ETV Bharat / sports

ಸಯ್ಯದ್​ ಮುಷ್ತಾಕ್ ಅಲಿ ಟ್ರೋಫಿ: 1 ರನ್ನಿಂದ ಶತಕ ತಪ್ಪಿಸಿಕೊಂಡ ಪಡಿಕ್ಕಲ್​! - ದೇವದತ್​ ಪಡಿಕ್ಕಲ್ 99

ಕರ್ನಾಟಕದ ರನ್​ ಮಷಿನ್​ ಎಂದೇ ಖ್ಯಾತರಾಗಿರುವ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಇಂದು ತ್ರಿಪುರ ವಿರುದ್ಧದ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನ್‌ಮೆಂಟ್​ನಲ್ಲಿ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದರು.

ದೇವದತ್​ ಪಡಿಕ್ಕಲ್​
ದೇವದತ್​ ಪಡಿಕ್ಕಲ್​
author img

By

Published : Jan 14, 2021, 3:16 PM IST

ಬೆಂಗಳೂರು: ಸಯ್ಯದ್​ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ತ್ರಿಪುರ ವಿರುದ್ಧದ ಪಂದ್ಯದಲ್ಲಿ ಕರ್ನಾಟಕದ ಯುವ ಬ್ಯಾಟ್ಸ್​ಮನ್​ ದೇವದತ್​ ಪಡಿಕ್ಕಲ್​ ಕೇವಲ ಒಂದು ರನ್​ನಿಂದ ತಮ್ಮ 2ನೇ ಟಿ20 ಶತಕ ತಪ್ಪಿಸಿಕೊಂಡರು.

ಟೂರ್ನಿಯ 3ನೇ ಪಂದ್ಯವನ್ನಾಡುತ್ತಿರುವ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ನಡೆಸಿ 20 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 167 ರನ್ ​ಗಳಿಸಿದೆ. ಎಲ್ಲಾ ಬ್ಯಾಟ್ಸ್​ಮನ್​ಗಳು ಕಳಪೆ ಪ್ರದರ್ಶನ ತೋರಿ ವಿಕೆಟ್​ ಒಪ್ಪಿಸಿದರೆ ಪಡಿಕ್ಕಲ್​ ಮಾತ್ರ ಕೊನೆಯ ಓವರ್​ವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದರು.

ಆರಂಭಿಕನಾಗಿ ಕಣಕ್ಕಿಳಿದಿದ್ದ ಅವರು 67 ಎಸೆತಗಳಲ್ಲಿ 9 ಬೌಂಡರಿ ಹಾಗೂ 4 ಸಿಕ್ಸರ್​ ಸಹಿತ 99 ರನ್​ಗಳಿಸಿ ಅಜೇಯರಾಗಿ ಉಳಿದರು. ಇವರಿಗೆ ಸೂಕ್ತ ಬೆಂಬಲ ನೀಡಿದ ರೋಹನ್ ಕದಂ 31 ರನ್ ​ಗಳಿಸಿದರು.

ದೇವದತ್​ ಪಡಿಕ್ಕಲ್​ ಕಳೆದ ಮುಷ್ತಾಕ್​ ಅಲಿ ಟೂರ್ನಿಯಲ್ಲಿ ಆಂಧ್ರ ಪ್ರದೇಶದ ವಿರುದ್ಧ 60 ಎಸೆತಗಳಲ್ಲಿ ಅಜೇಯ 122 ರನ್ ​ಗಳಿಸಿದ್ದರು. ಈ ವೇಳೆ ಅವರು 13 ಬೌಂಡರಿ ಹಾಗೂ 7 ಸಿಕ್ಸರ್​ ಸಿಡಿಸಿದ್ದರು. ಮೊದಲೆರಡು ಪಂದ್ಯಗಳಲ್ಲಿ ಕೇವಲ 17, 19 ರನ್​ಗಳಿಗೆ ಔಟ್​ ಆಗಿದ್ದ ಅವರು ಫಾರ್ಮ್​ಗೆ ಮರಳಿರುವುದು ತಂಡಕ್ಕೆ ಬಲ ತಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.