ಬೆಂಗಳೂರು: 70ರ ದಶಕದಲ್ಲಿ ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಟ ಟೆಸ್ಟ್ ಆಟಗಾರರಲ್ಲಿ ಒಬ್ಬರಾದ ಕನ್ನಡಿಗ ಜಿ.ಆರ್. ವಿಶ್ವನಾಥ್ಗೆ ಇಂದು 70ನೇ ಹುಟ್ಟು ಹಬ್ಬದ ಸಂಭ್ರಮ.
1949 ಫೆಬ್ರವರಿ 12ರಲ್ಲಿ ಭದ್ರಾವತಿಯಲ್ಲಿ ಜನಿಸಿದ ಗುಂಡಪ್ಪ ವಿಶ್ವನಾಥ್ ತಮ್ಮ 20ನೇ ವಯಸಿಗೆ ಅಂದರೆ 1969ರಲ್ಲಿ ಭಾರತ ಟೆಸ್ಟ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಭಾರತ ತಂಡದ ಪರ 91 ಟೆಸ್ಟ್ ಪಂದ್ಯಗಳನ್ನ ಆಡಿರುವ ವಿಶ್ವನಾಥ್ 6080 ರನ್ ಗಳಿಸಿದ್ದಾರೆ.
ಶತಗಗಳಿಸಿದ ಪಂದ್ಯದಲ್ಲಿ ಸೋಲೇ ಇಲ್ಲ:
ಜಿರ್ವಿ ತಮ್ಮ ಟೆಸ್ಟ್ ಕ್ರಿಕೆಟ್ನಲ್ಲಿ 35 ಅರ್ಧ ಶತಕ ಮತ್ತು 14 ಶತಕಗಳನ್ನು ಬಾರಿಸಿದ್ದಾರೆ. 222 ರನ್ ಗರಿಷ್ಠ ಸ್ಕೋರ್ ಆಗಿದೆ. ವಿಶೇಷವೆಂದರೆ ವಿಶ್ವನಾಥ್ ಶತಕ ಸಿಡಿಸಿರುವ ಯಾವೊಂದು ಪಂದ್ಯದಲ್ಲೂ ಭಾರತ ಸೋತಿಲ್ಲ ಎಂಬುದು ಗಮನಾರ್ಹ ಸಂಗತಿ. ಹಾಗೆ 25 ಏಕದಿನ ಪಂದ್ಯಗಳನ್ನ ಆಡಿರುವ ಅವರು 439ರನ್ ಪೇರಿಸಿದ್ದಾರೆ.
ಕಠಿಣ ಸಮಯಗಳಲ್ಲಿ ತಂಡಕ್ಕೆ ಆಸರೆಯಾಗಿ ನಿಲ್ಲುತ್ತಿದ್ದ ವಿಶ್ವನಾಥ್ ಹಲವು ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ. ಅಲ್ಲದೆ 1979-80ರಲ್ಲಿ ಭಾರತ ಟೆಸ್ಟ್ ತಂಡದ ನಾಯಕನಾಗಿಯೂ ತಂಡವನ್ನ ಮುನ್ನಡೆಸಿದ್ದಾರೆ.
ಸೋಲಿನಲ್ಲೂ ಕ್ರೀಡಾ ಸ್ಪೂರ್ತಿ ಮೆರೆದಿದ್ದ ಜಿಆರ್ವಿ:
ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯವೊಂದರಲ್ಲಿ ಪ್ರಮುಖ ವಿಕೆಟ್ಗಳನ್ನ ಕಳೆದುಕೊಂಡ ಇಂಗ್ಲೆಂಡ್ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಅಂಪೈರ್ ನೀಡಿದ ತಪ್ಪು ನಿರ್ಧಾರದಿಂದ ಔಟ್ ಆಗಿದ್ದ ಇಂಗ್ಲೆಂಡ್ ಆಟಗಾರ ಬಾಬ್ ಟೇಲರ್ ಅವರನ್ನ ವಾಪಾಸ್ ಕರೆಸಿ ಆಟವಾಡಲು ಅವಕಾಶ ನೀಡಿದ್ದರು. ಟೇಲರ್ ಅವರ ಉತ್ತಮ ಆಟದ ನೆರವಿನಿಂದ ಇಂಗ್ಲೆಂಡ್ ತಂಡ ಗೆಲುವು ಸಾಧಿಸಿತ್ತು. ಪಂದ್ಯ ಸೋತರು ಕ್ರೀಡಾ ಸ್ಪೂರ್ತಿ ಮೆರೆದ ವಿಶ್ವನಾಥ್ ಗುಣಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತಾವಾಗಿತ್ತು.
1983ರಲ್ಲಿ ಗುಂಡಪ್ಪ ವಿಶ್ವನಾಥ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದರು. ಮುಂದೆ ನಿವೃತ್ತಿಯ ನಂತರ ಐಸಿಸಿ ಪಂದ್ಯಗಳ ರೆಫ್ರಿಯಾಗಿ ಐದು ವರ್ಷ, ಆಯ್ಕೆದಾರರ ಸಮಿತಿಯಲ್ಲಿ ಹಲವು ವರ್ಷ ಕೆಲಸಮಾಡಿರುವುದರ ಜೊತೆಗೆ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತುದಾರರಾಗಿ ಸಹಾ ಉತ್ತಮ ಕೆಲಸ ಮಾಡಿದ್ದಾರೆ.
- " class="align-text-top noRightClick twitterSection" data="
">
ದಶಕಗಳ ಕಾಲ ಭಾರತ ಕ್ರಿಕೆಟ್ ತಂಡಕ್ಕೆ ತಮ್ಮ ಕೊಡುಗೆ ನೀಡಿರುವ ಕನ್ನಡಿಗ ಗುಂಡಪ್ಪ ವಿಶ್ವನಾಥ್ ಅವರ ಹುಟ್ಟು ಹಬ್ಬಕ್ಕೆ ಐಸಿಸಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಕೂಡ ಶುಭಾಷಯ ತಿಳಿಸಿದೆ.
Happy 70th birthday to one of India's finest batsmen, Gundappa Viswanath!
— ICC (@ICC) February 12, 2019 " class="align-text-top noRightClick twitterSection" data="
In 91 Tests between 1969 and 1983 he made 6,080 runs, with his best of 222 coming against England in Chennai in 1982. pic.twitter.com/SvJGBxYBWO
">Happy 70th birthday to one of India's finest batsmen, Gundappa Viswanath!
— ICC (@ICC) February 12, 2019
In 91 Tests between 1969 and 1983 he made 6,080 runs, with his best of 222 coming against England in Chennai in 1982. pic.twitter.com/SvJGBxYBWOHappy 70th birthday to one of India's finest batsmen, Gundappa Viswanath!
— ICC (@ICC) February 12, 2019
In 91 Tests between 1969 and 1983 he made 6,080 runs, with his best of 222 coming against England in Chennai in 1982. pic.twitter.com/SvJGBxYBWO