ದುಬೈ: ಆಸ್ಟ್ರೇಲಿಯಾದಲ್ಲಿ 2020ರಲ್ಲಿ ನಡೆಯಲಿರುವ ಟಿ-20 ಚುಟುಕು ಕ್ರಿಕೆಟ್ ಬಳಿಕ ತಾವು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಘೋಷಣೆ ಮಾಡುವುದಾಗಿ ಲಸಿತ್ ಮಲಿಂಗಾ ತಿಳಿಸಿದ್ದಾರೆ.
ಈಗಾಗಲೇ ಇಂಗ್ಲೆಂಡ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಬಳಿಕ ತಾವೂ ಏಕದಿನ ಕ್ರಿಕೆಟ್ನಿಂದ ದೂರ ಸರಿಯುವುದಾಗಿ ಘೋಷಣೆ ಮಾಡಿದ್ದ ವೇಗದ ಬೌಲರ್ ಇದೀಗ ಈ ಹೇಳಿಕೆ ನೀಡಿದ್ದಾರೆ.
ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ 2ನೇ ಟಿ-20 ಪಂದ್ಯದಲ್ಲಿ ಸೋಲು ಕಂಡು ಬಳಿಕ ಮಾತನಾಡಿರುವ 35 ವರ್ಷದ ಮಲಿಂಗಾ ಈ ಹೇಳಿಕೆ ನೀಡಿದ್ದಾರೆ. 72 ಟಿ-20 ಪಂದ್ಯಗಳಿಂದ ಮಲಿಂಗಾ 97ವಿಕೆಟ್, 218 ಏಕದಿನ ಪಂದ್ಯಗಳಿಂದ 322 ವಿಕೆಟ್ ಪಡೆದುಕೊಂಡಿದ್ದಾರೆ.
ಇನ್ನು ಇಂಗ್ಲೆಂಡ್ನಲ್ಲಿ ಆರಂಭಗೊಳ್ಳಲಿರುವ ವಿಶ್ವಕಪ್ಗೆ ಆಯ್ಕೆಗೊಳ್ಳಬೇಕಾದರೆ, ಲಂಕಾ ತಂಡದ ಪರ ಕಣಕ್ಕಿಳಿಯಬೇಕೆಂದು ಕ್ರಿಕೆಟ್ ಶ್ರೀಲಂಕಾ ವಾರ್ನ್ ಮಾಡಿದೆ. ಹೀಗಾಗಿ ಮುಂಬೈ ಇಂಡಿಯನ್ಸ್ನ ಮೊದಲ ಆರು ಪಂದ್ಯಗಳಿಂದ ಮಲಿಂಗಾ ಹೊರಗುಳಿಯುತ್ತಿದ್ದಾರೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಮಾರ್ಚ್ 24ರಂದು ತನ್ನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.