ನವದೆಹಲಿ: ಮಹಿಳಾ ಟಿ -20 ಚಾಲೆಂಜ್ ಟೂರ್ನಿ ಆಯೋಜನೆಗೆ ಬಿಸಿಸಿಐ ಸಿದ್ದವಿದೆ ಎಂದು ಸೌರವ್ ಗಂಗೂಲಿ ಹೇಳಿರುವುದಕ್ಕೆ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂಧಾನ ಸ್ವಾಗತಿಸಿದ್ದು, ಈ ಟೂರ್ನಮೆಂಟ್ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.
ಈಗಾಗಲೇ ಪುರುಷರ ಐಪಿಎಲ್ ಟೂರ್ನಿಯನ್ನು ಯುಎಇನಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 10ರ ವರೆಗೆ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಇನ್ನು ಪ್ರತಿವರ್ಷದಂತೆ ಪುರುಷರ ಪ್ಲೇ ಆಫ್ ಸಂದರ್ಭದಲ್ಲಿ ಮಹಿಳಾ ಐಪಿಎಲ್ ಟೂರ್ನಿ ನಡೆಸಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.
-
Welcome move😇
— Smriti Mandhana (@mandhana_smriti) August 3, 2020 " class="align-text-top noRightClick twitterSection" data="
Really looking forward to play the Women’s T20 Challenge😊@BCCIWomen https://t.co/Teee2rLa5P
">Welcome move😇
— Smriti Mandhana (@mandhana_smriti) August 3, 2020
Really looking forward to play the Women’s T20 Challenge😊@BCCIWomen https://t.co/Teee2rLa5PWelcome move😇
— Smriti Mandhana (@mandhana_smriti) August 3, 2020
Really looking forward to play the Women’s T20 Challenge😊@BCCIWomen https://t.co/Teee2rLa5P
"ಸ್ವಾಗತಾರ್ಹವಾದ ಬೆಳವಣಿಗೆ, ಮಹಿಳಾ ಟಿ -20 ಚಾಲೆಂಜ್ನಲ್ಲಿ ಆಡುವುದಕ್ಕೆ ಎದುರು ನೋಡುತ್ತಿದ್ದೇನೆ" ಎಂದು ಸ್ಮೃತಿ ಮಂಧಾನ ಟ್ವೀಟ್ ಮಾಡಿದ್ದಾರೆ.
13ನೇ ಆವೃತ್ತಿಯ ಐಪಿಎಲ್ ಫ್ಲೇ ಆಫ್ ಸಂದರ್ಭದಲ್ಲಿ ಮೂರು ತಂಡಗಳ 4 ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐ ಭಾನುವಾರ ಸ್ಪಷ್ಟಪಡಿಸಿತ್ತು.
ಇನ್ನು ಈ ನಿರ್ಧಾರವನ್ನು ಸ್ವಾಗತಿಸಿದ್ದ ಮಿಥಾಲಿ ರಾಜ್ ಮುಂದಿನ ವರ್ಷ ನ್ಯೂಜಿಲ್ಯಾಂಡ್ನಲ್ಲಿ ನಡೆಯಲಿರುವ 50 ಓವರ್ಗಳ ವಿಶ್ವಕಪ್ ಅಭಿಯಾನಕ್ಕೆ ಉತ್ತಮ ಆರಂಭ ಎಂದಿದ್ದರು. ಹಿರಿಯ ವೇಗಿ ಜೂಲನ್ ಗೋಸ್ವಾಮಿ, ಪೂನಂ ಯಾದವ್, ವೇದಕೃಷ್ಣಮೂರ್ತಿ ಸೇರಿದಂತೆ ಹಲವು ಭಾರತೀಯ ಆಟಗಾರ್ತಿಯರು ಕೂಡ ಸಂತಸ ವ್ಯಕ್ತಪಡಿಸಿದ್ದರು.
ಆದರೆ, ಬಿಸಿಸಿಐ ನಿರ್ಧಾರಕ್ಕೆ ಆಸ್ಟ್ರೇಲಿಯಾದ ಆಟಗಾರ್ತಿಯರಾದ ಅಲಿಸಾ ಹೀಲಿ ಮತ್ತು ರಾಚೆಲ್ ಹೇನ್ಸ್ ಈ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 29ರ ವರೆಗೆ ಮಹಿಳಾ ಬಿಗ್ ಬಾಸ್ ಲೀಗ್ ನಡೆಯಲಿರುವುದರಿಂದ ಐಪಿಎಲ್ ಟೂರ್ನಿಗೆ ಪಾಲ್ಗೊಳ್ಳುವ ಅಂತಾರಾಷ್ಟ್ರೀಯ ಕ್ರಿಕೆಟಿಗರಿಗೆ ಯಾವ ಟೂರ್ನಮೆಂಟ್ಗೆ ಪಾಲ್ಗೊಳ್ಳಬೇಕೆಂದು ಗೊಂದಲ ಉಂಟಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.