ನವದೆಹಲಿ : ಭಾರತ ತಂಡ ಇಂಗ್ಲೆಂಡ್ ವಿರುದ್ಧ 227 ರನ್ಗಳ ಬೃಹತ್ ಸೋಲು ಕಂಡರೂ ಜಮೈಕನ್ ಓಟಗಾರ ಯೋಹಾನ್ ಬ್ಯಾಕ್ ಭಾರತ ಮತ್ತು ನಾಯಕ ವಿರಾಟ್ ಕೊಹ್ಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿರುವ ಬ್ಲಾಕ್, ಕೊಹ್ಲಿ ಸೋಲಿಗೆ ಯಾವುದೇ ನೆಪಗಳನ್ನು ಹುಡುಕುವುದಿಲ್ಲ ಹಾಗೂ ಅವರು ತಮ್ಮ ಸೋಲಿಗೆ ಕಾರಣವಾಗಿರುವ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ ಎಂದು ಟೀಂ ಇಂಡಿಯಾ ನಾಯಕನನ್ನು ಪ್ರಶಂಸಿಸಿದ್ದಾರೆ.
"ಟೀಂ ಇಂಡಿಯಾ ಬಗ್ಗೆ ನಾನು ನಿಜವಾಗಿಯೂ ಪ್ರೀತಿಸುವುದೇನೆಂದರೆ ಸೋತಾಗ ವಿರಾಟ್ ಕೊಹ್ಲಿ ಯಾವುದೇ ನೆಪ ಹುಡುಕುವುದಿಲ್ಲ. ಅವರ ನಾಯಕತ್ವವನ್ನು ನಾನು ನಿಜವಾಗಿಯೂ ಪ್ರೀತಿಸುತ್ತೇನೆ, ಸೋಲಿನ ಆಪಾದನೆಯನ್ನು ತಾವೇ ಸ್ವೀಕರಿಸಿದ್ದಾರೆ.
ಬೌಲರ್‌ಗಳು ಸರಿಯಾದ ಪ್ರದೇಶಗಳನ್ನು ಬೌಲಿಂಗ್ ಮಾಡಲಿಲ್ಲ ಮತ್ತು ಬ್ಯಾಟ್ಸ್‌ಮನ್‌ಗಳಲ್ಲಿ ಸ್ಥಿರತೆಯಿರಲಲ್ಲಿ ಎಂದ್ದಿದ್ದು, ತಾವೂ ಬೌನ್ಸ್ ಬ್ಯಾಕ್ ಆಗುವುದಾಗಿ ಅವರು ಹೇಳಿದ್ದಾರೆ. ಹಾಗಾಗಿ, ನಾನು ವಿರಾಟ್ ಕೊಹ್ಲಿ ಮತ್ತು ಅವರ ನಾಯಕತ್ವವನ್ನು ಇಷ್ಟಪಡುತ್ತೇನೆ "ಎಂದು ಜಮೈಕಾದ ಓಟಗಾರ ಹೇಳಿದರು.
-
This is what test cricket 🏏 is all about. @BCCI @ECB_cricket @SkyCricket @MichaelVaughan @root66 @imVkohli @jimmy9 @RealShubmanGill @RishabhPant17 @cheteshwar1 #testcricket #Cricket #INDvsENG. pic.twitter.com/z6ZpbCQAh6
— Yohan Blake (@YohanBlake) February 9, 2021 " class="align-text-top noRightClick twitterSection" data="
">This is what test cricket 🏏 is all about. @BCCI @ECB_cricket @SkyCricket @MichaelVaughan @root66 @imVkohli @jimmy9 @RealShubmanGill @RishabhPant17 @cheteshwar1 #testcricket #Cricket #INDvsENG. pic.twitter.com/z6ZpbCQAh6
— Yohan Blake (@YohanBlake) February 9, 2021This is what test cricket 🏏 is all about. @BCCI @ECB_cricket @SkyCricket @MichaelVaughan @root66 @imVkohli @jimmy9 @RealShubmanGill @RishabhPant17 @cheteshwar1 #testcricket #Cricket #INDvsENG. pic.twitter.com/z6ZpbCQAh6
— Yohan Blake (@YohanBlake) February 9, 2021
ಇದೇ ಸಂದರ್ಭದಲ್ಲಿ ಯುವ ಬ್ಯಾಟ್ಸ್ಮನ್ಗಳಾದ ರಿಷಭ್ ಪಂತ್ ಮತ್ತು ಶುಭಮನ್ ಗಿಲ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಈ ಪಂದ್ಯದಲ್ಲಿ ನನಗೆ ವಿಶೇಷವಾಗಿ ಕಂಡಿದ್ದು ಶುಭಮನ್ ಗಿಲ್, ಅವರು ಅದ್ಭುತ ಬ್ಯಾಟ್ಸ್‌ಮನ್. ಖಂಡಿತ, ರಿಷಭ್ ಪಂತ್ ಕೂಡ ಅತ್ಯುತ್ತಮವಾಗಿದ್ದಾರೆ. ಟೆಸ್ಟ್ ಕ್ರಿಕೆಟ್ ಆಟಕ್ಕೆ ಅವರು ಅತ್ಯುತ್ತಮರು. ಅದಕ್ಕಾಗಿಯೇ ನಾನು ಟೆಸ್ಟ್ ಕ್ರಿಕೆಟ್‌ನ ಪ್ರೀತಿಸುತ್ತೇನೆ.
ಯಾಕೆಂದರೆ, ಅದು ನಿಮ್ಮನ್ನು ಮಾನಸಿಕವಾಗಿ ಪರೀಕ್ಷಿಸುತ್ತದೆ ಎಂದಿರುವ ಬ್ಲಾಕ್, ಆಸ್ಟ್ರೇಲಿಯಾದಲ್ಲಿ ಪೂಜಾರ ತೋರಿದ ಆಟ ಅದ್ಭುತ. ಅದು ಹೋರಾಟ ಎಂಬುದನ್ನು ತೋರಿಸಿದೆ. ನಾನು ಅದನ್ನೇ ನೋಡಲು ಇಷ್ಟಪಡುತ್ತೇನೆ "ಎಂದು ಅವರು ಹೇಳಿದರು.
ಇದನ್ನು:ಜೋ ರೂಟ್ ಟೆಸ್ಟ್ ಕ್ರಿಕೆಟ್‌ನ ಎಲ್ಲಾ ದಾಖಲೆಗಳನ್ನು ಮುರಿಯಲಿದ್ದಾರೆ: ನಾಸಿರ್ ಹುಸೇನ್