ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ನ ಇಂದಿನ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮುಖಾಮುಖಿಯಾಗಿದ್ದು, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮಾರ್ಗನ್ ಪಡೆ ಎದುರಾಳಿ ತಂಡಕ್ಕೆ 149ರನ್ಗಳ ಗೆಲುವಿನ ಟಾರ್ಗೆಟ್ ನೀಡಿದೆ.
ಆರಂಭಿಕರಾಗಿ ಕಣಕ್ಕಿಳಿದ ರಾಹುಲ್ ತ್ರಿಪಾಠಿ ಹಾಗೂ ಶುಬ್ಮನ್ ಗಿಲ್ ಆರಂಭದಲ್ಲೇ ವೈಫಲ್ಯ ಅನುಭವಿಸಿದ್ರು. ಕೇವಲ 7ರನ್ ಗಳಿಕೆ ಮಾಡಿದ್ದ ವೇಳೆ, ತ್ರಿಪಾಠಿ ವಿಕೆಟ್ ಒಪ್ಪಿಸಿದರೆ, ಗಿಲ್ 21ರನ್ ಗಳಿಸಿ ಕ್ಯಾಚ್ ನೀಡಿದರು. ಇದಾದ ಬಳಿಕ ಬಂದ ರಾಣಾ(5), ಕಾರ್ತಿಕ್(4)ರನ್ಗಳಿಕೆ ಮಾಡಿ ಮತ್ತಷ್ಟು ನಿರಾಶೆ ಮೂಡಿಸಿದರು. ಆದರೆ, ಈ ವೇಳೆ ಕ್ಯಾಪ್ಟನ್ ಮಾರ್ಗನ್ ಜತೆ ಕೂಡಿಕೊಂಡ ರಸಲ್ ಸಹ 12ರನ್ಗಳಿಕೆ ಮಾಡಿ ವಿಕೆಟ್ ಒಪ್ಪಿಸಿದರು.
ಮಿಂಚಿದ ಕಮ್ಮಿನ್ಸ್
ಮುಂಬೈ ಇಂಡಿಯನ್ಸ್ ಮಾರಕ ಬೌಲಿಂಗ್ ದಾಳಿ ಎದುರು ರನ್ಗಳಿಕೆ ಮಾಡಲು ಪರದಾಡುತ್ತಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಕಮ್ಮಿನ್ಸ್ ಆಸರೆಯಾದರು. ಕೇವಲ 36 ಎಸೆತಗಳಲ್ಲಿ 2 ಸಿಕ್ಸರ್, 5 ಬೌಂಡರಿ ಸೇರಿ 53ರನ್ಗಳಿಕೆ ಮಾಡಿ ತಂಡದ ಮೊತ್ತ 140ರ ಗಡಿ ದಾಟುವಂತೆ ಮಾಡಿದರು. ಇನ್ನು ಕ್ಯಾಪ್ಟನ್ ಮಾರ್ಗನ್ ಅಜೇಯ 39ರನ್ಗಳಿಕೆ ಮಾಡಿದರು.
ಮುಂಬೈ ಪರ ರಾಹುಲ್ ಚಹರ್ 2ವಿಕೆಟ್ ಪಡೆದರೆ, ಬೊಲ್ಟ್,ನಾಥನ್ ಹಾಗೂ ಬುಮ್ರಾ ತಲಾ 1ವಿಕೆಟ್ ಪಡೆದುಕೊಂಡರು. ದಿನೇಶ್ ಕಾರ್ತಿಕ್ ನಾಯಕತ್ವ ಜವಾಬ್ದಾರಿ ಬಿಟ್ಟುಕೊಟ್ಟಿರುವ ಕಾರಣ ಇಯಾನ್ ಮಾರ್ಗನ್ ತಂಡ ಮುನ್ನಡೆಸುತ್ತಿದ್ದಾರೆ.