾಟ್ಮೋರ್ ಕೋಚ್​ ಆಗಿ ನೇಮಕಗೊಂಡಿದ್ದಾರೆ.

ಮನ್ವಿಂದರ್ ಬಿಸ್ಲಾ
ಮನ್ವಿಂದರ್ ಬಿಸ್ಲಾ

ಗಾಲೆ ಗ್ಲಾಡಿಯೇಟರ್​ ಲಸಿತ್ ಮಾಲಿಂಗರನ್ನು ಸ್ಥಳೀಯ ಐಕಾನ್​ ಆಟಗಾರನಾಗಿದ್ದರೆ, ಶಾಹೀದ್ ಅಫ್ರಿದಿ ಹಾಗೂ ಕಾಲಿನ್ ಇಂಗ್ರಾಮ್​ರನ್ನು ವಿದೇಶಿ ಐಕಾನ್ ಆಟಗಾರರಾಗಿದ್ದಾರೆ. ಮೊಯಿನ್ ಖಾನ್ ಕೋಚ್ ಆಗಿ ನೇಮಕಗೊಂಡಿದ್ದಾರೆ.

ದಾಸುನ್ ಶನಾಕ, ಡೇವಿಡ್ ಮಿಲ್ಲರ್​ ಹಾಗೂ ಕಾರ್ಲಸ್​ ಬ್ರಾತ್​ವೇಟ್ ದಂಬುಲಾ ಹಾಕ್ಸ್​ ತಂಡದ ಸ್ಟಾರ್ ಆಟಗಾರರಾಗಿದ್ದಾರೆ. ಜಾನ್ ಲೆವಿಸ್​ ಈ ತಂಡದ ಕೋಚ್​ ಆಗಿದ್ದಾರೆ. ಜಫ್ನಾ ಸ್ಟಾಲಿಯನ್ಸ್​ ತಿಸಾರ ಪೆರೆರಾರನ್ನು ಸ್ಥಳೀಯ ಐಕಾನ್ ಆಗಿ ಆಯ್ಕೆಮಾಡಿಕೊಂಡಿದ್ದರೆ, ಡೇವಿಡ್ ಮಲಾನ್ ವಿದೇಶಿ ಐಕಾನ್ ಆಗಿದ್ದಾರೆ.

ಎಲ್​ಪಿಎಲ್ ​ನವೆಂಬರ್​ 21ರಿಂದ ಡಿಸೆಂಬರ್ 13ರವರೆಗೆ ನಡೆಯಲಿದೆ. 15 ದಿವಸಗಳ ಕಾಲ ನಡೆಯುವ ಈ ಟೂರ್ನಿಯಲ್ಲಿ 23 ಪಂದ್ಯಗಳು ನಡೆಯಲಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.