ಶಾರ್ಜಾ: ವುಮೆನ್ಸ್ ಟಿ20 ಚಾಲೆಂಜ್ನ ಮೊದಲ ಪಂದ್ಯ ರೋಚಕವಾಗಿ ಅಂತ್ಯಗೊಂಡಿದ್ದು, ಮಿಥಾಲಿ ರಾಜ್ ನೇತೃತ್ವದ ವೆಲಾಸಿಟಿ ತಂಡ 5 ವಿಕೆಟ್ಗಳ ಅಂತರದಿಂದ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ಗೆದ್ದು ಬೀಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ನೋವಾಸ್ ವೆಲಾಸಿಟಿ ಬೌಲಿಂಗ್ ದಾಳಿಗೆ ಸಿಲುಕಿ ಕೇವಲ 126 ರನ್ಗಳಿಸಿತ್ತು. 127 ರನ್ಗಳ ಗುರಿ ಪಡೆದ ಮಿಥಾಲಿ ಪಡೆ 19.5 ಓವರ್ಗಳಲ್ಲಿ ತಲುಪಿ ಉದ್ಘಾಟನಾ ಪಂದ್ಯದಲ್ಲಿ ಜಯ ಸಾಧಿಸಿದೆ.
127 ರನ್ಗಳ ಗುರಿ ಪಡೆದ ವೆಲಾಸಿಟಿ ಮೊದಲ ಓವರ್ನಲ್ಲೇ ಸ್ಫೋಟಕ ಬ್ಯಾಟರ್ ಡೇನಿಯಲ್ ವ್ಯಾಟ್ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಇದಾದ ಬೆನ್ನಲ್ಲೇ ಸತತ 3 ಬೌಂಡರಿ ಸಿಡಿಸಿದ ಶೆಫಾಲಿ ವರ್ಮಾ ಅದೇ ಓವರ್ನಲ್ಲಿ ಔಟಾದರು. ನಾಯಕಿ ಮಿಥಾಲಿ ರಾಜ್ ಕೂಡ 19 ಎಸೆತಗಳಲ್ಲಿ ಕೇವಲ 7 ರನ್ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. ಕರ್ನಾಟಕದ ವೇದಾ ಕೃಷ್ಣಮೂರ್ತಿ 28 ರನ್ಗಳಿಸಿ ಚೇತರಿಕೆ ನೀಡಿದರಾದರೂ ರಾಧ ಯಾದವ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು.
-
What a thriller we’ve witnessed here in Sharjah! 👌#Velocity pull off a 5-wicket over #Supernovas in the opening encounter of #JioWomensT20Challenge 🔝👏👌#SNOvVEL pic.twitter.com/jTB9yVgM1y
— IndianPremierLeague (@IPL) November 4, 2020 " class="align-text-top noRightClick twitterSection" data="
">What a thriller we’ve witnessed here in Sharjah! 👌#Velocity pull off a 5-wicket over #Supernovas in the opening encounter of #JioWomensT20Challenge 🔝👏👌#SNOvVEL pic.twitter.com/jTB9yVgM1y
— IndianPremierLeague (@IPL) November 4, 2020What a thriller we’ve witnessed here in Sharjah! 👌#Velocity pull off a 5-wicket over #Supernovas in the opening encounter of #JioWomensT20Challenge 🔝👏👌#SNOvVEL pic.twitter.com/jTB9yVgM1y
— IndianPremierLeague (@IPL) November 4, 2020
ವೆಲಾಸಿಟಿ ಒಂದು ಹಂತದಲ್ಲಿ 65ಕ್ಕೆ4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಿತ್ತು. ಆದರೆ ಸುಷ್ಮಾ ವರ್ಮಾ(34) ಮತ್ತು ಸುನೆ ಲೂಸ್(37) 51 ರನ್ಗಳ ಜೊತೆಯಾಟ ನಡೆಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಸುನೆ ಲೂಸ್ ಕೇವಲ 21 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ 37 ರನ್ಗಳಿಸಿ ವೆಲಾಸಿಟಿಯನ್ನು ಗೆಲುವಿನ ಗಡಿ ದಾಟಿಸಿದರು.
ಸೂಪರ್ ನೋವಾಸ್ ಪರ ಅಯಬೊಂಗಾ ಖಾಕ 27ಕ್ಕೆ2 ವಿಕೆಟ್ ಪಡೆದರು. ಶಕೇರಾ ಸೆಲ್ಮಾನ್, ರಾಧ ಯಾದವ್, ಪೂನಮ್ ಯಾದವ್, ಶಶಿಕಲಾ ಸಿರಿವರ್ದನೆ ತಲಾ ಒಂದು ವಿಕೆಟ್ ಪಡೆದರು.
ಇದಕ್ಕು ಮೊದಲು ಬ್ಯಾಟಿಂಗ್ ನಡೆಸಿದ್ದ ಸೂಪರ್ ನೋವಾಸ್ ಚಾಮರಿ ಅಟಪಟ್ಟು ಅವರ 44 ರನ್ಗಳ ನೆರವಿನಿಂದ 126 ರನ್ಗಳಿಸಿತ್ತು. ವೆಲಾಸಿಟಿ ಪರ
ಏಕ್ತಾ ಬಿಷ್ತ್ 22ಕ್ಕೆ 3 ವಿಕೆಟ್ ಪಡೆದರೆ, ಇವರಿಗೆ ಬೆಂಬಲ ನೀಡಿದ ಜಹನಾರ ಆಲಮ್ ತಲಾ 2 ವಿಕೆಟ್ ಪಡೆದು ಮಿಂಚಿದರು.