ETV Bharat / sports

ಟೆಸ್ಟ್​​ನಲ್ಲಿ ರಾಹುಲ್​ ವೈಫಲ್ಯ....  ರೋಹಿತ್​ಗೆ ಅವಕಾಶ ನೀಡಿ ಎಂದ ಗಂಗೂಲಿ!

ವಿಂಡೀಸ್​ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿರುವ ಕೆ.ಎಲ್.ರಾಹುಲ್ ಬದಲಿಗೆ ರೋಹಿತ್​ಗೆ ಅವಕಾಶ ನೀಡಬೇಕು ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಕೆ.ಎಲ್.ರಾಹುಲ್, ರೊಹಿತ್ ಶರ್ಮಾ
author img

By

Published : Sep 5, 2019, 4:54 PM IST

ನವದೆಹಲಿ: ಟೆಸ್ಟ್​ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ಕನ್ನಡಿಗ ಕೆ.ಎಲ್​.ರಾಹುಲ್ ವೈಫಲ್ಯ ಕಾಣುತ್ತಿದ್ದು, ರಾಹುಲ್​ ಬದಲು ರೋಹಿತ್​ಗೆ ಅವಕಾಶ ನೀಡಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಹೇಳಿದ್ದಾರೆ.

ವಿಶ್ವಕಪ್​ ಟೂರ್ನಿ ನಂತರ ವೆಸ್ಟ್ ಇಂಡೀಸ್​ ವಿರುದ್ಧ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಆದರೆ, ತಂಡದ ಓಪನರ್ಸ್​ಗಳು ಮಾತ್ರ ಉತ್ತಮ ಪ್ರದರ್ಶನ ನೀಡಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಕೆ.ಎಲ್.ರಾಹುಲ್​ ಎರಡೂ ಪಂದ್ಯಗಳಲ್ಲಿ ಬಿಗ್​ ಸ್ಕೋರ್​ ಕಲೆಹಾಕುವಲ್ಲಿ ವಿಫಲರಾಗಿದ್ದಾರೆ. ರಾಹುಲ್​ ಬದಲಿಗೆ ರೋಹಿತ್​ ಶರ್ಮಾಗೆ ಅವಕಾಶ ನೀಡಿದರೆ ಉತ್ತಮ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಏಕದಿನ ಕ್ರಿಕೆಟ್​ನಲ್ಲಿ ಆರಂಭಿಕನಾಗಿ ಕಣಕ್ಕಿಳಿಯುತ್ತಿರುವ ರೋಹಿತ್​ ಶರ್ಮಾ ಒಬ್ಬ ಉತ್ತಮ ಓಪನರ್​ ಎಂದು ಸಾಬೀತು ಮಾಡಿದ್ದಾರೆ. ಹೀಗಾಗಿ ಟೆಸ್ಟ್​ ಕ್ರಿಕೆಟ್​ನಲ್ಲೂ ಅವಕಾಶ ನೀಡಬೇಕು ಎಂದಿದ್ದಾರೆ.

ಸದ್ಯ ಮಯಾಂಕ್​ ಅಗರ್ವಾಲ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅವರಿಗೂ ಮತ್ತಷ್ಟು ಅವಕಾಶಗಳನ್ನ ನೀಡಬೇಕು ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.