ಹೈದರಾಬಾದ್: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಆಟಗಾರ ನಿತೀಶ್ ರಾಣಾಗೆ ಕೊರೊನಾ ಸೋಂಕು ತಗುಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಟೀಂ ಮ್ಯಾನೇಜ್ಮೆಂಟ್ ಯಾವುದೇ ರೀತಿಯ ಅಧಿಕೃತ ಮಾಹಿತಿ ನೀಡಿಲ್ಲ.
-
We're now close enough to D-Day to count down with our own fingers ✋🏻🤚🏻
— KolkataKnightRiders (@KKRiders) April 1, 2021 " class="align-text-top noRightClick twitterSection" data="
🔟 days to go! ⏳#KKR #HaiTaiyaar #IPL2021 pic.twitter.com/yB3y7BHsrW
">We're now close enough to D-Day to count down with our own fingers ✋🏻🤚🏻
— KolkataKnightRiders (@KKRiders) April 1, 2021
🔟 days to go! ⏳#KKR #HaiTaiyaar #IPL2021 pic.twitter.com/yB3y7BHsrWWe're now close enough to D-Day to count down with our own fingers ✋🏻🤚🏻
— KolkataKnightRiders (@KKRiders) April 1, 2021
🔟 days to go! ⏳#KKR #HaiTaiyaar #IPL2021 pic.twitter.com/yB3y7BHsrW
ಕೆಕೆಆರ್ ತರಬೇತಿ ಶಿಬಿರ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಗೋವಾದಲ್ಲಿ ಕೆಲ ದಿನಗಳ ಕಾಲ ಕಳೆದಿದ್ದ ನಿತೀಶ್ ರಾಣಾ, ಕಳೆದೆರಡು ದಿನಗಳ ಹಿಂದೆ ತಂಡ ಸೇರಿಕೊಂಡಿದ್ದರು. ಸದ್ಯ ಮುಂಬೈನಲ್ಲಿ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿರುವ ಅವರಿಗೆ ಎಲ್ಲ ರೀತಿಯ ಆರೋಗ್ಯ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವರದಿಯಾಗಿದೆ.
ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಬರುವ ಏಪ್ರಿಲ್ 9ರಿಂದ ಆರಂಭಗೊಳ್ಳಲಿದ್ದು, ಮೇ 30ರಂದು ಫೈನಲ್ ಪಂದ್ಯ ನಡೆಯಲಿದೆ.
ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೆಣಸಾಟ ನಡೆಸಲಿವೆ.
ಕೆಕೆಆರ್ ಬರುವ ಏಪ್ರಿಲ್ 11ರಂದು ಸನ್ರೈಸರ್ಸ್ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಅಭಿಯಾನ ಆರಂಭ ಮಾಡಲಿದೆ.
ಕಳೆದ ವರ್ಷದ ಟೂರ್ನಿಯಲ್ಲಿ ರಾಣಾ 14 ಪಂದ್ಯಗಳಿಂದ 254ರನ್ಗಳಿಕೆ ಮಾಡಿದ್ರು. ಇಲ್ಲಿಯವರೆಗೆ 60 ಪಂದ್ಯಗಳನ್ನಾಡಿರುವ ನಿತೀಶ್ ರಾಣಾ 1437ರನ್ಗಳಿಕೆ ಮಾಡಿದ್ದಾರೆ. ಇನ್ನು ವಿಜಯ್ ಹಜಾರೆ ಟ್ರೋಫಿಯಲ್ಲಿ 7 ಪಂದ್ಯಗಳಿಂದ 398ರನ್ಗಳಿಕೆ ಮಾಡಿದ್ದು, ಟಾಪ್ 5 ಸ್ಕೋರ್ ಆಗಿದ್ದಾರೆ. ಪ್ರಸಕ್ತ ಸಾಲಿನ ಟೂರ್ನಿಯಲ್ಲಿ ಭಾಗಿಯಾಗುವ ಉದ್ದೇಶದಿಂದ ಕೆಕೆಆರ್ ಈಗಾಗಲೇ ಅಭ್ಯಾಸ ಆರಂಭಿಸಿದ್ದು, ಇದರಲ್ಲಿ ನಿತೀಶ್ ರಾಣಾ ಮಾತ್ರ ಕಾಣಿಸಿಕೊಂಡಿಲ್ಲ.