ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಬ್ಯಾಟ್ಸ್‌ಮನ್ ನಿತೀಶ್ ರಾಣಾಗೆ ಕೊರೊನಾ ವೈರಸ್ ಸೋಂಕು ತಗುಲಿದ್ದು ನಿಜ ಎಂದು ಇದೀಗ ಫ್ರಾಂಚೈಸಿ ಒಪ್ಪಿಕೊಂಡಿದೆ. ಆದರೆ ಸದ್ಯದ ಅವರ ವರದಿ ನೆಗೆಟಿವ್ ಬಂದಿದೆ ಎಂದು ಪ್ರಕಟಣೆ ಹೊರಡಿಸಿದೆ.
ಮುಂಬೈ ಹೋಟೆಲ್ನಲ್ಲಿ ಕ್ವಾರಂಟೈನ್ ಆಗಿದ್ದ ವೇಳೆ ಅವರಿಗೆ ಸೋಂಕು ತಗುಲಿತ್ತು. ಈಗ ವರದಿ ನೆಗೆಟಿವ್ ಬಂದಿದೆ. ಆದಷ್ಟು ಬೇಗ ತಂಡ ಸೇರಿಕೊಂಡು ತರಬೇತಿ ಶಿಬಿರದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿಸಿದೆ.
-
#KKR statement on @NitishRana_27 ⤵️https://t.co/qScQtx8pHy
— KolkataKnightRiders (@KKRiders) April 1, 2021 " class="align-text-top noRightClick twitterSection" data="
">#KKR statement on @NitishRana_27 ⤵️https://t.co/qScQtx8pHy
— KolkataKnightRiders (@KKRiders) April 1, 2021#KKR statement on @NitishRana_27 ⤵️https://t.co/qScQtx8pHy
— KolkataKnightRiders (@KKRiders) April 1, 2021
ನಿತೀಶ್ ರಾಣಾ ಕಳೆದ ಮಾರ್ಚ್ 21ರಂದು ಮುಂಬೈನ ಕೆಕೆಆರ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದು, ಮಾರ್ಚ್ 19ರಂದು ಮಾಡಿಸಲಾಗಿದ್ದ ಅವರ ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿತ್ತು. ಆದರೆ ಐಪಿಎಲ್ ಪ್ರೊಟೋಕಾಲ್ ಪ್ರಕಾರ, ಮಾರ್ಚ್ 22ರಂದು ಅವರಿಗೆ ಮತ್ತೊಮ್ಮೆ ಟೆಸ್ಟ್ ಮಾಡಿಸಲಾಗಿದೆ. ಈ ವೇಳೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಫ್ರಾಂಚೈಸಿ ತಿಳಿಸಿದೆ.
ಇದನ್ನೂ ಓದಿ: ಕೆಕೆಆರ್ ಆಟಗಾರ ನಿತೀಶ್ ರಾಣಾಗೆ ಕೊರೊನಾ?
ರಾಣಾ ಐಪಿಎಲ್ ಸಾಧನೆ:
2016ರಿಂದ ಇಲ್ಲಿಯವರೆಗೆ 60 ಐಪಿಎಲ್ ಪಂದ್ಯಗಳನ್ನಾಡಿದ್ದು,1,437ರನ್ಗಳಿಕೆ ಮಾಡಿದ್ದಾರೆ. 26 ವರ್ಷದ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಕಳೆದ ವರ್ಷದ ಐಪಿಎಲ್ನಲ್ಲಿ 14 ಪಂದ್ಯಗಳಿಂದ 352ರನ್ ಗಳಿಸಿದ್ದರು.