ನವದೆಹಲಿ: ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ಚೊಚ್ಚಲ ವಿಶ್ವಕಪ್ ಗೆದ್ದುಕೊಟ್ಟ ಹೀರೋ ಕಪಿಲ್ ದೇವ್ ಇದೀಗ ಚೇತರಿಸಿಕೊಂಡಿದ್ದು, ಇದರ ಬೆನ್ನಲ್ಲೇ ವಿಡಿಯೋ ಹರಿಬಿಟ್ಟು ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ಎದೆನೋವಿನ ಕಾರಣ ಅಕ್ಟೋಬರ್ 23ರಂದು ದೆಹಲಿಯ ಪೋರ್ಟಿಸ್ ಎಸ್ಕಾರ್ಟ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಇದಾದ ಬಳಿಕ ಚೇತರಿಸಿಕೊಂಡಿರುವ ಅವರು ಡಿಸ್ಚಾರ್ಜ್ ಆಗಿದ್ದು, ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.
-
Good to have you back @therealkapildev Paaji .. Best wishes for your movie ✌️ pic.twitter.com/EoBkAoPefT
— Suresh Raina🇮🇳 (@ImRaina) October 29, 2020 " class="align-text-top noRightClick twitterSection" data="
">Good to have you back @therealkapildev Paaji .. Best wishes for your movie ✌️ pic.twitter.com/EoBkAoPefT
— Suresh Raina🇮🇳 (@ImRaina) October 29, 2020Good to have you back @therealkapildev Paaji .. Best wishes for your movie ✌️ pic.twitter.com/EoBkAoPefT
— Suresh Raina🇮🇳 (@ImRaina) October 29, 2020
ಮನೆಯಿಂದಲೇ ವಿಡಿಯೋ ಹರಿಬಿಟ್ಟಿರುವ 1983 ವಿಶ್ವಕಪ್ ವಿಜೇತ ತಂಡದ ಕ್ಯಾಪ್ಟನ್ ಕಪಿಲ್ ದೇವ್, ಇದೀಗ ನಾನು ತುಂಬಾ ಆರೋಗ್ಯವಾಗಿದ್ದೇನೆ. ನಿಮ್ಮ ಹಾರೈಕೆ ಮತ್ತು ಕಾಳಜಿಗೆ ನಾನು ಧನ್ಯವಾದ ತಿಳಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ವಿಡಿಯೋವನ್ನ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಶೇರ್ ಮಾಡಿದ್ದಾರೆ.
1983ರ ವಿಶ್ವಕಪ್ ಗೆದ್ದ ತಂಡದ ಭೇಟಿಗೆ ಕಪಿಲ್ ಉತ್ಸುಕ
1983ರಲ್ಲಿ ಭಾರತಕ್ಕೆ ಚೊಚ್ಚಲ ವಿಶ್ವಕಪ್ ಗೆದ್ದು ಕೊಟ್ಟಿರುವ ತಂಡದ ನಾಯಕನಾಗಿದ್ದ ಕಪಿಲ್ ದೇವ್ ಇದೀಗ ಆ ತಂಡದ ಎಲ್ಲ ಸದಸ್ಯರ ಭೇಟಿಗೆ ನಿರ್ಧರಿಸಿದ್ದಾರೆ. 1983ರ ನನ್ನ ಕುಟುಂಬದವರೇ, ನಿಮ್ಮನ್ನೆಲ್ಲಾ ಭೇಟಿ ಮಾಡವುದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಆ ಸಂದರ್ಭ ನನಗೆ ತುಂಬಾ ಆಹ್ಲಾದಕರವಾಗಿರುತ್ತದೆ. ನಾನು ಆರಾಮವಾಗಿದ್ದೇವೆ. ನನ್ನ ಆರೋಗ್ಯ ಉತ್ತಮವಾಗಿದೆ. ನನ್ನ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು. ನಾವೆಲ್ಲರೂ ಆದಷ್ಟು ಬೇಗ ಭೇಟಿಯಾಗುತ್ತೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.