ETV Bharat / state

ಸ್ಥಳೀಯ ಭಾಷಾ ಜ್ಞಾನದ ಹಿನ್ನೆಲೆ ಆರ್​ಆರ್​​ಬಿ ನೇಮಕಾತಿ ನಿಯಮ ಮಾರ್ಪಡಿಸಲು ಕೇಂದ್ರ ವಿತ್ತ ಸಚಿವೆ ಸೂಚನೆ - RRB RECRUITMENT RULES

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳ (ಆರ್​ಆರ್​​ಬಿ-Regional Rural Banks) ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಸಿದರು.

nirmala sitharaman
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳ ಕಾರ್ಯಕ್ಷಮತೆ ಪರಿಶೀಲನಾ ಸಭೆ (ETV Bharat)
author img

By ETV Bharat Karnataka Team

Published : Nov 9, 2024, 10:17 PM IST

ಬೆಂಗಳೂರು: ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆ ಹೊಂದಿರುವ ನಿಟ್ಟಿನಲ್ಲಿ ಆರ್​ಆರ್​​ಬಿಗಳ ನೇಮಕಾತಿ ನಿಯಮಗಳನ್ನು ಮಾರ್ಪಡಿಸುವಂತೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕ, ಆಂಧ್ರಪ್ರದೇಶ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ಒಳಗೊಂಡಿರುವ ದಕ್ಷಿಣ ವಲಯದ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳ (ಆರ್​ಆರ್​​ಬಿ) ಕಾರ್ಯಕ್ಷಮತೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ, ಅವರು ಅಭ್ಯರ್ಥಿಗಳಲ್ಲಿ ಸ್ಥಳೀಯ ಭಾಷೆಯ ಜ್ಞಾನ ಮತ್ತು ಪ್ರಾವೀಣ್ಯತೆ ಖಚಿತಪಡಿಸಿಕೊಳ್ಳಲು ಆರ್​ಆರ್​​ಬಿಗಳ ನೇಮಕಾತಿ ನಿಯಮಗಳನ್ನು ಪರಿಶೀಲಿಸಲು ಮತ್ತು ಅದನ್ನು ಸೂಕ್ತವಾಗಿ ಮಾರ್ಪಡಿಸಲು ಹಣಕಾಸು ಸೇವೆಗಳ ಇಲಾಖೆಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ 10 ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು (ಆರ್​ಆರ್​​ಬಿ) ಭಾಗವಹಿಸಿದವು. ವ್ಯವಹಾರದ ಕಾರ್ಯಕ್ಷಮತೆ, ಡಿಜಿಟಲ್ ತಂತ್ರಜ್ಞಾನ ಸೇವೆಗಳನ್ನು ಮೇಲ್ದರ್ಜೆಗೇರಿಸುವುದು ಮತ್ತು ಕೃಷಿ ಮತ್ತು ಸೂಕ್ಷ್ಮ ಮತ್ತು ಸಣ್ಣ ಉದ್ಯಮಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ವ್ಯವಹಾರ ಬೆಳವಣಿಗೆ ಉತ್ತೇಜಿಸುವ ಬಗ್ಗೆ ಸಭೆಯು ಕೇಂದ್ರೀಕರಿಸಿತು. ಗ್ರಾಮೀಣ ಆರ್ಥಿಕತೆ ಬೆಂಬಲಿಸುವಲ್ಲಿ ಆರ್​ಆರ್​​ಬಿಗಳ ಪ್ರಮುಖ ಪಾತ್ರವನ್ನು ಗಮನಿಸಿದ ಕೇಂದ್ರ ಹಣಕಾಸು ಸಚಿವರು, ತಮ್ಮ ಪ್ರಾಯೋಜಕ ಬ್ಯಾಂಕುಗಳ ಸಕ್ರಿಯ ಬೆಂಬಲದೊಂದಿಗೆ ಭಾರತ ಸರ್ಕಾರದ ವಿವಿಧ ಪ್ರಮುಖ ಯೋಜನೆಗಳಾದ ಮುದ್ರಾ, ಪ್ರಧಾನಮಂತ್ರಿ ವಿಶ್ವಕರ್ಮ ಇತ್ಯಾದಿಗಳ ಅಡಿಯಲ್ಲಿ ಸಾಲ ವಿತರಣೆ ಹೆಚ್ಚಿಸಲು ಆರ್​ಆರ್​​ಬಿಗಳನ್ನು ಒತ್ತಾಯಿಸಿದರು.

ಕೃಷಿ ಸಾಲ ವಿತರಣೆಯಲ್ಲಿನ ಪಾಲು ಹೆಚ್ಚಳಕ್ಕೆ ಸೂಚನೆ: 'ಒಂದು ರಾಜ್ಯ - ಒಂದು ಆರ್​ಆರ್​​ಬಿ' ಪರಿಕಲ್ಪನೆಯಡಿ ಆರ್​ಆರ್​​ಬಿಗಳ ವಿಲೀನದ ಪ್ರಸ್ತಾಪದ ಕುರಿತು ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಕೇಂದ್ರ ಹಣಕಾಸು ಸಚಿವರು ರಾಜ್ಯ ಸರ್ಕಾರಗಳಿಗೆ ಇದೇ ವೇಳೆ ಮನವಿ ಮಾಡಿದರು. ಜೊತೆಗೆ, ಸಭೆಯಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳಾದ ಹೈನುಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ ಮುಂತಾದವುಗಳ ಮೇಲೆ ವಿಶೇಷ ಗಮನಹರಿಸಿ, ತಳಮಟ್ಟದಲ್ಲಿ ಕೃಷಿ ಸಾಲ ವಿತರಣೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಗೆ ಸಚಿವರು ನಿರ್ದೇಶನ ನೀಡಿದರು.

ಅಲ್ಲದೇ, ಈ ಪ್ರದೇಶದಲ್ಲಿ ಕೃಷಿ ಸಂಬಂಧಿತ ಚಟುವಟಿಕೆಗಳ ಸಂಪೂರ್ಣ ಸಾಮರ್ಥ್ಯ ಬಳಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು. ವಿಶೇಷವಾಗಿ ಕೇರಳದ ಮೀನುಗಾರಿಕಾ ವಲಯ ಮತ್ತು ತೆಲಂಗಾಣದ ಡೈರಿ ವಲಯಕ್ಕೆ ಸಾಲ ವಿತರಣೆ ಹೆಚ್ಚಿಸಲು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಮತ್ತು ಪ್ರಾಯೋಜಕ ಬ್ಯಾಂಕುಗಳು ಆಯಾ ರಾಜ್ಯ ಸರ್ಕಾರದ ಇಲಾಖೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವಂತೆ ನಿರ್ದೇಶನ ನೀಡಲಾಯಿತು.

ಆರ್​ಆರ್​​ಬಿ ಬಲಪಡಿಸಲು ತಾಕೀತು: 2024ನೇ ಹಣಕಾಸು ವರ್ಷದ ಅವಧಿಯಲ್ಲಿ ದಕ್ಷಿಣ ವಲಯದ ಆರ್​ಆರ್​​ಬಿಗಳು 3,816 ಕೋಟಿ ರೂ.ಗಳ ಏಕೀಕೃತ ಲಾಭ ಗಳಿಸಿವೆ, ಇದು ಎಲ್ಲ ಆರ್​ಆರ್​​ಬಿಗಳ ಒಟ್ಟು ನಿವ್ವಳ ಏಕೀಕೃತ ಲಾಭದ ಶೇ.50ಕ್ಕಿಂತ ಹೆಚ್ಚಿದೆ. ಪರಿಶೀಲನೆಯ ಸಮಯದಲ್ಲಿ, ಚಾಲ್ತಿ ಖಾತೆಯ ಉಳಿತಾಯ ಖಾತೆ (ಸಿಎಎಸ್​​ಎ) ಠೇವಣಿಗಳನ್ನು ಹೆಚ್ಚಿಸುವ ಅಗತ್ಯತೆ, ಸುಸ್ಥಿರ ಸಾಲದ ಬೆಳವಣಿಗೆಯ ವೇಗ ಇನ್ನಷ್ಟು ವೇಗಗೊಳಿಸಲು ದಕ್ಷಿಣ ವಲಯದಲ್ಲಿ ಆರ್​ಆರ್​​ಬಿಗಳನ್ನು ಬಲಪಡಿಸುವ ಅಗತ್ಯತೆ ಬಗ್ಗೆ ತಾಕೀತು ಮಾಡಿದರು.

ಪ್ರಧಾನಮಂತ್ರಿ ಜನ್ ಧನ್ ಯೋಜನೆ, ಪ್ರಧಾನ್ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (ಪಿಎಂಜೆಜೆಬಿವೈ), ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (ಪಿಎಂ ಎಸ್​​ಬಿವೈ), ಅಟಲ್ ಪಿಂಚಣಿ ಯೋಜನೆ (ಎಪಿವೈ) ಮುಂತಾದ ಹಣಕಾಸು ಸೇರ್ಪಡೆ ಯೋಜನೆಗಳ ಅಡಿ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮುಂದುವರಿಸುವಂತೆ ಮತ್ತು ಆಯಾ ಗುರಿಗಳನ್ನು ಸಾಧಿಸುವಂತೆ ಸಚಿವರು ತಿಳಿಸಿದರು.

ತಂತ್ರಜ್ಞಾನದ ಉನ್ನತೀಕರಣಕ್ಕೆ ಶ್ಲಾಘನೆ: 10 ಆರ್​ಆರ್​​ಬಿಗಳು ಗ್ರಾಹಕ-ಕೇಂದ್ರಿತ ಡಿಜಿಟಲ್ ಸೇವೆಗಳಾದ ಮೈಕ್ರೋ-ಎಟಿಎಂಗಳು, ಕಾಲ್ ಸೆಂಟರ್​​ಗಳು, ನೆಟ್ ಬ್ಯಾಂಕಿಂಗ್, ವಿಡಿಯೋ ಕೆವೈಸಿ, ಆರ್​ಟಿಜಿಎಸ್‌, ಐಎಂಪಿಎಸ್, ಇತ್ಯಾದಿ ವಿವಿಧ ತಂತ್ರಜ್ಞಾನದ ಉನ್ನತೀಕರಣವನ್ನು ಪೂರ್ಣಗೊಳಿಸಿರುವುದಕ್ಕೆ ಕೇಂದ್ರ ಹಣಕಾಸು ಸಚಿವರು ಶ್ಲಾಘಿಸಿದರು. ಆಯಾ ಪ್ರಾಯೋಜಕ ಬ್ಯಾಂಕ್​ಗಳ ಸಹಾಯದಿಂದ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್​ಗಳು ಈ ಸೇವೆಗಳ ಬಳಕೆಯನ್ನು ತಮ್ಮ ಗ್ರಾಹಕರಲ್ಲಿ ಉತ್ತೇಜಿಸುವಂತೆ ಅವರು ಒತ್ತಾಯಿಸಿದರು.

ಇದನ್ನೂ ಓದಿ: ಶೀಘ್ರದಲ್ಲೇ MSMEಗಳಿಗಾಗಿ ₹100 ಕೋಟಿ ವರೆಗಿನ ಸಾಲ ಖಾತ್ರಿ ಯೋಜನೆ ಜಾರಿ: ನಿರ್ಮಲಾ ಸೀತಾರಾಮನ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.