ಜಾರ್ಜ್ಟೌನ್: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ರದ್ದಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದು, ಪಂದ್ಯ ಆರಂಭವಾಗಿ ರದ್ದಾಗುವುದು ಕ್ರಿಕೆಟ್ನ ಕೆಟ್ಟ ಭಾಗ ಎಂದಿದ್ದಾರೆ.
ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯ ರದ್ದಾಗಿರುವುದಕ್ಕೆ ಕೊಹ್ಲಿ ಹತಾಶೆ ವ್ಯಕ್ತಪಡಿಸಿದ್ದಾರೆ. ಟೂರ್ನಿ ಮಧ್ಯೆ ಪದೇ ಪದೇ ಪಂದ್ಯ ಆರಂಭವಾಗಿ ನಿಲ್ಲುವುದು ಕ್ರಿಕೆಟ್‌ಗೆ ಶೋಭೆಯಲ್ಲ. ಈ ರೀತಿ ಪಂದ್ಯದ ಮಧ್ಯ ಮಳೆ ಬಂದು ಮತ್ತೆ ನಿಂತಮೇಲೆ ಮತ್ತೆ ಮೈದಾನಕ್ಕೆ ಬಂದು ಆಡುವುದರಿಂದ ಆಟಗಾರರು ಗಾಯಕ್ಕೆ ತುತ್ತಾಗುವ ಸಂಭವ ಹೆಚ್ಚಿರುತ್ತದೆ ಎಂದರು.
ಕೆರಿಬಿಯನ್ ನೆಲದಲ್ಲಿ ಆಡುವ ಬಗ್ಗೆ ಮಾತನಾಡಿರುವ ಕೊಹ್ಲಿ, ವಿಂಡೀಸ್ ಪಿಚ್ಗಳು ಉತ್ತಮ ಪೇಸ್ ಹಾಗೂ ಬೌನ್ಸಿ ಟ್ರ್ಯಾಕ್ ಆಗಿವೆ. ಎದುರಾಳಿ ತಂಡದ ಬೌಲರ್ಗಳು ನಿಧಾನಗತಿ ಬೌಲಿಂಗ್ ನಡೆಸುವುದರಿಂದ ಬೌಲಿಂಗ್‌ಗೆ ಅನುಗುಣವಾಗಿ ಬ್ಯಾಟಿಂಗ್ ನಡೆಸಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ಏಕದಿನ ಪಂದ್ಯ 90 ನಿಮಿಷ ತಡವಾಗಿ ಆರಂಭಗೊಂಡಿತ್ತು. ನಂತರ ಆರಂಭವಾದರೂ ಕೇವಲ 5 ಓವರ್ಗಳಲ್ಲಿ ಪಂದ್ಯ ಸ್ಥಗಿತಗೊಂಡಿತ್ತು. ಮತ್ತೆ ಆರಂಭಗೊಂಡು 13 ಓವರ್ಗಳವರೆಗೆ ಮಾತ್ರ ಮ್ಯಾಚ್ ನಡೆದು ಪಂದ್ಯ ಸ್ಥಗಿತಗೊಂಡಿತ್ತು.